ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಷಯುಕ್ತ ಚಪಾತಿ ಸೇವಿಸಿ ನ್ಯಾಯಾಧೀಶ ಮತ್ತು ಮಗ ಸಾವು: ಐವರ ಬಂಧನ

|
Google Oneindia Kannada News

ಭೋಪಾಲ್, ಜುಲೈ 30: ವಿಷಯುಕ್ತ ಚಪಾತಿ ಸೇವಿಸಿ ನ್ಯಾಯಾಧೀಶ ಮತ್ತವರ ಪುತ್ರ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೀತುಲ್ ಮಹೇಂದ್ರ ತ್ರಿಪಾಠಿ ಹಾಗೂ ಅವರ 33 ವರ್ಷದ ಮಗ ವಿಷಯುಕ್ತ ಚಪಾತಿ ಸೇವಿಸಿ ಸಾವನ್ನಪ್ಪಿದ್ದರು. ಛಿಂದ್ವಾರಾದಲ್ಲಿ ಎನ್‌ಜಿಓ ನಡೆಸುತ್ತಿರುವ ಸಂಧ್ಯಾ ಸಿಂಗ್ ಎಂಬುವವರು ಈ ಚಪಾತಿ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

1 ಕೋಟಿಗಾಗಿ 6ನೇ ತರಗತಿ ಬಾಲಕನನ್ನು ಅಪಹರಿಸಿ ಹತ್ಯೆಗೈದ ದುಷ್ಕರ್ಮಿಗಳು1 ಕೋಟಿಗಾಗಿ 6ನೇ ತರಗತಿ ಬಾಲಕನನ್ನು ಅಪಹರಿಸಿ ಹತ್ಯೆಗೈದ ದುಷ್ಕರ್ಮಿಗಳು

ಅವರ ಕುಟುಂಬಕ್ಕೆ ವಿಷ ಮಿಶ್ರಿತ ಗೋಧಿ ಹಿಟ್ಟನ್ನು ನೀಡಲಾಗಿತ್ತು. ಜುಲೈ 20ರಂದು ನ್ಯಾಯಾಧೀಶರು ಮನೆಗೆ ಗೋಧಿ ಹಿಟ್ಟು ತೆಗೆದುಕೊಂಡು ಹೋಗಿದ್ದರು. ಅದೇ ದಿನ ಅವರ ಪತ್ನಿ ಚಪಾತಿ ಮಾಡಿದ್ದರು. ಚಪಾತಿ ತಿಂದ ಬಳಿಕ ಇಬ್ಬರಿಗೂ ವಾಂತಿ ಶುರುವಾಗಿತ್ತು. ಜುಲೈ 23 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Judge, Son Died Allegedly After Eating Poisoned Chapatis, 5 Arrested

ಜುಲೈ 25 ರಂದು ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ನಾಗ್ಪುರಕ್ಕೆ ಕರೆತರುವಷ್ಟರಲ್ಲಿ ಅಭಿನಯ್ ರಾಜ್ ಮೃತಪಟ್ಟಿದ್ದರು. ಭಾನುವಾರ ನ್ಯಾಯಾಧೀಶರು ಸಾವನ್ನಪ್ಪಿದ್ದಾರೆ.
ತ್ರಿಪಾಠಿ ಅವರ ಕಿರಿಯ ಮಗ ಕೂಡ ಚಪಾತಿ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೀಗ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ದೇವಿಲಾಲ್ ಚಂದ್ರವಂಶಿ, ಮುಬಿನ್ ಖಾನ್, ಕಮಲ್, ಡ್ರೈವರ್ ಸಂಜು ಹಾಗೂ ಸಂಧ್ಯಾ ಸಿಂಗ್ ಎಂಬುವವರನ್ನು ಬಂಧಿಸಲಾಗಿದೆ.

ಛಿಂದ್ವಾರಾಕ್ಕೆ ಪೋಸ್ಟಿಂಗ್ ಆದ ಬಳಿಕ ಸಂಧ್ಯಾ ಹಾಗೂ ತ್ರಿಪಾಠಿ ಸ್ನೇಹಿತರಾದರು. ಈಗ ತ್ರಿಪಾಠಿ ಬೀತುಲ್‌ನಲ್ಲಿ ತನ್ನ ಕುಟುಂಬದವರೊಂದಿಗೆ ನೆಲೆಸಲು ಆರಂಭಿಸಿ ನಾಲ್ಕು ತಿಂಗಳಾಗಿತ್ತು. ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Police in Betul district of Madhya Pradesh on Wednesday arrested six people including a woman in connection with the mysterious deaths of an additional district and sessions judge (ADJ) and his son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X