ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಮಹಾರಾಜರ ದಿನ ಹೋದವು, ಸರ್ಕಾರ ಉಳಿಯಲಿದೆ!

|
Google Oneindia Kannada News

ಭೋಪಾಲ್, ಮಾರ್ಚ್ 11 : ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. ಕಮಲನಾಥ್ ನೇತೃತ್ವದ ಸರ್ಕಾರ ಮಾರ್ಚ್ 16ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದೆ.

ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಕಾಂಗ್ರೆಸ್ ಸರ್ಕಾರ ಉಳಿಯಲಿದೆಯೇ? ಎಂಬ ಅಂಕಿ-ಸಂಖ್ಯೆಗಳ ಲೆಕ್ಕಾಚಾರ ಈಗ ಆರಂಭವಾಗಿದೆ.

ಮಧ್ಯಪ್ರದೇಶ ಹೈಡ್ರಾಮ; ರಾಜೀನಾಮೆಗೆ ಸಿದ್ದವಾದ 25 ಕಾಂಗ್ರೆಸ್‌ ಶಾಸಕರುಮಧ್ಯಪ್ರದೇಶ ಹೈಡ್ರಾಮ; ರಾಜೀನಾಮೆಗೆ ಸಿದ್ದವಾದ 25 ಕಾಂಗ್ರೆಸ್‌ ಶಾಸಕರು

ಕಾಂಗ್ರೆಸ್‌ನ 22 ಶಾಸಕರು ರಾಜೀನಾಮೆ ನೀಡಿದ್ದಾರೆ. 19 ಶಾಸಕರು ಕರ್ನಾಟಕದ ಬೆಂಗಳೂರಿನ ದೇವನಹಳ್ಳಿ ಬಳಿಯ ನಂದಿಬೆಟ್ಟದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿದ್ದಾರೆ. ಬಿಜೆಪಿ ಶಾಸಕರು ಹರ್ಯಾಣದ ಗುರುಗ್ರಾಮದಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್‌ ಸೇರಿದ್ದಾರೆ.

ಮಧ್ಯಪ್ರದೇಶ ರಾಜಕಾರಣಕ್ಕೆ ಟ್ವಿಸ್ಟ್: ರಾತ್ರೋರಾತ್ರಿ ದೆಹಲಿಯತ್ತ ಶಾಸಕರು!ಮಧ್ಯಪ್ರದೇಶ ರಾಜಕಾರಣಕ್ಕೆ ಟ್ವಿಸ್ಟ್: ರಾತ್ರೋರಾತ್ರಿ ದೆಹಲಿಯತ್ತ ಶಾಸಕರು!

ಹರ್ಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿದೆ. ಆದ್ದರಿಂದ, ಶಾಸಕರನ್ನು ಇತರರು ಸಂಪರ್ಕಿಸುವುದು ಅಷ್ಟು ಸುಲಭವ ಮಾತಲ್ಲ. ವಿಧಾನಸಭೆಯಲ್ಲಿಯಲ್ಲಿ ಕಮಲನಾಥ್ ಬಹುಮತ ಸಾಬೀತು ಮಾಡಲಿದ್ದಾರೆಯೇ? ಕಾದು ನೋಡಬೇಕು.

ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧಿಯಾ ಲೆಕ್ಕಾಚಾರವೇನು? ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧಿಯಾ ಲೆಕ್ಕಾಚಾರವೇನು?

ರಾಜ-ಮಹಾರಾಜರ ದಿನಗಳು ಇಲ್ಲ

ರಾಜ-ಮಹಾರಾಜರ ದಿನಗಳು ಇಲ್ಲ

ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಕಾಂಗ್ರೆಸ್ ಮತ್ತು ಕಮಲನಾಥ್ ಸರ್ಕಾರ ಉಳಿಯಲಿದೆ. ನೀವು ಮಾರ್ಚ್ 16ರ ತನಕ ಕಾದು ನೋಡಿ. ಶಾಸಕರು ಅವರ ಜೊತೆಗೆ ಇರಲಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತೊರೆದಿದ್ದು ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ ಮಹಾರಾಜರ ದಿನಗಳು ಎಂದೋ ಮುಗಿದು ಹೋಗಿವೆ" ಎಂದು ಹೇಳಿದ್ದಾರೆ.

ವಿಧಾನಸಭೆ ಬಲಾಬಲ

ವಿಧಾನಸಭೆ ಬಲಾಬಲ

ಮಧ್ಯಪ್ರದೇಶ ವಿಧಾನಸಭೆಯ ಬಲಾಬಲ ಹೀಗಿದೆ. ಒಟ್ಟು ವಿಧಾನಸಭಾ ಕ್ಷೇತ್ರಗಳು 230. ಬಹುಮತ ಸಾಬೀತು ಮಾಡಲುಬೇಕಾದ ಮ್ಯಾಜಿಕ್ ನಂಬರ್ 115.
* ಕಾಂಗ್ರೆಸ್ 114
* ಬಿಜೆಪಿ 109
* ಇತರೆ 7 ಶಾಸಕರು ಇದ್ದಾರೆ.

22 ಶಾಸಕರ ರಾಜೀನಾಮೆ

22 ಶಾಸಕರ ರಾಜೀನಾಮೆ

ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ 19 ಶಾಸಕರು ರಾಜೀನಾಮೆ ನೀಡಿದ್ದಾರೆ. ಇದುವರೆಗೂ ರಾಜ್ಯದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇದರಿಂದಾಗಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಮಾರ್ಚ್ 16ರಂದು ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಂದು ಕಮಲನಾಥ್ ಬಹುಮತ ಸಾಬೀತು ಮಾಡಬೇಕು.

ಮನವೊಲಿಕೆಗೆ ಸತತ ಪ್ರಯತ್ನ

ಮನವೊಲಿಕೆಗೆ ಸತತ ಪ್ರಯತ್ನ

ಮಧ್ಯಪ್ರದೇಶ ಕಾಂಗ್ರೆಸ್‌ನ 19 ಶಾಸಕರು ಬೆಂಗಳೂರಿನ ದೇವನಹಳ್ಳಿ ಬಳಿಯ ನಂದಿಬೆಟ್ಟದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿದ್ದಾರೆ. ಬಂಡಾಯ ಎದ್ದಿರುವ ಶಾಸಕರ ಮನವೊಲಿಸಲು ಕಾಂಗ್ರೆಸ್ ಸಜ್ಜನ್ ಸಿಂಗ್ ವರ್ಮಾ, ಗೋವಿಂದ್ ಸಿಂಗ್‌ರನ್ನು ಕರ್ನಾಟಕಕ್ಕೆ ಕಳಿಸಿದೆ. ಸರ್ಕಾರ ಉಳಿಸಿಕೊಳ್ಳಲು ಕರ್ನಾಟಕದ ಕಾಂಗ್ರೆಸ್ ನಾಯಕರ ಜೊತೆ ಸೇರಿ ಪ್ರಯತ್ನ ನಡೆಸಲಾಗುತ್ತಿದೆ.

English summary
Kamal Nath lead Congress government in crisis in Madhya Pradesh. Congress MLA Arjun Singh said that government will remain and days of Rajas-Maharajas are long gone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X