• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಭೀತಿ ನಡುವೆ ಚೀನೀ ಯುವತಿ, ಭಾರತದ ಯುವಕನ ಮದುವೆ

|

ಭೋಪಾಲ್, ಫೆಬ್ರವರಿ 3: ಕೊರೊನಾವೈರಸ್ ಸೃಷ್ಟಿಸಿರುವ ಭೀತಿಯಿಂದಾಗಿ ಜನರು ಚೀನಾದೆಡೆಗೆ ಆತಂಕದಿಂದಲೇ ನೋಡುತ್ತಿದ್ದಾರೆ. ಚೀನಾದಿಂದ ಬರುವ ಪ್ರತಿವಸ್ತುವಿನಿಲ್ಲಿಯೂ ಕೊರೊನಾ ವೈರಸ್ ಇದೆಯೇನೋ ಎಂಬ ಅನುಮಾನ ಮೂಡುವಂತಿದೆ. ಆದರೆ ಈಗ ಗೊಂದಲಗಳ ನಡುವೆಯೇ ಭಾರತದ ಯುವಕನೊಬ್ಬ ಚೀನಾದ ಮಹಿಳೆಯೊಂದಿಗೆ ಭಾನುವಾರ ಸಪ್ತಪದಿ ತುಳಿದಿದ್ದಾನೆ.

ಚೀನಾ ಮತ್ತು ಭಾರತದ ಜನರ ನಡುವಿನ ಮದುವೆ ಹೊಸತೇನಲ್ಲ. ಆದರೆ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಈ ಮದುವೆ ಹೆಚ್ಚು ಗಮನ ಸೆಳೆದಿದೆ. ಮದುವೆಗಾಗಿ ವಧು ಝಿಹಾವೊ ಮತ್ತು ಆಕೆಯ ಕುಟುಂಬ ಮಧ್ಯಪ್ರದೇಶದ ಮಂದಸೌರ್‌ಗೆ ಬುಧವಾರ ಆಗಮಿಸಿದಾಗ ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅವರ 'ಆರೋಗ್ಯಪೂರ್ವಕ ಸ್ವಾಗತ'ಕ್ಕೆ ತುದಿಗಾಲಲ್ಲಿ ನಿಂತಿದ್ದರು.

ಏಕೆಂದರೆ, ಈ ಕುಟುಂಬ ಚೀನಾದಿಂದ ಬಂದಿತ್ತು. ಮದುವೆಯ ಸಂಭ್ರಮದ ನಡುವೆ ಸಹಜವಾಗಿಯೇ ಆತಂಕವೂ ಇತ್ತು. ಹೀಗಾಗಿ ಗಟ್ಟಿಮೇಳಕ್ಕೂ ಮುನ್ನ ಆಸ್ಪತ್ರೆಯಲ್ಲಿ ಕೂಲಂಕಷ ತಪಾಸಣೆಗೆ ಒಳಗಾಗುವುದು ಅನಿವಾರ್ಯವಾಗಿತ್ತು.

ಪ್ರತಿದಿನವೂ ಬೀಗರ ತಪಾಸಣೆ

ಪ್ರತಿದಿನವೂ ಬೀಗರ ತಪಾಸಣೆ

ಪಟ್ಟಣಕ್ಕೆ ಬಂದ ಝಿಹಾವೊ ಮತ್ತು ಅವರ ಕುಟುಂಬದ ಸದಸ್ಯರನ್ನು ಐದರಿಂದ ಆರು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ತಂಡ ತಪಾಸಣೆಗೆ ಒಳಪಡಿಸಿದೆ ಎಂದು ಮಂದಸೌರ್ ಜಿಲ್ಲಾಸ್ಪತ್ರೆ ಸಿವಿಲ್ ಸರ್ಜನ್ ಡಾ. ಎ.ಕೆ. ಮಿಶ್ರಾ ತಿಳಿಸಿದರು.

'ಅವರಲ್ಲಿ ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡುಬರದೆ ಇದ್ದರೂ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಈ ತಪಾಸಣೆ ಮಾಡಿದ್ದೇವೆ. ಯಾವುದಾದರೂ ಕ್ಷಣದಲ್ಲಿ ಅವರಲ್ಲಿ ಯಾವುದೇ ಲಕ್ಷಣ ಕಂಡುಬಂದರೂ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ' ಎಂದು ಹೇಳಿದರು.

