ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್

|
Google Oneindia Kannada News

ಭೋಪಾಲ್, ಡಿಸೆಂಬರ್ 07: ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳ ಸರಾಸರಿಯಂತೆ ಆಡಳಿತರೂಢ ಬಿಜೆಪಿಗೆ ಬಹುಮತ ಸಿಗುವ ನಿರೀಕ್ಷೆ ಮೂಡಿತ್ತು. ಆದರೆ, ಮತದಾನದ ಬಳಿಕ ಕಂಡು ಬಂದ ಚಿತ್ರಣವೇ ಬೇರೆ.

ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೊಂದು ಅವಧಿಗೆ ಆಯ್ಕೆಯಾಗುವ ಬಗ್ಗೆ ಈಗ ಅನುಮಾನ ಮೂಡಿದೆ. ಆದರೆ, ಇನ್ನೊಂದೆಡೆ ಕಾಂಗ್ರೆಸ್ ಕೂಡಾ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸುವ ಸಾಧ್ಯತೆಯೂ ಇದೆ. ಹೀಗಾಗಿ, ಮ್ಯಾಜಿಕ್ ನಂಬರ್(116) ಮರೀಚಿಕೆಯಾಗಿದೆ ಎಂದು ಎಕ್ಸಿಟ್ ಪೋಲ್ ಗಳು ಸಾರಿವೆ.

ಮಧ್ಯಪ್ರದೇಶ ಎಕ್ಸಿಟ್ ಪೋಲ್ : ಬಿಜೆಪಿ- ಕಾಂಗ್ರೆಸ್ ಸಮಬಲ ಫೈಟ್ಮಧ್ಯಪ್ರದೇಶ ಎಕ್ಸಿಟ್ ಪೋಲ್ : ಬಿಜೆಪಿ- ಕಾಂಗ್ರೆಸ್ ಸಮಬಲ ಫೈಟ್

ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಶೇ 75ರಷ್ಟು ಮತದಾನದ ದಾಖಲಾಯಿತು. ಬಿಜೆಪಿ 230 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ 229ರಲ್ಲಿ ಸ್ಪರ್ಧಿಸಿದ್ದರೆ, ತಿಕ್ಮಾಘರ್ ಜಿಲ್ಲೆಯ ಜತಾರಾ ಸೀಟನ್ನು ಶರದ್ ಯಾದವ್ ನೇತೃತ್ವದ ಲೋಕ್ ತಾಂತ್ರಿಕ್ ಜನತಾ ದಳ(ಎಲ್ ಜೆಡಿ)ಗೆ ಬಿಟ್ಟುಕೊಟ್ಟಿತ್ತು. ಎಕ್ಸಿಟ್ ಪೋಲ್ ಗಳ ಸರಾಸರಿಯಂತೆ ಯಾವ ಪಕ್ಷವು ಅಧಿಕಾರಕ್ಕೆ ಹತ್ತಿರವಾಗಲಿದೆ? ಸರ್ಕಾರ ರಚಿಸುವಲ್ಲಿ ಪಕ್ಷೇತರರ ಪಾತ್ರವೇನು? ಮುಂದೆ ಓದಿ..

ಮಧ್ಯಪ್ರದೇಶದಲ್ಲಿ ಬಲಾಬಲ

ಮಧ್ಯಪ್ರದೇಶದಲ್ಲಿ ಬಲಾಬಲ

ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. ಕಳೆದ 15 ವರ್ಷಗಳಿಂದ ಬಿಜೆಪಿ ನೇತೃತ್ವದ ಸರ್ಕಾರವನ್ನು ಶಿವರಾಜ್ ಸಿಂಗ್ ಚೌಹಾಣ್ ಅವರು ಮುನ್ನಡೆಸುತ್ತಿದ್ದಾರೆ.

