ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಐಟಿ ರೇಡ್! ಅಷ್ಟೊಂದು ಹಣ ಜಮೆಯಾಗಿದ್ದು ಯಾವ ಪಕ್ಷಕ್ಕೆ?

|
Google Oneindia Kannada News

ಭೊಪಾಲ್, ಏಪ್ರಿಲ್ 09: ಮಧ್ಯಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಆದಾಯ ತೆರಿಗೆ ದಾಳಿಯಲ್ಲಿ ಹಲವು ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ.

ಒಟ್ಟು 281 ಕೋಟಿ ರೂ.ಗಳ ಹಗರಣ ಬೆಳಕಿಗೆ ಬಂದಿದ್ದು, ಈ 281 ಕೋಟಿ ಹಣದಲ್ಲಿ ಸುಮಾರು 20 ಕೋಟಿ ರೂ.ನಷ್ಟು ಹಣ 'ದೆಹಲಿಯಲ್ಲಿರುವ ಪ್ರಮುಖ ರಾಜಕೀಯ ಪಕ್ಷವೊಂದರ ಕೇಂದ್ರ ಕಚೇರಿ'ಯ ಖಾತೆಗೆ ಜಮೆಯಾಗಿದೆ ಎಂಬುದಕ್ಕೆ ಸಾಕ್ಷ್ಯ ಲಭಿಸಿದ್ದು, ಅದು ಯಾವ ಪಕ್ಷ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನನ್ನ ಮನೆಗಳ ಮೇಲೆ ಐಟಿ ದಾಳಿಗೆ ಸಂಚು: ಚಿದಂಬರಂ ಆರೋಪನನ್ನ ಮನೆಗಳ ಮೇಲೆ ಐಟಿ ದಾಳಿಗೆ ಸಂಚು: ಚಿದಂಬರಂ ಆರೋಪ

ಆದಾಯ ತೆರಿಗೆ ಅಧಿಕಾರಿಗಳ ಪ್ರಕಾರ ವಶಪಡಿಸಿಕೊಳ್ಳಲಾದ ವಸ್ತುಗಳ ಪೈಕಿ ಹುಲಿ ಚರ್ಮ, 252 ಬಾಟಲ್ ಮದ್ಯ, ಜೊತೆಗೆ 14.6 ಲಕ್ಷ ನಗದು ಹಣ ಸೇರಿವೆ.

IT raid in Madhya Pradesh: Rs.281 crore cash collection scam exposed

ಅಷ್ಟೇ ಅಲ್ಲ, ಲೆಕ್ಕಕ್ಕೇ ಸಿಗದ, ಸುಮಾರು 230 ಕೋಟಿ ರೂ. ವ್ಯವಹಾರ ನಡೆದಿದ್ದು, ಸುಮಾರು 242 ಕೋಟಿ ರೂ.ಗೂ ಅಧಿಕ ಮೌಲ್ಯದ ನಕಲಿ ಬಿಲ್ ಗಳನ್ನು ತಯಾರಿಸಲಾಗಿದೆ.

ದೇವೇಗೌಡರ ಸಂಬಂಧಿ ಲಾಕರ್ ನಲ್ಲಿ 6.5.ಕೋಟಿ ಪತ್ತೆ; ಬಂಧನ ಸಾಧ್ಯತೆದೇವೇಗೌಡರ ಸಂಬಂಧಿ ಲಾಕರ್ ನಲ್ಲಿ 6.5.ಕೋಟಿ ಪತ್ತೆ; ಬಂಧನ ಸಾಧ್ಯತೆ

ಭಾನುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಲು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಪ್ರವೀಣ್ ಕಕ್ಕರ್ ಅವರ ಇಂದೋರ್ ನಿವಾಸ್ ಮೇಲೆ ಮತ್ತು ಮಾಜಿ ಸಲಹೆಗಾರ ರಾಜೇಂದ್ರ ಕುಮಾರ್ ಮಿಗ್ಲಾನಿ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಹವಾಲಾ ಪ್ರಕರಣದಲ್ಲಿ ಸಂಪರ್ಕವಿದೆ ಎಂಬ ದೂರಿನ ಮೇರೆಗೆ ದಾಳಿ ನಡೆಸಲಾಗಿತ್ತು.

English summary
After IT raid in Madhya Pradesh more than Rs.280 crore cash scam was exposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X