ಇವರೇ.. ಮೊದಲ ಏಳು ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡಿದ್ದು

ತಪಾಸಣೆಗೆ ಸಹಕಾರ

ತಪಾಸಣೆಗೆ ಸಹಕಾರ

ಚೀನಾದಿಂದ ಬಂದ 'ಬೀಗರು' ಈ ಕಡ್ಡಾಯ ತಪಾಸಣೆಗಳಿಗೆ ಕೋಪಗೊಂಡಿಲ್ಲ. ಅವರಿಗೆ ಪರಿಸ್ಥಿತಿ ಅರ್ಥವಾಗಿರುವುದರಿಂದ ಪ್ರತಿದಿನವೂ ತಪಾಸಣೆಗೆ ಒಳಪಡುವ ಕಡ್ಡಾಯ ನಿಯಮವನ್ನು ತಕರಾರಿಲ್ಲದೆ ಪಾಲಿಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ಕ್ರಮವನ್ನು ಅವರೂ ಶ್ಲಾಘಿಸುತ್ತಿದ್ದಾರೆ ಎಂದು ವೈದ್ಯರು ಖುಷಿಯಿಂದ ಹೇಳಿಕೊಂಡರು.

ಕೆನಡಾದಲ್ಲಿ ಹುಟ್ಟಿದ ಪ್ರೀತಿ

ಕೆನಡಾದಲ್ಲಿ ಹುಟ್ಟಿದ ಪ್ರೀತಿ

ಝಿಹಾವೋ ಮತ್ತು ಆಕೆಯ ಪತಿ ಸತ್ಯಾರ್ಥ್ ಮಿಶ್ರಾ ಇಬ್ಬರೂ ಕೆನಡಾದ ಶೆರಿಡನ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳ ಹಿಂದೆ ಸಹಪಾಠಿಗಳಾಗಿದ್ದರು. ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಎರಡೂ ಕಡೆಯ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಲು ನಿರ್ಧರಿಸಿದರು. ಭಾನುವಾರ ಸತ್ಯಾರ್ಥ್‌ ಅವರ ತವರಿನಲ್ಲಿ ಇಬ್ಬರೂ ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದರು. ಶನಿವಾರ ಇಬ್ಬರ ನಿಶ್ಚಿತಾರ್ಥ ನಡೆದಿತ್ತು.

ನಮ್ಮೂರಲ್ಲಿ ವೈರಸ್ ಇಲ್ಲ

ನಮ್ಮೂರಲ್ಲಿ ವೈರಸ್ ಇಲ್ಲ

ಝಿಹಾವೊ ಮತ್ತು ಅವರ ಪೋಷಕರು ಜ. 29ರಂದು ಭಾರತಕ್ಕೆ ಬಂದಿದ್ದರು. ಭಾರತದ ಕೆಲವು ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿರುವ ಅವರು, ಚೀನಾಕ್ಕೆ ಮರಳುವ ಮುನ್ನ ಮತ್ತಷ್ಟು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸಿದ್ದಾರೆ. ಪ್ರತಿದಿನವೂ ತಮ್ಮನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ನಿಯಮಕ್ಕೆ ಸಹಕರಿಸಲು ಯಾವುದೇ ತೊಂದರೆ ಇಲ್ಲ. ಹಾಗೆಯೇ ನಮ್ಮ ಪಟ್ಟಣದಲ್ಲಿ ವೈರಸ್ ಇಲ್ಲ. ಹೀಗಾಗಿ ಊರಿಗೆ ವಾಪಸಾಗಲು ಕೂಡ ಸಮಸ್ಯೆ ಇಲ್ಲ ಎಂದು ಝಿಹಾವೊ ತಂದೆ ಶಿಬೊ ತಿಳಿಸಿದರು.

ಹೆಂಡತಿಯ ಇನ್ನೂ ನಾಲ್ವರು ಸಂಬಂಧಿಕರು ಚೀನಾದಿಂದ ಮದುವೆಗೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ವೀಸಾ ಸಿಗದೆ ಅವರು ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಚೀನಾದಲ್ಲಿಯೇ ಉಳಿದುಕೊಳ್ಳಬೇಕಾಯಿತು ಎಂದು ಸತ್ಯಾರ್ಥ್ ತಿಳಿಸಿದರು.

English summary
Indian man and Chinese lady tie knot on Sunday in Madhya Pradesh's Mandsaur amid the fear of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X