ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಮರು ಚುನಾವಣೆ ನಡೆಸಿ : ಕಮಲ್‌ನಾಥ್

|
Google Oneindia Kannada News

ಭೋಪಾಲ್, ನವೆಂಬರ್ 28 : ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ಮರು ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಬುಧವಾರ ಮಧ್ಯಪ್ರದೇಶದಲ್ಲಿ ಮತದಾನ ಮಾಡಿದರು, 'ನನಗೆ ರಾಜ್ಯದ ಜನರ ಮೇಲೆ ನಂಬಿಕೆ ಇದೆ. ಅವರು ಮುಗ್ಧರು' ಎಂದು ಕಮಲ್‌ನಾಥ್ ಹೇಳಿದರು.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಕ್ಷಣ-ಕ್ಷಣದ ಮಾಹಿತಿಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಕ್ಷಣ-ಕ್ಷಣದ ಮಾಹಿತಿ

'ರಾಜ್ಯದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳಲ್ಲಿ ದೋಷ ಕಂಡುಬಂದಿದೆ. ಇದಕ್ಕೆ ಬಿಜೆಪಿಯೇ ಕಾರಣ. ಆದ್ದರಿಂದ, ಮರು ಚುನಾವಣೆ ನಡೆಸಬೇಕು' ಎಂದು ಕಮಲ್‌ನಾಥ್ ಒತ್ತಾಯಿಸಿದರು.

ಮಧ್ಯಪ್ರದೇಶ ಮತದಾರರಿಗೆ ರಾಹುಲ್ ಗಾಂಧಿ 'ಭರವಸೆ' ಭರಿತ ಪತ್ರಮಧ್ಯಪ್ರದೇಶ ಮತದಾರರಿಗೆ ರಾಹುಲ್ ಗಾಂಧಿ 'ಭರವಸೆ' ಭರಿತ ಪತ್ರ

Kamal Nath wants repoll in Madhya Pradesh, blames BJP for EVM fault

ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಕಾರ್ಯ ನಿರ್ವಹಣೆ ಬಗ್ಗೆ ಹಲವಾರು ದೂರುಗಳು ಬಂದಿವೆ. ಸರಿಯಾಗಿ ಅವುಗಳು ಕಾರ್ಯ ನಿರ್ವಹಣೆ ಮಾಡದ ಕಾರಣ ಮತದಾನ ವಿಳಂಬವಾಗಿದೆ. ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಚುನಾವಣಾ ಆಯೋಗಕ್ಕೆ ಮತದಾನದ ಸಮಯ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದಾರೆ.

'ಮತದಾನದ ಸಮಯ ವಿಸ್ತರಣೆ ಮಾಡಲು ಅವಕಾಶವಿದೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಈ ವಿಚಾರವನ್ನು ಚುನಾವಣಾ ಆಯೋಗ ನಿರ್ವಹಿಸುವುದಿಲ್ಲ' ಎಂದು ಕೇಂದ್ರ ಚುನಾವಣಾ ಆಯುಕ್ತ ಓ.ಪಿ.ರಾವತ್ ಹೇಳಿದ್ದಾರೆ.

English summary
Senior Congress leader Kamal Nath demand for re-poll in Madhya Pradesh assembly elections 2018. After casting his vote he blamed BJP for EVM fault across the state. Election is underway on November 28 for 230 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X