ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಬಾಲಕಿ ರಕ್ಷಿಸಲು ಹೋಗಿ ಬಾವಿಗೆ ಜಾರಿದ 30 ಜನರು

|
Google Oneindia Kannada News

ಭೋಪಾಲ್, ಜುಲೈ 16: ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸುವುದಕ್ಕೆ ಹೋಗಿ 30ಕ್ಕೂ ಹೆಚ್ಚು ಮಂದಿ ಬಾವಿಗೆ ಹಾರಿದ್ದು ಈ ಪೈಕಿ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಮಧ್ಯಪ್ರದೇಶ ವಿಧಿಶಾದ ಗಂಜ್ ಬಸೋದಾ ಎಂಬ ಪ್ರದೇಶದಲ್ಲಿ ನಡೆದಿದೆ.

Recommended Video

ಬಾವಿಗೆ ಬಿದ್ದ ಮಗುವಿನ ರಕ್ಷಣಾಕಾರ್ಯಾಚರಣೆ ನೋಡಲು ಬಂದಿದ್ದ 30ಕ್ಕೂ ಅಧಿಕ ಮಂದಿ ಬಾವಿಗೆ ಬಿದ್ದು ದುರಂತ!

ಜಿಲ್ಲಾ ಕೇಂದ್ರದಿಂದ 50 ಕಿಲೋ ಮೀಟರ್ ದೂರದಲ್ಲಿ ಈ ಗಂಜ್ ಬಸೋದಾ ಪ್ರದೇಶವಿದೆ. 50 ಅಡಿ ಆಳದ ಬಾವಿಯಲ್ಲಿ 20 ಅಡಿಯಷ್ಟು ನೀರು ತುಂಬಿತ್ತು ಎಂದು ಸ್ಥಳೀಯರು ಹೇಳುತ್ತಿದ್ದು, ಬಾವಿಗೆ ಬಿದ್ದವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬಾವಿಗೆ ಹಾರಿದ 30ಕ್ಕೂ ಹೆಚ್ಚು ಜನರ ಪೈಕಿ ನಾಲ್ವರು ಮೃತಪಟ್ಟಿದ್ದು, 19 ಜನರನ್ನು ರಕ್ಷಿಸಲಾಗಿದೆ. ಇನ್ನೂ 13 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ದುರಂತ ನಡೆದಿರುವುದು ಹೇಗೆ?

ಈ ದುರಂತ ನಡೆದಿರುವುದು ಹೇಗೆ?

"ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಬಾಲಕಿಯೊಬ್ಬಳು ಬಾವಿಗೆ ಬಿದ್ದಿದ್ದಳು. ಆ ಬಾಲಕಿ ರಕ್ಷಿಸುವುದಕ್ಕಾಗಿ ಕೆಲವರು ಬಾವಿಗೆ ಇಳಿದರೆ ಇತರರು ಸಹಾಯ ಮಾಡುವುದಕ್ಕಾಗಿ ಸುತ್ತಲಿನ ಪ್ಯಾರಪೆಟ್ ಗೋಡೆ ಮೇಲೆ ನಿಂತಿದ್ದರು. ಈ ಗೋಡೆಯು ದಿಢೀರನೇ ಕುಸಿದಿದ್ದು, ಅದರ ಮೇಲೆ ನಿಂತವರೆಲ್ಲ ಬಾವಿಗೆ ಬಿದ್ದರು. ಈ ಪೈಕಿ ಕೆಲವರು ಅವಶೇಷಗಳ ಅಡಿ ಸಿಲುಕಿದರು ಎಂಬ ಆತಂಕವಿದೆ," ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. "ರಾತ್ರಿ 11 ಗಂಟೆ ವೇಳೆಗೆ ನಾಲ್ವರು ಪೊಲೀಸರನ್ನೊಳಗೊಂಡ ಮೊದಲ ತಂಡವು ಟ್ರ್ಯಾಕ್ಟರ್ ಬಳಸಿ ಬಾವಿಗೆ ಬಿದ್ದವರ ರಕ್ಷಣಾ ಕಾರ್ಯಾಚರಣೆ ಶುರು ಮಾಡಲಾಗಿತ್ತು," ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಚುರುಕುಗೊಂಡ ರಕ್ಷಣಾ ಕಾರ್ಯಾಚರಣೆ

ಚುರುಕುಗೊಂಡ ರಕ್ಷಣಾ ಕಾರ್ಯಾಚರಣೆ

ವಿಧಿಶಾದ ಗಂಜ್ ಬಸೋದಾ ಪ್ರದೇಶದಲ್ಲಿ ಗುರುವಾರ ಸಂಜೆಯೇ ಈ ಘಟನೆ ನಡೆದಿದ್ದು, ಬಾವಿಗೆ ಬಿದ್ದ 30ಕ್ಕೂ ಹೆಚ್ಚು ಜನರ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಈ ವಿಷಯ ತಿಳಿಯುದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸೂಚನೆ ಮೇರೆಗೆ ಸಚಿವ ವಿಶ್ವಾಸ್ ಸಾರಂಗ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.

ಘಟನೆ ಕುರಿತು ಸಚಿವ ವಿಶ್ವಾಸ್ ಸಾರಂಗ್ ಸ್ಪಷ್ಟನೆ

ಘಟನೆ ಕುರಿತು ಸಚಿವ ವಿಶ್ವಾಸ್ ಸಾರಂಗ್ ಸ್ಪಷ್ಟನೆ

"ಈವರೆಗೂ 19 ಜನರನ್ನು ರಕ್ಷಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯೂ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತಿದ್ದು, ಕಾರ್ಯಾಚರಣೆ ಪೂರ್ಣಗೊಳ್ಳುವ ತನಕ ಅಸಲಿ ಕಾರಣವೇನು ಎಂದು ಹೇಳುವುದಕ್ಕೆ ಸಾಧ್ಯವಾಗದು," ಎಂದು ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

ಮಧ್ಯಪ್ರದೇಶದ ಗಂಜ್ ಬಸೋದಾದಲ್ಲಿ ನಡೆದ ಘಟನೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸಂತಾಪ ಸೂಚಿಸಿದ್ದಾರೆ. ಬಾವಿಗೆ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇದರ ಜೊತೆ ಗಾಯಗೊಂಡವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಹಾಗೂ 50,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

English summary
Madhya Pradesh: 30 People Fall Into Well While Rescuing Girl, 4 Died, 19 rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X