ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಮಗ ಬರೋಬ್ಬರಿ 660 ಕೋಟಿ ರೂಪಾಯಿ ಒಡೆಯ!

|
Google Oneindia Kannada News

ಚಿಂದ್ವಾರಾ, ಏಪ್ರಿಲ್ 10: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ನಕುಲ್ ನಾಥ್ ಮಂಗಳವಾರ ಚಿಂದ್ವಾರಾ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅವರ ಚರ ಮತ್ತು ಸ್ಥಿರ ಆಸ್ತಿಯ ಒಟ್ಟು ಮೌಲ್ಯ 660 ಕೋಟಿ ರೂಪಾಯಿ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ನಾಮಪತ್ರದೊಂದಿಗೆ ನಕುಲ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವ ಆಸ್ತಿ ವಿವರಗಳು ಬೆರಗು ಮೂಡಿಸುತ್ತದೆ. ಏಕೆಂದರೆ ಅವರ ಆಸ್ತಿ ಅವರ ಪೊಷಕರ ಆಸ್ತಿಗಿಂತ ಐದು ಪಟ್ಟು ಹೆಚ್ಚು. ಮುಖ್ಯಮಂತ್ರಿ ಕಮಲ್ ನಾಥ್ ಅವರ ಅಫಿಡವಿಟ್ ಪ್ರಕಾರ ಅವರ ಬಳಿ ಇರುವ ಆಸ್ತಿ 124 ಕೋಟಿ ರೂಪಾಯಿ.

ಬಿಜೆಪಿ ಫೈರ್ ಬ್ರಾಂಡ್ ಅನಂತ್‌ಕುಮಾರ್ ಹೆಗಡೆ ಆಸ್ತಿ ಎಷ್ಟು?ಬಿಜೆಪಿ ಫೈರ್ ಬ್ರಾಂಡ್ ಅನಂತ್‌ಕುಮಾರ್ ಹೆಗಡೆ ಆಸ್ತಿ ಎಷ್ಟು?

ಉದ್ಯಮಿಯಾಗಿದ್ದ ನಕುಲ್ ನಾಥ್ 615.93 ಕೋಟಿ ರೂಪಾಯಿಗೂ ಹೆಚ್ಚು ಚರ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಪ್ರಿಯಾ ನಾಥ್ ಅವರ ಚರ ಆಸ್ತಿ ಅಫಿಡವಿಟ್ ಪ್ರಕಾರ 2.30 ಕೋಟಿ ರೂಪಾಯಿ.

lok sabha elections 2019 madhya pradesh cm kamal nath son Chhindwara nakul nath assets Rs 660 crore

ನಕುಲ್ ಅವರ ಬಳಿ 41.77 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಇದೆ. ಅವರ ಪತ್ನಿ ಪ್ರಿಯಾ ಯಾವುದೇ ಸ್ಥಿರ ಆಸ್ತಿ ಹೊಂದಿಲ್ಲ.

ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ ನಕುಲ್ ಈ ಆಸ್ತಿಗಳನ್ನು ತಮ್ಮದೇ ಹೆಸರಿನಲ್ಲಿ, ಜಂಟಿ ಹೆಸರು ಮತ್ತು ಕುಟುಂಬದ ನಿಯಂತ್ರಣವಿರುವ ಕಂಪೆನಿ ಹಾಗೂ ಟ್ರಸ್ಟ್‌ಗಳ ಹೆಸರಿನಲ್ಲಿ ಹೊಂದಿದ್ದಾರೆ. ನಕುಲ್ ಮತ್ತು ಪ್ರಿಯಾ ಅವರು ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಹೊಂದಿಲ್ಲ.

