ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರನ್ನು ಆಕರ್ಷಿಸುತ್ತಿದೆ ಮೋದಿ ಮಾಸ್ಕ್, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ

|
Google Oneindia Kannada News

ಭೋಪಾಲ್, ಜೂನ್ 16: ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕೊವಿಡ್ ಹರಡುವಿಕೆಯಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಪ್ರಮುಖ ಕರ್ತವ್ಯ.

Recommended Video

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ‌ ಮಾಡೋರಿಗೆ ಈಗ ಒಳ್ಳೆ ಟೈಮ್ | Pre-owned Cars | Oneindia Kannada

ಈ ನಿಟ್ಟಿನಲ್ಲಿ ಮಾಸ್ಕ್ ಗಳಿಗೆ ಹಾಗೂ ಮಾಸ್ಕ್ ಮಾರಾಟಗಾರರಿಗೆ ಬೇಡಿಕೆ ಹೆಚ್ಚಿದೆ. ಮಧ್ಯ ಪ್ರದೇಶದ ಭೋಪಾಲ್‌ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚು ಖರೀದಿಯಾಗುತ್ತಿದೆ ಎಂದು ಅಂಗಡಿ ಮಾಲೀಕ ಎಎನ್ಐಗೆ ತಿಳಿಸಿದ್ದಾರೆ.

ಪ್ರತಿದಿನ 1 ಲಕ್ಷ ಕೊರೊನಾ ಕೇಸ್: ಮತ್ತೊಮ್ಮೆ ಎಚ್ಚರಿಕೆ ನೀಡಿದ WHOಪ್ರತಿದಿನ 1 ಲಕ್ಷ ಕೊರೊನಾ ಕೇಸ್: ಮತ್ತೊಮ್ಮೆ ಎಚ್ಚರಿಕೆ ನೀಡಿದ WHO

''ಇಲ್ಲಿಯವರೆಗೂ ಪ್ರಧಾನಿ ಮೋದಿ ಅವರ ಮುಖ ಮುದ್ರಿತವಾಗಿರುವ 500-1000 ಮಾಸ್ಕ್ ಮಾರಾಟ ಮಾಡಿದ್ದೇನೆ ಮತ್ತು ಹೆಚ್ಚು ಬೇಡಿಕೆ ಇದೆ'' ಎಂದು ಅಂಗಡಿ ಮಾಲೀಕ ಕುನಲ್ ಪರಿಯಾನಿ ಹೇಳಿದ್ದಾರೆ.

ಮೋದಿ ಅವರ ಮಾಸ್ಕ್ ಮಾತ್ರವಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಸಹ ಲಭ್ಯವಿದೆ ಎಂದು ಅಂಗಡಿ ಮಾಲೀಕ ತಿಳಿಸಿದ್ದಾರೆ.

Kunal Paryani selling masks with PM Modis face printed on it

ಮಧ್ಯ ಪ್ರದೇಶದಲ್ಲಿ ಈವರೆಗೂ 10,935 ಜನರಿಗೆ ಕೊರೊನಾ ವೈರಸ್ ತಗುಲಿದೆ. 465 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೋಪಾಲ್ ನಗರದಲ್ಲಿ ಮಾತ್ರ 2235 ಜನರಿಗೆ ಸೋಂಕು ಅಂಟಿಕೊಂಡಿದ್ದು, 72 ಮಂದಿ ಮೃತಪಟ್ಟಿದ್ದಾರೆ.

English summary
Kunal Pariyani, a clothes seller, from Bhopal, is selling cloth masks with PM Modi's face printed on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X