ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರಿಗೆ ತೆರಳಲು ಪೊಲೀಸ್‌ಗೆ ಹೆದರಿ ಕಾರ್ಮಿಕರು ಮಾಡಿದ್ದೇನು ಗೊತ್ತಾ?

|
Google Oneindia Kannada News

ಭೋಪಾಲ್, ಮೇ 3: ಲಾಕ್‌ಡೌನ್ ಸಮಸ್ಯೆಯಿಂದ ಜನಕ್ಕೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಆಗಿಲ್ಲ. ಕೇಂದ್ರ ಗೃಹ ಸಚಿವಾಲಯ ನಿನ್ನೆಯಷ್ಟೇ ಕೆಲವು ವಿನಾಯಿತಿ ನೀಡಿದೆ.

ಆದರೂ, ಪೊಲೀಸರು ಕೋವಿಡ್ ಸಂಬಂಧ ಜಿಲ್ಲೆಗಳ, ರಾಜ್ಯಗಳ ಗಡಿಯೊಳಗೆ ಅನುಮತಿ ಇಲ್ಲದೇ ಪ್ರವೇಶ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕರ ಪಡಿಪಾಟಲು ಹೇಳತೀರದಾಗಿದೆ‌. ಅಂತಾರಾಜ್ಯ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಸ್ಥಳಗಳಿಗೆ ಕಳುಹಿಸಿ ಕೊಡಲು ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಿದ್ದರೂ ಕಾರ್ಮಿಕರಿಗೆ ಸುಲಭವಾಗಿ ಊರುಗಳಿಗೆ ತೆರಳಲು ಆಗುತ್ತಿಲ್ಲ.

ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧುಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

ಇಂತಹುದೇ ಸನ್ನಿವೇಶದಲ್ಲಿ ಮಧ್ಯಪ್ರದೇಶದಲ್ಲಿ ಕಾರ್ಮಿಕರನ್ನು ಕಾಂಕ್ರೀಟ್ ಮಿಕ್ಸರ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಘಟನೆ ನಡೆದಿದೆ.

ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಲಕ್ನೋಗೆ ಹೊರಟಿದ್ದರು

ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಲಕ್ನೋಗೆ ಹೊರಟಿದ್ದರು

ಕಾಂಕ್ರೀಟ್ ಮಿಕ್ಸರ್ ವಾಹನದಲ್ಲಿ ಮಿಕ್ಸರ್ ಒಳಗೆ ಕುಳಿತು ಪ್ರಯಾಣಿಸುತ್ತಿದ್ದ 18 ಕಾರ್ಮಿಕರನ್ನು ಮಧ್ಯಪ್ರದೇಶದ ಇಂದೋರ್ ಪೊಲೀಸ್ ಬಂಧಿಸಿದ್ದಾರೆ. ಇವರು ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಲಕ್ನೋಗೆ ಹೊರಟಿದ್ದರು.

ಮಿಕ್ಸರ್ ಒಳಗೆ ಕಾರ್ಮಿಕರು

ಮಿಕ್ಸರ್ ಒಳಗೆ ಕಾರ್ಮಿಕರು

ಪೊಲೀಸರು ಅನುಮಾನದ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿಯನ್ನು ತಡೆದಾಗ ಚಾಲಕ ಲಾರಿ ಬಿಟ್ಟು ಓಡಲು ಪ್ರಾರಂಭಿಸಿದ್ದಾನೆ‌. ಆತನನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಒಳಗೆ ಕಾರ್ಮಿಕರು ಇರುವುದು ಗೊತ್ತಾಗಿದೆ.

ಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿ

ಊರಿಗೆ ತೆರಳುವುದು ಹರಸಾಹಸವೇ ಆಗಿದೆ

ಊರಿಗೆ ತೆರಳುವುದು ಹರಸಾಹಸವೇ ಆಗಿದೆ

ಲಾಕ್‌ಡೌನ್ ನಿಂದ ಪೊಲೀಸರ ಕಣ್ಣು ತಪ್ಪಿಸಿ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳುವುದು ಹರಸಾಹಸವೇ ಆಗಿದೆ. ಅಂತಾರಾಜ್ಯ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಸ್ಥಳಗಳಿಗೆ ಕಳುಹಿಸಿ ಕೊಡಲು ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಿದ್ದರೂ ಕಾರ್ಮಿಕರಿಗೆ ಸುಲಭವಾಗಿ ಊರುಗಳಿಗೆ ತೆರಳಲು ಆಗುತ್ತಿಲ್ಲ.

2971 ಜನರಿಗೆ ಕೊರೊನಾ ವೈರಸ್ ಸೋಂಕು

2971 ಜನರಿಗೆ ಕೊರೊನಾ ವೈರಸ್ ಸೋಂಕು

ಮಧ್ಯಪ್ರದೇಶದಲ್ಲಿ 2971 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 145 ಜನ ಮೃತಪಟ್ಟಿದ್ದಾರೆ‌. ಮಹಾರಾಷ್ಟ್ರ ದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಳವಾಗಿದೆ. ಭಾರತದಲ್ಲಿ 39,980 ಜನರಿಗೆ ಸೊಂಕು ತಗುಲಿದೆ‌.

English summary
Labours Found In Concrete Mixer Van At Madhya Pradesh Police caught the van and 18labours are arrested by Indore police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X