ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ಜ್ಯೋತಿರಾದಿತ್ಯ ಸಿಂಧಿಯಾ ರಾಜಕೀಯ ಭವಿಷ್ಯ

|
Google Oneindia Kannada News

ಕಾಂಗ್ರೆಸ್ಸಿನ ಯಾವುದೇ ಮುಖಂಡ ಅಥವಾ ಕಾರ್ಯಕರ್ತ ಜ್ಯೋತಿರಾದಿತ್ಯ ಸಿಂಧಿಯಾನಂತಹ ವರ್ಚಸ್ವೀ ಮುಖಂಡ ಪಕ್ಷ ತೊರೆಯುತ್ತಾರೆ ಎಂದು ಊಹಿಸಿರಲಿಕ್ಕಿಲ್ಲ. ಗಾಂಧಿ ಕುಟುಂಬದ ಪರಮಾಪ್ತರಾಗಿದ್ದ ಸಿಂಧಿಯಾ ಪಕ್ಷವನ್ನು ತೊರೆದಿದ್ದರು.

ಪಕ್ಷವನ್ನು ತೊರೆದಿದ್ದಷ್ಟೇ ಅಲ್ಲದೇ ತನ್ನ ಜೊತೆ ಗುರುತಿಸಿಕೊಂಡಿರುವ ಶಾಸಕರನ್ನೂ ಬಿಜೆಪಿಗೆ ಸೇರ್ಪಡೆಗೊಳಿಸಿದ್ದರು. ಹಾಗಾಗಿ, ಮಧ್ಯಪ್ರದೇಶದ ಕಮಲ್ ನಾಥ್ ಸರಕಾರ ಪತನಗೊಂಡು, ಮತ್ತೆ, ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಆಗಿದ್ದರು.

ನಿಮಗೆ ಅಧಿಕಾರ ಕೊಟ್ಟವರು ಯಾರು?: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂಕೋರ್ಟ್ ಕಿಡಿನಿಮಗೆ ಅಧಿಕಾರ ಕೊಟ್ಟವರು ಯಾರು?: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂಕೋರ್ಟ್ ಕಿಡಿ

ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಲು ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದೇ ಕಾರಣ ಎನ್ನುವುದು ಸ್ಪಷ್ಟ. ಇದರಿಂದಾಗಿ, ಚೌಹಾಣ್ ಸರಕಾರದ ಮೇಲೂ ತಮ್ಮ ಹಿಡಿತವನ್ನು ಸಿಂಧಿಯಾ ಸಾಧಿಸುತ್ತಾ ಬಂದಿದ್ದಾರೆ.

"ಸಿಎಂ ಮತ್ತು ನಾನು ಕೈಜೋಡಿಸಿದ ಮೇಲೆ ಪ್ರತಿಪಕ್ಷಕ್ಕೇನು ಕೆಲಸ"

ಶಿವರಾಜ್ ಚೌಹಾಣ್ ಸಿಎಂ ಆದ ನಂತರ, ಕ್ಯಾಬಿನೆಟ್ ವಿಸ್ತರಣೆಯ ವೇಳೆಯೂ ತನ್ನ ಜೊತೆಗೆ ಬಂದಿದ್ದವರಿಗೆ ಆಯಕಟ್ಟಿನ ಹುದ್ದೆಯನ್ನು ಕೊಡಿಸುವಲ್ಲೂ ಸಿಂಧಿಯಾ ಮೇಲುಗೈ ಸಾಧಿಸಿದ್ದರು. ಈಗ, ಅವರಿಗೆ ನಿಜವಾದ ಸತ್ವ ಪರೀಕ್ಷೆ ಎದುರಾಗಿದೆ.

ಕಾಂಗ್ರೆಸ್ ತೊರೆದ 28 ಶಾಸಕರು ಮತ್ತೆ ಚುನಾವಣೆ ಎದುರಿಸಬೇಕಾಗಿದೆ

ಕಾಂಗ್ರೆಸ್ ತೊರೆದ 28 ಶಾಸಕರು ಮತ್ತೆ ಚುನಾವಣೆ ಎದುರಿಸಬೇಕಾಗಿದೆ

ಕಾಂಗ್ರೆಸ್ ತೊರೆದ 28 ಶಾಸಕರು ಮತ್ತೆ ಚುನಾವಣೆ ಎದುರಿಸಬೇಕಾಗಿದೆ. ಇವರನ್ನು ಗೆಲ್ಲಿಸುವ ಗುರುತರ ಜವಾಬ್ದಾರಿ ಜ್ಯೋತಿರಾದಿತ್ಯ ಸಿಂಧಿಯಾ ಮೇಲಿದೆ. ಚುನಾವಣೆ ನಡೆಯುವ ಕ್ಷೇತ್ರಗಳು ಬಹುತೇಕ ತಮ್ಮ ಹಿಡಿತವಿರುವ ಕ್ಷೇತ್ರವಾದರೂ, ಉಪಚುನಾವಣೆಯಲ್ಲಿ ಮತದಾರರ ನಾಡಿಮಿಡಿತವನ್ನು ಅರಿತವರಾರು?