ಅಸಾದುದ್ದೀನ್ ಒವೈಸಿ ಆಸ್ತಿ ಘೋಷಣೆ, 13ಕೋಟಿ ರು ಮೌಲ್ಯ, ಕಾರು ಹೊಂದಿಲ್ಲ ಅಸಾದುದ್ದೀನ್ ಒವೈಸಿ ಆಸ್ತಿ ಘೋಷಣೆ, 13ಕೋಟಿ ರು ಮೌಲ್ಯ, ಕಾರು ಹೊಂದಿಲ್ಲ

896.669 ಗ್ರಾಮ್‌ ಚಿನ್ನ, 7.630 ಕೆಜಿ ಬೆಳ್ಳಿ, 147.58 ಕ್ಯಾರಟ್ ವಜ್ರ ಮತ್ತು 78.45 ಲಕ್ಷ ಮೌಲ್ಯದ ಸ್ಟೋನ್ ಆಭರಣ ನಕುಲ್ ಅವರಲ್ಲಿದೆ. ಅವರ ಪತ್ನಿ ಬಳಿ 270.322 ಗ್ರಾಂ ಚಿನ್ನ, 161.84 ಕ್ಯಾರಟ್ ವಜ್ರ ಮತ್ತು 57.62 ಲಕ್ಷ ರೂ ಮೌಲ್ಯದ ಸ್ಟೋನ್ ಆಭರಣ ಇದೆ.

2017-18ನೇ ಸಾಲಿನಲ್ಲಿ ಸಲ್ಲಿಸಿದ ಆದಾಯ ತೆರಿಗೆ ವಿವರದ ಪ್ರಕಾರ ನಕುಲ್ ನಾಥ್ ತಮ್ಮ ವಾರ್ಷಿಕ ಆದಾಯವನ್ನು 2.76 ಕೋಟಿ ರೂ. ಮತ್ತು ಪತ್ನಿಯ ವಾರ್ಷಿಕ ಆದಾಯವನ್ನು 4.18 ಕೋಟಿ ರೂ. ಎಂದು ದಾಖಲಿಸಿದ್ದಾರೆ.

ವಿವಿಧೆಡೆ ಬ್ಯಾಂಕ್ ಖಾತೆಗಳಲ್ಲಿ ಅವರು ಠೇವಣಿ ಇರಿಸಿದ್ದಾರೆ. ದುಬೈ ಮತ್ತು ಶಾರ್ಜಾಗಳಲ್ಲಿ ಇರುವ ಐಎಂಟಿ ಸಂಸ್ಥೆ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ.

ಚಿಂದ್ವಾರಾ ಜಿಲ್ಲೆಯಲ್ಲಿ ನಕುಲ್ ಮತ್ತು ಅವರ ಸಹೋದರ ಜಂಟಿಯಾಗಿ 7.82 ಎಕರೆ ಭೂಮಿ ಹೊಂದಿದ್ದಾರೆ.

 ಯವ್ವಿ ಯವ್ವಿ!ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಯ ಆಸ್ತಿ 300 ಕೋಟಿ ರೂ! ಯವ್ವಿ ಯವ್ವಿ!ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಯ ಆಸ್ತಿ 300 ಕೋಟಿ ರೂ!

ಸ್ವಂತ ವೆಬ್‌ಸೈಟ್, ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಗೂಗಲ್ ಪ್ಲಸ್ ಮತ್ತು ಬ್ಲಾಗ್ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ನಕುಲ್ ಚುನಾವಣೆಗೆ ಇಳಿದಿದ್ದಾರೆ. ಚಿಂದ್ವಾರಾ ಲೋಕಸಭೆ ಕ್ಷೇತ್ರದಲ್ಲಿ ಅವರು ಬುಡಕಟ್ಟು ಮುಖಂಡ ಮತ್ತು ಮಾಜಿ ಶಾಸಕ ಬಿಜೆಪಿಯ ನಥನ್ ಶಾ ಎದುರು ಸ್ಪರ್ಧಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಕುಲ್ ಅಮೆರಿಕದ ಬಾಸ್ಟನ್‌ನಲ್ಲಿರುವ ಬೇ ಸ್ಟೇಟ್ ಕಾಲೇಜ್‌ನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.

English summary
lok sabha elections 2019: Madhya Pradesh Chief Minister Kamal Nath's son Nakul Nath filed his nomination from Chhindwara constituency. He has assets worth over Rs 660.01 crore as per his affidavit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X