ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಪ್ರದೇಶದಲ್ಲಿ 'ಕಮಲ್' ಸರ್ಕಾರ! ಡಿ.17ರಂದು ಪ್ರಮಾಣವಚನ

|
Google Oneindia Kannada News

ಭೋಪಾಲ್, ಡಿಸೆಂಬರ್ 14: ಮಧ್ಯ ಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರು ಡಿ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅನುಭವಕ್ಕೆ ಮಣೆ : ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಅನುಭವಕ್ಕೆ ಮಣೆ : ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್ ನಾಥ್

ಡಿಸೆಂಬರ್ 17, ಸೋಮವಾರದಂದು ಭೋಪಾಲದ ಲಾಲ್ ಪರೇಡ್ ಮೈದಾನದಲ್ಲಿ ಕಮಲ್ ನಾಥ್ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಮೂಲಕ ರಾಜಸ್ಥಾನದಲ್ಲಿ 'ಕಮಲ್' ಸರ್ಕಾರ ಆರಂಭವಾಗಲಿದೆ!

ನೆಹರೂ ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ ಕಮಲ್ ನಾಥ್ ನೆಹರೂ ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ ಕಮಲ್ ನಾಥ್

ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ನಡೆದ ಚುನಾವಣೆಯ ಫಲಿತಾಂಶ ಡಿಸೆಂಬರ್ 11ರಂದು ಹೊರಬಿದ್ದಿತ್ತು. ಒಟ್ಟು 230 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಪಕ್ಷೇತರರ ಬೆಂಬಲದೊಂದಿಗೆ ಬಹುಮತ ಗಳಿಸಿ ಸರ್ಕಾರ ರಚಿಸುತ್ತಿದೆ.

Kamal Nath will take oath as Madhya Pradesh CM on December 17

ಮಧ್ಯಪ್ರದೇಶ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿ ಕಮಲ್ ನಾಥ್ ಮತ್ತು ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ಅವರ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಆದರೆ ಅನುಭವವನ್ನು ಮಾನದಂಡವನ್ನಾಗಿ ಪರಿಗಣಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಮಲ್ ನಾಥ್ ಅವರನ್ನೇ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಗುರುವಾರ ರಾತ್ರಿ ಘೋಷಿಸಿದರು.

72 ವರ್ಷ ವಯಸ್ಸಿನ ಕಮಲ್ ನಾಥ್ ನೆಹರೂ ಕುಟುಂಬದ ನಿಷ್ಠಾವಂತ ನಾಯಕರು. ಈ ಹುದ್ದೆ ತಮಗೆ ಒಲಿದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

English summary
Kamal Nath will take oath as Madhya Pradesh Chief Minister on December 17 at Lal Parade Ground in Bhopal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X