ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಉಲ್ಲಂಘಿಸಿದವನ ಹಣೆಬರಹ ಬರೆದ ಪೊಲೀಸರು!

|
Google Oneindia Kannada News

ಭೂಪಾಲ್, ಮಾರ್ಚ್.29: ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ದೇಶದಲ್ಲಿ 21 ದಿನ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರ ನಡುವೆ ಕೆಲವರು ಬೇಕು ಬೇಕಂತಲೇ ನಿಯಮಗಳನ್ನು ಉಲ್ಲಂಘಿಸಿ ಬೀದಿಗೆ ಇಳಿಯುತ್ತಿದ್ದಾರೆ.

ದುಡಿಮೆಗಾಗಿ ಬೇರೆ ಊರುಗಳಿಗೆ ವಲಸೆ ಹೋಗಿರುವ ಕೆಲವರು ನಿರಾಶ್ರಿತರಾಗಿ ಅತಂತ್ರ ಸ್ಥಿತಿ ತಲುಪಿದ್ದಾರೆ. ಇದರ ನಡುವೆ ಮಧ್ಯಪ್ರದೇಶದಲ್ಲಿ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ ಯುವಕನಿಗೆ ಪೊಲೀಸರು ವಿಭಿನ್ನ ರೀತಿಯಲ್ಲಿ ಶಿಕ್ಷೆ ಕೊಟ್ಟಿದ್ದಾರೆ.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ಕಳೆದ ಐದು ದಿನಗಳಿಂದ ಲಾಕ್ ಡೌನ್ ನಡುವೆ ಬೀದಿಗಿಳಿದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದು ಆಗಿದೆ. ಎರಡು ಕೈಗಳನ್ನು ಮುಗಿದು ರಸ್ತೆಗೆ ಇಳಿಯಬೇಡಿ ಎಂದು ಬೇಡಿಕೊಂಡಿದ್ದೂ ಆಗಿದೆ. ಜನರು ಇದ್ಯಾವುದಕ್ಕೂ ಕಿಮ್ಮತ್ತು ಕೊಡುವ ಲಕ್ಷಣಗಳೇ ಕಾಣುತ್ತಿಲ್ಲ.

 Lockdown Violation: Madhya Pradesh Sub-Inspector Take Different Action Against Labour

ಮಧ್ಯಪ್ರದೇಶದಲ್ಲಿ ಬೀದಿಗಿಳಿದವನ ಹಣೆಬರಹ ಬರೆದ ಖಾಕಿ!

ಅಚ್ಚರಿ ಅನ್ನಿಸಿದರೂ ಇದು ಒಂದು ರೀತಿ ವಿಭಿನ್ನ ಕ್ರಮ. ಮಧ್ಯಪ್ರದೇಶದ ಛತ್ತರ್ ಪುರ್ ನ ಗೋರಿಹಾರ್ ಪ್ರದೇಶದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರ್ಮಿಕನ ಹಣೆ ಮೇಲೆ "ನಾನು ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ್ದೇನೆ, ನನ್ನಿಂದ ಅಂತರ ಕಾಯ್ದುಕೊಳ್ಳಿ" ಎಂದು ಲೇಡಿಸ್ ಸಬ್ ಇನ್ಸ್ ಪೆಕ್ಟರ್ ಬರೆದಿದ್ದಾರೆ. ಈ ಚಿತ್ರವು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಎಸ್ಪಿ ಕುಮಾರ್ ಸೌರಭ್, ಇದೊಂದು ಅನಿರೀಕ್ಷಿತ ಕ್ರಮವಾಗಿದ್ದು ಕಾನೂನು ಪ್ರಕಾರ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮಲ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

English summary
Lockdown Violation: Madhya Pradesh Sub-Inspector Take Different Action Against Labour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X