ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್‌; ನಗರಕ್ಕೆ ನುಗ್ಗಿದ ಮರುಭೂಮಿ ಮಿಡತೆಗಳು!

|
Google Oneindia Kannada News

ಭೋಪಾಲ್, ಜೂನ್ 16 : ಕೊರೊನಾ ವೈರಸ್ ಸೋಂಕಿನ ನಡುವೆಯೇ ಮಧ್ಯಪ್ರದೇಶಕ್ಕೆ ಮಿಡತೆ ಕಾಟ ಆರಂಭವಾಗಿದೆ. ರಾಜಧಾನಿ ಭೋಪಾಲ್‌ನಲ್ಲಿ ಸಾವಿರಾರು ಮಿಡತೆಗಳು ಕಾಣಿಸಿಕೊಂಡಿವೆ.

Recommended Video

ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

ಮಂಗಳವಾರ ಮಧ್ಯಪ್ರದೇಶದ ವಿಧಾನಸಭೆ, ಮುಖ್ಯಮಂತ್ರಿಗಳ ಕಚೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಭೋಪಾಲ್‌ನಲ್ಲಿನ ವಿವಿಧ ಅಪಾರ್ಟ್‌ಮೆಂಟ್‌ಗಳ ಜನರು ಕಿಟಕಿಯನ್ನು ತೆರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಬದಲಾದ ಗಾಳಿಯ ದಿಕ್ಕು, ಲಾಕೋಸ್ಟ್ ಮಿಡತೆ ಹಾವಳಿಯಿಂದ ಬಚಾವಾದ ರಾಜ್ಯ!ಬದಲಾದ ಗಾಳಿಯ ದಿಕ್ಕು, ಲಾಕೋಸ್ಟ್ ಮಿಡತೆ ಹಾವಳಿಯಿಂದ ಬಚಾವಾದ ರಾಜ್ಯ!

ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ಕಂಡುಬಂದಿದ್ದ ಮರುಭೂಮಿ ಮಿಡತೆಗಳು ಇಂದು ಭೋಪಾಲ್‌ ಮೇಲೆ ದಾಳಿ ಮಾಡಿವೆ. ಅಗ್ನಿ ಶಾಮಕದ ದಳದ ಅಧಿಕಾರಿಗಳು ಮಿಡತೆಗಳನ್ನು ಓಡಿಸಲು ಔಷಧಿಗಳನ್ನು ಸಿಂಪಡಣೆ ಮಾಡುತ್ತಿದ್ದಾರೆ.

ಮಿಡತೆ ದಾಳಿ ತಡೆಗೆ ರೈತರಿಗೆ ಕೃಷಿ ಇಲಾಖೆ ಸಲಹೆಗಳು ಮಿಡತೆ ದಾಳಿ ತಡೆಗೆ ರೈತರಿಗೆ ಕೃಷಿ ಇಲಾಖೆ ಸಲಹೆಗಳು

Locust Attacked Bhopal Madhya Pradesh

ರಾಜ್ಯ ವಿಧಾನಸಭೆಯ ವಲ್ಲಭ ಭವನ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ವಾಸ್ತವ್ಯ ಹೂಡಿರುವ ನಿವಾಸ, ಪ್ರೆಸ್ ಕಾಂಪ್ಲೆಕ್ಸ್, ಲಿಂಕ್ ರೋಡ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾವಿರಾರು ಮಿಡತೆಗಳು ಇವೆ.

ಮಿಡತೆ ದಾಳಿ; “ತಿನ್ನೋ ಅನ್ನಕ್ಕೆ ಮಣ್ಣಾಕಿ” ಬೆಳೆ ಉಳಿಸಿಕೊಳ್ಳಬಹುದಂತೆ...!ಮಿಡತೆ ದಾಳಿ; “ತಿನ್ನೋ ಅನ್ನಕ್ಕೆ ಮಣ್ಣಾಕಿ” ಬೆಳೆ ಉಳಿಸಿಕೊಳ್ಳಬಹುದಂತೆ...!

ಮಧ್ಯಪ್ರದೇಶ ಸಾರ್ವಜನಿಕ ಸಂಪರ್ಕ ಇಲಾಖೆ ಭೋಪಾಲ್, ಉಜ್ಜೈನಿ, ಸಾಗರ್, ಜಬಲ್ಪುರ್ ಜಿಲ್ಲೆಗಳಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಅವರುಗಳನ್ನು ನಾಶ ಪಡಿಸಲು ಔಷಧಿ ಸಿಂಪಡಣೆ ಮಾಡಲಾಗುತ್ತಿದೆ ಎಂದು ಹೇಳಿದೆ.

ರಾಜ್ಯದ ಕೃಷಿ ಇಲಾಖೆ ರೈತರಿಗೆ ಮಿಡತೆ ದಾಳಿ ಬಗ್ಗೆ ಎಚ್ಚರಿಕೆ ನೀಡಿದೆ. ಮಿಡತೆ ಹಾವಳಿ ತಡೆಯಲು ಔಷಧಿ ಸಿಂಪಡಣೆ ಮಾಡಬೇಕು. ಮಿಡತೆ ಮೊಟ್ಟೆಗಳನ್ನು ನಾಶ ಮಾಡಬೇಕು ಎಂದು ಸೂಚನೆ ನೀಡಿದೆ.

English summary
Locust attacked several areas of Madhya Pradesh capital Bhopal on June 16, 2020. Several locust found in state secretariat and the chief minister residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X