ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗಾಗಿ ವಿಶೇಷ ಬಾರ್: ಏನಿದರ ವಿಶೇಷತೆ?

|
Google Oneindia Kannada News

ಭೋಪಾಲ್, ಫೆಬ್ರವರಿ 28: ಮದ್ಯದಂಗಡಿಗಳನ್ನು ಮುಚ್ಚುವಂತೆ ಮಹಿಳೆಯರು ಪ್ರತಿಭಟಿಸುವ ಸುದ್ದಿ ಆಗಾಗ್ಗೆ ಪ್ರಕಟವಾಗುತ್ತಿರುತ್ತದೆ, ಆದರೆ ಮಹಿಳೆಯರಿಗಾಗಿಯೇ ವಿಶೇಷ ಬಾರ್ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ.

ಹೌದು, ಮಧ್ಯ ಪ್ರದೇಶ ಸರ್ಕಾರವೊಂದು ಈ ರೀತಿಯ ಚಿಂತನೆ ನಡೆಸಿದೆ. ಮಹಿಳೆಯರು ಆರಾಮವಾಗಿ ಬಂದು ಕುಡಿತು ಮತ್ತೇರಿಸಿಕೊಂಡು ಹೋಗಲೆಂದು 'ವನಿತೆಯ ವೈನ್ ಶಾಪ್' ಸ್ಥಾಪಿಸಲು ಹೊರಟಿದೆ.

ಕರ್ನಾಟಕ ಬಜೆಟ್ ನಂತರ ಮದ್ಯ ಪ್ರಿಯರಿಗೆ ಆಘಾತ ಕಾದಿದೆಕರ್ನಾಟಕ ಬಜೆಟ್ ನಂತರ ಮದ್ಯ ಪ್ರಿಯರಿಗೆ ಆಘಾತ ಕಾದಿದೆ

ಮಹಿಳಾ ಕುಡುಕರ ಸಂಖ್ಯೆ ಕೆಲವು ವರ್ಷಗಳಿಂದ ಹೆಚ್ಚಾಗಿದೆ, 'ಪುರುಷ ಪ್ರಾಬಲ್ಯ'ದ ಬಾರ್‌ ಗಳಿಗೆ ಹೋಗಿ ಕುಡಿಯುವುದು ಸೇಫ್ ಅಲ್ಲ, ಬಾರ್‌ ಗೆ ಹೋಗೋಣವೆಂದರೆ 'ಕಂಡವರು ಏನೆಂದುಕೊಳ್ಳುತ್ತಾರೆ' ಎಂಬ ಭಯ, ಹಾಗಾಗಿ ಮಹಿಳಾ ಕುಡುಕರ ಸಮಸ್ಯೆ ನಿವಾರಿಸಲು ಮಧ್ಯ ಪ್ರದೇಶ ಹೀಗೊಂದು ಐಡಿಯಾ ಮಾಡಿದೆ.

Liquor Shop For Women In Madhya Pradesh

ಮೊದಲ ಹಂತವಾಗಿ ಮಧ್ಯಪ್ರದೇಶದ ಇಂಧೋರ್, ಭೋಪಾಲ್, ಗ್ವಾಲಿಯರ್, ಜಬಲ್‌ಪುರದಲ್ಲಿ ತಲಾ ಎರಡು ಮಹಿಳಾ ಸ್ನೇಹಿ ಬಾರ್‌ಗಳನ್ನು ತೆರೆಯಲಾಗುತ್ತದೆಯಂತೆ. ಈ ಬಾರ್‌ಗಳಲ್ಲಿ ಉತ್ತಮ ಗುಣಮಟ್ಟದ ಮದ್ಯವನ್ನೇ ಸರಬರಾಜು ಮಾಡಲಾಗುತ್ತದೆಯಂತೆ, ಈ ಬಾರ್‌ಗಳಲ್ಲಿ ವಿದೇಶಿ ಬ್ರ್ಯಾಂಡ್ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಅದೂ ಕಡಿಮೆ ದರದಲ್ಲಿ.

ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ ಗೋವಾ ಸರ್ಕಾರ!ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ ಗೋವಾ ಸರ್ಕಾರ!

ಇದಿನ್ನೂ ಯೋಜನೆಯ ಹಂತದಲ್ಲಿದ್ದು, ಇನ್ನಷ್ಟೆ ಅನುಷ್ಠಾನಕ್ಕೆ ಬರಬೇಕಿದೆ. ಈ ಬಾರ್‌ಗಳಲ್ಲಿ ಮಹಿಳೆಯರಿಗೆ ಮಾತ್ರವೇ ಪ್ರವೇಶ, ಬಾರ್ ಹೊರಗೆ ಭದ್ರತೆ ವ್ಯವಸ್ಥೆಯನ್ನೂ ಮಾಡಲಾಗುತ್ತದೆಯಂತೆ.

ಮಹಿಳೆಯರಿಗಾಗಿ ಬಾರ್ ತೆರೆದ ಶ್ರೇಯ ದೆಹಲಿಗೆ ಸಲ್ಲುತ್ತದೆ, ಅಲ್ಲಿ ಖಾಸಗಿಯಾಗಿ ಮದ್ಯದಂಗಡಿಯನ್ನು ಮಹಿಳೆಯರಿಗಾಗಿ ತೆರೆಯಲಾಗಿದೆ.

English summary
Madhya Pradesh government planing to start liquor shop for women. Government planing to sell foreign brand liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X