ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಪಿನಿಂದ ಥಳಿಸಿಕೊಂಡಿದ್ದ ಇಂದೋರ್‌ನ ಬಳೆಗಾರ ಅಪ್ರಾಪ್ತೆಗೆ ಕಿರುಕುಳ ಆರೋಪದಲ್ಲಿ ಬಂಧನ

|
Google Oneindia Kannada News

ಇಂದೋರ್‌, ಆಗಸ್ಟ್‌ 25: ಇಂದೋರ್‌ನ ಗೋವಿಂದ್‌ ನಗರದಲ್ಲಿ ಭಾನುವಾರದಂದು ಬಳೆ ಮಾರಾಟಗಾರ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗಿದ್ದ. ಆತನ ಮೇಲೆ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪ ಹೊರೆಸಿ ಮಂಗಳವಾರ ತಡರಾತ್ರಿ ಬಂಧನ ಮಾಡಲಾಗಿದೆ.

ಬಂಧಿತ ಬಳೆ ಮಾರಾಟಗಾರ ತಸ್ಲಿಮ್‌ ಆಲಿ ಮೇಲೆ ಇಂದೋರ್‌ನ ಗೋವಿಂದ್‌ ನಗರದಲ್ಲಿ ಅಮಾನುಷವಾಗಿ ಥಳಿಸಲಾಗಿತ್ತು ಹಾಗೂ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಹಿಂದೂ ಜನರು ಅಧಿಕವಾಗಿರುವ ಪ್ರದೇಶದಲ್ಲಿ ಬಳೆ ಮಾರಾಟ ಮಾಡಿದ ಎಂಬ ಕಾರಣಕ್ಕೆ ಮುಸ್ಲಿಂ ಬಳೆಗಾರನಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಹೇಳಿ ಸುದ್ದಿಯಾಗಿತ್ತು.

ಹಿಂದೂಗಳು ಅಧಿಕವಿರುವ ಪ್ರದೇಶದಲ್ಲಿ ಬಳೆ ಮಾರಿದ್ದಕ್ಕೆ ವ್ಯಕ್ತಿಗೆ ಥಳಿತ: ಎಂಪಿ ಸಿಎಂ ವಿರುದ್ದ ಕಾಂಗ್ರೆಸ್‌ ಕಿಡಿಹಿಂದೂಗಳು ಅಧಿಕವಿರುವ ಪ್ರದೇಶದಲ್ಲಿ ಬಳೆ ಮಾರಿದ್ದಕ್ಕೆ ವ್ಯಕ್ತಿಗೆ ಥಳಿತ: ಎಂಪಿ ಸಿಎಂ ವಿರುದ್ದ ಕಾಂಗ್ರೆಸ್‌ ಕಿಡಿ

ಹಾಗೆಯೇ ಈ ಬಗ್ಗೆ ಮಾತನಾಡಿದ್ದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ, "ಈ ವ್ಯಕ್ತಿಯು ತಾನು ಹಿಂದೂ ಎಂದು ಹೇಳಿಕೊಂಡು ಮಹಿಳೆಯರಿಗೆ ಬಳೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಆತನಿಗೆ ಥಳಿಸಲಾಗಿದೆ," ಎಂದು ಹೇಳಿಕೊಂಡಿದ್ದರು. ಆದರೆ ಈಗ ತಸ್ಲಿಮ್‌ ಆಲಿ ವಿರುದ್ದ ಪೋಕ್ಸೂ ಪ್ರಕರಣ ದಾಖಲು ಮಾಡಲಾಗಿದೆ. 13 ವರ್ಷದ ಬಾಲಕಿಯ ಮೇಲೆ ತಸ್ಲಿಮ್‌ ಆಲಿ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಲಾಗಿದೆ. ಹಾಗೆಯೇ ಆತ ತನ್ನ ಗುರುತಿನ ಬಗ್ಗೆ ನಕಲಿ ದಾಖಲೆಯನ್ನು ನೀಡಿದ್ದಾನೆ ಎಂದು ಕೂಡಾ ದೂರಲಾಗಿದೆ.

Indore bangle seller, who was beaten up by mob, arrested in molestation case

ಮಂಗಳವಾರು ತಸ್ಲಿಮ್‌ ಆಲಿಯನ್ನು ಆರನೇ ತರಗತಿಯ ಬಾಲಕಿಯ ಮೇಲೆ ಕಿರುಕುಳದ ಆರೋಪದ ಹಿನ್ನೆಲೆ ದೂರು ದಾಖಲು ಮಾಡಿ ಬಂಧನ ಮಾಡಲಾಗಿದೆ. ಬುಧವಾರ ಆತನನ್ನು ಕೋರ್ಟ್ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಈ ನಡುವೆ ಇಂದೋರ್‌ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಐಪಿಸಿಯ ಏಳು ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲು ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