ಉಪಚುನಾವಣೆಯ ಫಲಿತಾಂಶ

ಉಪಚುನಾವಣೆಯ ಫಲಿತಾಂಶ

ಈ ಉಪಚುನಾವಣೆಯ ಫಲಿತಾಂಶದ ಮೇಲೆ ಶಿವರಾಜ್ ಸಿಂಗ್ ಸರಕಾರದ ಭವಿಷ್ಯ ಹೇಗೆ ಅಡಗಿದೆಯೋ ಅದೇ ರೀತಿ ಜ್ಯೋತಿರಾದಿತ್ಯ ಸಿಂಧಿಯಾ ಮುಂದಿನ ರಾಜಕೀಯ ಕೂಡಾ. ಎಲ್ಲಾ ಪಕ್ಷಾಂತರಿಗಳು ಚುನಾವಣೆ ಗೆದ್ದರೆ, ಸರಕಾರ ಕೂಡಾ ಸೇಫ್ ಮತ್ತು ಸಿಂಧಿಯಾ ಕೂಡಾ ಅಷ್ಟೇ ರಾಜ್ಯ ರಾಜಕೀಯದಲ್ಲಿ ಹಿಡಿತ ಸಾಧಿಸಲಿದ್ದಾರೆ.

ರಾಜಕೀಯ ಕರ್ಮಭೂಮಿ ಗ್ವಾಲಿಯರ್ ನಲ್ಲಿ ಕೂಡಾ ಉಪಚುನಾವಣೆ

ರಾಜಕೀಯ ಕರ್ಮಭೂಮಿ ಗ್ವಾಲಿಯರ್ ನಲ್ಲಿ ಕೂಡಾ ಉಪಚುನಾವಣೆ

28ಕ್ಷೇತ್ರಗಳ ಪೈಕಿ ತನ್ನ ರಾಜಕೀಯ ಕರ್ಮಭೂಮಿ ಗ್ವಾಲಿಯರ್ ನಲ್ಲಿ ಕೂಡಾ ಉಪಚುನಾವಣೆ ನಡೆಯಲಿದೆ. ಗ್ವಾಲಿಯರ್ ಮತ್ತು ಪೂರ್ವ ಗ್ವಾಲಿಯರ್ ಕ್ಷೇತ್ರದ ಚುನಾವಣೆ ಕೂಡಾ ನಡೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇನ್ನು, ಮಾಯಾವತಿ ನೇತೃತ್ವದ ಬಿಎಸ್ಪಿ ಎಷ್ಟರ ಮಟ್ಟಿಗೆ ಎರಡು ಪಕ್ಷಗಳಿಗೆ ತೊಂದರೆಯೊಡ್ಡಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.

ನವೆಂಬರ್ ಮೂರರಂದು ಚುನಾವಣೆ

ನವೆಂಬರ್ ಮೂರರಂದು ಚುನಾವಣೆ

ನವೆಂಬರ್ ಮೂರರಂದು ಚುನಾವಣೆ ನಡೆಯುತ್ತಿದ್ದು, ನವೆಂಬರ್ ಹತ್ತರಂದು ಫಲಿತಾಂಶ ಹೊರಬೀಳಲಿದೆ. ಬಾಯಿತಪ್ಪಿ ಕಾಂಗ್ರೆಸ್ಸಿಗೆ ಮತನೀಡಿ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದರು. ಮತದಾರ ಅದನ್ನೇ ಮಾಡಿದ್ದೇ ಆದಲ್ಲಿ, ಸರಕಾರ ಪತನಕ್ಕೆ ನಾಂದಿಯಾಗಬಹುದು ಮತ್ತು ಸಿಂಧಿಯಾ ರಾಜಕೀಯ ಭವಿಷ್ಯ ಕೂಡಾ ಮಂಕಾಗಬಹುದು.

English summary
Madhya Pradesh 28 Assembly Seats Bypoll: Crucial For Not Only BJP And Also Jyotiraditya Scindia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X