ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ಮಧ್ಯಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ತೇಲುವ ಸೌರ ಸ್ಥಾವರ

|
Google Oneindia Kannada News

ಭೋಪಾಲ್,ಆ.04: ಮಧ್ಯಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಈ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ, ನರ್ಮದಾ ನದಿಗೆ ಕಟ್ಟಲಾಗಿರುವ ಓಂಕಾರೇಶ್ವರ ಅಣೆಕಟ್ಟೆಯಲ್ಲಿ ತೇಲುವ ಸೌರ ಸ್ಥಾವರ ನಿರ್ಮಿಸಲಾಗುತ್ತದೆ.

2022-23 ರ ವೇಳೆಗೆ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ವಿಶ್ವದ ಅತಿದೊಡ್ಡ ತೇಲುವ ಸೌರ ಸ್ಥಾವರ ಎಂದು ಹೇಳಲಾಗುತ್ತಿದೆ.

Largest floating solar power plant to be built on Narmadas Omkareshwar Dam

"ಓಂಕಾರೇಶ್ವರ ಅಣೆಕಟ್ಟನ್ನು ನರ್ಮದಾ ನದಿಗೆ ನಿರ್ಮಿಸಲಾಗಿದೆ. ಇದು ನಮ್ಮ ಜಲವಿದ್ಯುತ್ ಶಕ್ತಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಾವು ನೀರಿನಿಂದ ಶಕ್ತಿಯನ್ನು ಉತ್ಪಾದಿಸುತ್ತೇವೆ. ಇದು ಸುಮಾರು 100 ಚದರ ಕಿಲೋಮೀಟರ್‌ಗಳಷ್ಟು ಹರಡಿದೆ" ಎಂದು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ದುಬೆ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ನೀರಿನ ಮಟ್ಟದಲ್ಲಿನ ಬದಲಾವಣೆಯು ಸಮಾನ್ಯವಾಗಿದ್ದು, ಇದು ನಮ್ಮ ಯೋಜನೆಗೆ ಸೂಕ್ತವಾದ ತಾಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ದುಬೆ ಹೇಳಿದ್ದಾರೆ.

ಹೊಸ ತೇಲುವ ಸೌರ ಸ್ಥಾವರ ನಿರ್ಮಾಣದಿಂದಾಗಿ ಖಾಂಡ್ವಾವು ಉಷ್ಣ ವಿದ್ಯುತ್ ಕೇಂದ್ರ, ಜಲವಿದ್ಯುತ್ ಕೇಂದ್ರ ಮತ್ತು ಸೌರ ವಿದ್ಯುತ್ ಹೊಂದಿರುವ ಮಧ್ಯಪ್ರದೇಶದ ಏಕೈಕ ಜಿಲ್ಲೆಯಾಗಲಿದೆ ಎಂದು ದುಬೆ ಒತ್ತಿ ಹೇಳಿದ್ದಾರೆ.

ಮುಂದಿನ ಹಂತದಲ್ಲಿ ನಾವು 300 ಮೆಗಾವ್ಯಾಟ್‌ಗೆ ಟೆಂಡರ್ ಕರೆದಿದ್ದೇವೆ, ಆದ್ದರಿಂದ ಇದು ತೇಲುವ ಸೌರ ವಿದ್ಯುತ್ ಸ್ಥಾವರ ಎಂದು ಕರೆಯಲ್ಪಡುವ ವಿಶ್ವದ ಅತಿದೊಡ್ಡ ಯೋಜನೆಯಾಗಿದೆ. ಸೋಲಾರ್, ಉಷ್ಣ ವಿದ್ಯುತ್ ಕೇಂದ್ರ, ಜಲವಿದ್ಯುತ್ ಕೇಂದ್ರ ಮತ್ತು ಸೌರ ವಿದ್ಯುತ್ ಸೇರಿದಂತೆ ಎಲ್ಲಾ ಮೂರು ವಿಷಯಗಳನ್ನು ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಖಾಂಡ್ವಾ ಆಗಲಿದೆ. ಒಂದೇ ಜಿಲ್ಲೆಯಿಂದ 4,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ದುಬೆ ಹೇಳಿದ್ದಾರೆ.

English summary
World's largest floating solar power plant to be built on Narmada's Omkareshwar Dam in Madhya Pradesh. which will generate 600 Megawatt power. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X