ತಸ್ಲಿಮ್‌ ವಿರುದ್ದ ಆಗಸ್ಟ್‌ 23 ರಂದು ಅಂದರೆ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಲಾದ ಸಮಯದ 27 ಗಂಟೆಗಳ ನಂತರ ದೂರು ದಾಖಲು ಮಾಡಲಾಗಿದೆ. ಇನ್ನು ಈ ಸಂತ್ರಸ್ತ ಬಾಲಕಿಯು ಕೂಡಾ ಈ ದೂರಿನಲ್ಲಿ ಹೇಳಿಕೆ ನೀಡಿದ್ದಾಳೆ. "ಆಗಸ್ಟ್‌ 22 ರಂದು ಭಾನುವಾರು ನಾನು ನನ್ನ ತಾಯೊಯೊಂದಿಗೆ ಮನೆಯಲ್ಲಿ ಇದ್ದೆ. ಮಧ್ಯಾಹ್ನ 2 ಗಂಟೆಗೆ ಈ ವ್ಯಕ್ತಿ ಬಳೆ ಮಾರಾಟ ಮಾಡುವ ನೆಪದಲ್ಲಿ ನಮ್ಮ ಮನೆಗೆ ಬಂದ," ಎಂದು ಹೇಳಿದ್ದಾಳೆ ಎನ್ನಲಾಗಿದೆ. ಎಫ್‌ಐಆರ್‌ ಅನ್ನು ಆಗಸ್ಟ್‌ 23 ರಂದು

ಯುಪಿಯಲ್ಲಿ ವ್ಯಕ್ತಿಗೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ 24 ಗಂಟೆಯೊಳಗೆ ಜಾಮೀನುಯುಪಿಯಲ್ಲಿ ವ್ಯಕ್ತಿಗೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ 24 ಗಂಟೆಯೊಳಗೆ ಜಾಮೀನು

ಇಂದೋರ್‌ನ ಗೋವಿಂದ್‌ ನಗರದಲ್ಲಿ ಭಾನುವಾರ ಹಿಂದೂ ಜನರು ಅಧಿಕವಾಗಿರುವ ಪ್ರದೇಶದಲ್ಲಿ ಬಳೆ ಮಾರಾಟ ಮಾಡಿದ ಎಂಬ ಕಾರಣಕ್ಕೆ ಮುಸ್ಲಿಂ ಬಳೆಗಾರನಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಈ ಹಿಂದೆ ವರದಿಯಾಗಿಯತ್ತು. ಅದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಮುಸ್ಲಿಂ ಬಳೆಗಾರನಿಗೆ ಥಳಿಸುವ, ಒದೆಯುವ ದೃಶ್ಯ ಕಂಡು ಬಂದಿದೆ. ಹಾಗೆಯೇ ಈ ಮುಸ್ಲಿಂ ಬಳೆಗಾರ ಇನ್ನು ಮುಂದೆ ಹಿಂದೂಗಳ ಪ್ರದೇಶಕ್ಕೆ ಬರಬಾರದು ಎಂದು ಎಚ್ಚರಿಕೆಯನ್ನು ಕೂಡಾ ಈ ಗುಂಪು ನೀಡಿರುವುದು ಕಂಡು ಬಂದಿದೆ. ಗೆಯೇ ಆತನ ಚೀಲದಲ್ಲಿದ್ದ ಬಳೆಗಳನ್ನು ಹೊರತೆಗೆಯಲಾಗಿದ್ದು, ಆತ ಜೇಬಿನಲ್ಲಿದ್ದ ಎಲ್ಲಾ ವಸ್ತುಗಳನ್ನು ಹಣವನ್ನು ಕೂಡಾ ತೆಗೆದುಕೊಳ್ಳಲಾಗಿರುವ ದೃಶ್ಯ ಕೂಡಾ ಕಾಣಬಹುದಾಗಿದೆ.

ಇನ್ನು ಈ ಬಗ್ಗೆ ಸಂತ್ರಸ್ತನ್ನು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ ಎಂದು ವರದಿಯಾಗಿತ್ತು. ಈ ವಿಚಾರದ ಬಗ್ಗೆ ವಿಡಿಯೋ ಜೊತೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ಇಮ್ರಾನ್‌ ಪ್ರತಾಪ್‌ಗಿರಿ, "ಈ ವೀಡಿಯೋ ಅಫ್ಘಾನಿಸ್ತಾನದ್ದಲ್ಲ, ಇಂದೋರ್‌ನಲ್ಲಿ ನಡೆದಿದ್ದು. ಮಧ್ಯಪ್ರದೇಶದಲ್ಲಿ ಚೌಹಣ್ ಶಿವರಾಜ್ ಜೀ ಅವರ ಕನಸಿನ ರಾಜ್ಯದಲ್ಲಿ ನಡೆದಿದೆ. ಬಳೆ ಮಾರಾಟಗಾರನ ಸರಕುಗಳನ್ನು ಲೂಟಿ ಮಾಡಲಾಗಿದೆ ಮತ್ತು ಸಾರ್ವಜನಿಕವಾಗಿ ಜನರು ಹಲ್ಲೆ ನಡೆಸಿದ್ದಾರೆ," ಎಂದು ತಿಳಿಸಿದ್ದರು. ಹಾಗೆಯೇ ಬಳಿಕ ಈ ಹಲ್ಲೆ ಮಾಡಿದ 14 ಮಂದಿಯ ವಿರುದ್ದ ದೂರು ದಾಖಲಾಗಿತ್ತು.

(ಒನ್‌ ಇಂಡಿಯಾ ಸುದ್ದಿ)

English summary
Indore bangle seller, who was beaten up by mob, arrested after he was accused of molesting a minor girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X