ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಬಿಜೆಪಿ ಸಾದ್ವಿ ಪ್ರಜ್ಞಾ ಸಿಂಗ್ ಮುನ್ನಡೆ

|
Google Oneindia Kannada News

ಭೋಪಾಲ್, ಮೇ 23: ಮಧ್ಯಪ್ರದೇಶದ ಭೋಪಾಲ್‌ ನಿಂದ ಸ್ಪರ್ಧಿಸಿದ್ದ ಬಿಜೆಪಿಯ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಭಾರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.

ಟಿಕೆಟ್ ಪಡೆದುಕೊಳ್ಳುವುದರಿಂದ ಹಿಡಿದು ವಿವಾದಗಳಿಂದಲೇ ಸುದ್ದಿಯಾಗಿದ್ದ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾಂಗ್ರೆಸ್‌ನ ಎದುರಾಳಿ ದಿಗ್ವಿಜಯ್ ಸಿಂಗ್ ಅವರಿಗಿಂತಲೂ ಭಾರಿ ಮುನ್ನಡೆಯನ್ನೇ ಸಾಧಿಸಿದ್ದಾರೆ.

ಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಚಂದ್ರಬಾಬು ನಾಯ್ಡು ರಾಜೀನಾಮೆಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಚಂದ್ರಬಾಬು ನಾಯ್ಡು ರಾಜೀನಾಮೆ

ಪ್ರಜ್ಞಾ ಅವರು 2,50,624 ಮತಗಳನ್ನು ಗಳಿಸಿದ್ದರೆ, ದಿಗ್ವಿಜಯ್ ಸಿಂಗ್ ಅವರು 1,82,976 ಮತಗಳನ್ನು ಗಳಿಸಿದ್ದಾರೆ. ಆ ಮೂಲಕ ಸುಮಾರು 70,000 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

lok sabha election results 2019: Bhopal constituency updates

ಮಲೆಗಾಂವ್ ಸ್ಫೋಟದ ಆರೋಪಿಯಾಗಿದ್ದ ಪ್ರಜ್ಞಾ ಸಿಂಗ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಮೊದಲಿಗೆ ಸಾಕಷ್ಟು ವಿವಾದ ಹುಟ್ಟಿಸಿತ್ತು, ಟಿಕೆಟ್ ಗೊತ್ತಾದ ಬಳಿಕವೂ ಪ್ರಚಾರ ಸಮಯದಲ್ಲಿ ಅವರ ಹೇಳಿಕೆಗಳು ಭಾರಿ ಟೀಕೆಗೆ ಗುರಿಯಾಗಿದ್ದವು.

ಗೋಡ್ಸೆಯನ್ನು ದೇಶ ಪ್ರೇಮಿ ಎಂದಿದ್ದ ಸಾದ್ವಿ ಅವರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು, ಸ್ವತಃ ಮೋದಿ ಅವರೇ ಸಾದ್ವಿಯನ್ನು ಕ್ಷಮಿಸುವುದಿಲ್ಲ ಎಂದಿದ್ದರು.

English summary
lok sabha election results 2019: Bhopal constituency update , Praghya Singh Thakur is BJP candidate, Congress candidate Digvijay Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X