ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂದಿಯಾಗಾಗಿ ಅಧ್ಯಕ್ಷಪಟ್ಟ ಬಿಟ್ಟುಕೊಡಲು ಮುಂದಾದ ಕಮಲ್ ನಾಥ್

|
Google Oneindia Kannada News

ನವದೆಹಲಿ, ಅಕ್ಟೋಬರ್ 04: ತಮ್ಮ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿದ್ದನ್ನು ಮನಗಂಡ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಇದೀಗ ತೇಪೆ ಹಚ್ಚಲು ಮುಂದಾಗಿದ್ದಾರೆ.

"ಅಧ್ಯಕ್ಷ ಪಟ್ಟವನ್ನು ಹೈಕಮಾಂಡ್ ಸಿಂದಿಯಾ ಅವರಿಗೆ ನೀಡುವುದಾದರೆ ಬಿಟ್ಟುಕೊಡಲು ನಾನು ರೆಡಿ, ನನಗೂ ಮುಖ್ಯಮಂತ್ರಿ ಹುದ್ದೆ ಮತ್ತು ರಾಜ್ಯಾಧ್ಯಕ್ಷನ ಹುದ್ದೆ ಎರಡನ್ನೂ ಒಟ್ಟಿಗೇ ನಿರ್ವಹಿಸುವುದು ಕಷ್ಟವಾಗಿದೆ" ಎಂದು ಕಮಲ್ ನಾಥ್ ಹೇಳಿದ್ದಾರೆ.

ತಮ್ಮದೇ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜ್ಯೋತಿರಾದಿತ್ಯತಮ್ಮದೇ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜ್ಯೋತಿರಾದಿತ್ಯ

Kamal Nath to give up president post for Jyotiraditya Scindia

ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಕಮಲ್ ನಾಥ್, ಈ ರೀತಿಯ ಭಿನ್ನಾಭಿಪ್ರಾಯ ಯಾವಾಗಲೂ ಇರುತ್ತದೆ. ಎಲ್ಲ ರಾಜ್ಯಗಳಲ್ಲೂ, ಎಲ್ಲ ಪಕ್ಷಗಳಲ್ಲ ಇರುತ್ತದೆ. ನಾವೆಲ್ಲ ಮನುಷ್ಯರು. ಇವೆಲ್ಲ ಸಹಜ. ಮಧ್ಯಪ್ರದೇಶದಲ್ಲಿ ಅಧ್ಯಕ್ಷ್ ಹುದ್ದೆಗೆ ಸಿಂದಿಯಾ ಹೆಸರು ಕೇಳಿಬಂದಿದೆ.

ಕಮಲ್ ನಾಥ್ ಗೆ ಎಚ್ಚರಿಕೆ ನೀಡಿದ ಜ್ಯೋತಿರಾದಿತ್ಯ ಸಿಂದಿಯಾಕಮಲ್ ನಾಥ್ ಗೆ ಎಚ್ಚರಿಕೆ ನೀಡಿದ ಜ್ಯೋತಿರಾದಿತ್ಯ ಸಿಂದಿಯಾ

ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಜ್ಯೋತಿರಾದಿತ್ಯ ಸಿಂದಿಯಾ ನಂತರ ತಮ್ಮನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ದೂರಿದ್ದರು. "ನನ್ನನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ, ಇಲ್ಲವೆಂದರೆ ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ" ಎಂದು ಇತ್ತೀಚೆಗಷ್ಟೇ ಬಹಿರಂಗವಾಗಿ ಸಿಮದಿಯಾ ಹೇಳಿಕೆ ನೀಡಿದ್ದರು.

English summary
Madhya Pradesh CM Kamal Nath to give up president post for Jyotiraditya Scindia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X