2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

2013ರಲ್ಲಿ ಶೇಕಡಾವಾರು ಮತ ಗಳಿಕೆ : ಬಿಜೆಪಿ ಶೇ 44.68, ಕಾಂಗ್ರೆಸ್ ಶೇ 36.38
ಶೇಕಡಾವಾರು ಮತಗಳಿಕೆ

ಶೇಕಡಾವಾರು ಮತಗಳಿಕೆ

ಎಬಿಪಿ -ಸಿಎಸ್ ಡಿಎಸ್ ಸಮೀಕ್ಷೆಯಂತೆ
ಬಿಜೆಪಿ :94; ಕಾಂಗ್ರೆಸ್ : 126; ಇತರೆ: 10

ಶೇಕಡಾವಾರು ಮತಗಳಿಕೆ: ಬಿಜೆಪಿ 40%; ಕಾಂಗ್ರೆಸ್ 43%; ಇತರೆ 17%

ಆದರೆ, 2013ರ ಫಲಿತಾಂಶಕ್ಕೆ ಹೋಲಿಸಿದರೆ, ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಹಿಂದೆ ಬೀಳಲಿದೆ.
ಬಿಜೆಪಿ : 126; ಕಾಂಗ್ರೆಸ್ 89; ಬಿಎಸ್ಪಿ : 6; ಇತರೆ : 9
* ಬಿಜೆಪಿ ಶೇ 45.20(2013ರಲ್ಲಿ ಶೇ44.88) * ಕಾಂಗ್ರೆಸ್ ಶೇ 36.38 (2013ರಲ್ಲಿ 38.33)

ಆಡಳಿತ ವಿರೋಧಿ ಅಲೆ

ಆಡಳಿತ ವಿರೋಧಿ ಅಲೆ

ಕಳೆದ 15 ವರ್ಷಗಳಿಂದ ಆಡಳಿತದಲ್ಲಿರುವ ಶಿವರಾಜ್ ಸಿಂಗ್ ಅವರ ಸರ್ಕಾರದ ವಿರುದ್ಧ ಜನತೆ ಆಕ್ರೋಶಕ್ಕಿಂತ ಬೇಸತ್ತಿದ್ದಾರೆ. ಆಡಳಿತ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್ ಭರ್ಜರಿಯಾಗಿ ಪ್ರಚಾರ ನಡೆಸಿತ್ತು. ಜೊತೆಗೆ ರೈತರ ಆತ್ಮಹತ್ಯೆ ಕೂಡಾ ಬಿಜೆಪಿ ಸರ್ಕಾರಕ್ಕೆ ಮುಳುವಾಗಿರುವ ಸಾಧ್ಯತೆಯಿದೆ.

ಪ್ರಮುಖ ಕ್ಷೇತ್ರಗಳು

ಪ್ರಮುಖ ಕ್ಷೇತ್ರಗಳು

ಮಂದಸೌರ್ ರೈತರ ಸಂಘರ್ಷದ ಕೇಂದ್ರ ಸ್ಥಾನವಾಗಿದೆ. 2017ರ ಜೂನ್ ತಿಂಗಳಿನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. 6 ಮಂದಿ ಪ್ರತಿಭಟನಾಕಾರರನ್ನು ಬಲಿ ಪಡೆದ ಸರ್ಕಾರದ ವಿರುದ್ಧ ಮತ ಹಾಕುವಂತೆ ಕಾಂಗ್ರೆಸ್ ಪ್ರಚಾರ ನಡೆಸಿದೆ. ಈ ಪ್ರತಿಭಟನೆಯ ಒಂದು ವರ್ಷದ ಕಹಿನೆನಪಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಭಾಗಿಯಾಗಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು. ಇದರ ಜೊತೆಗೆ ಬೆಟುಲ್, ಶಿವಪುರಿ, ಬುಧ್ನಿ, ವಾರಸೋನಿ ಕ್ಷೇತ್ರಗಳಲ್ಲಿ ಗೆಲ್ಲುವವರು ಅಧಿಕಾರ ಯಾರು ಹಿಡಿಯಲಿದ್ದಾರೆ ಎಂಬುದನ್ನು ನಿರ್ಧರಿಸಲಿದ್ದಾರೆ.

English summary
Madhya Pradesh Assembly Election 2018 : Poll of Poll is too close to call, its hung assembly. Magic number required to form the government is 116. Exit polls suggest BJP(109), Congress 112 failed to cross the magic line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X