ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯುಪಡೆ ಜೆಟ್ ಪತನ; ಪೈಲಟ್ ಸುರಕ್ಷಿತ

|
Google Oneindia Kannada News

ಭೋಪಾಲ್, ಅಕ್ಟೋಬರ್ 21: ಭಾರತೀಯ ವಾಯುಪಡೆಯ ಟ್ರೈನರ್ ಜೆಟ್ ಐಎಎಫ್ ಮಿರಾಜ್- 2000 ಗುರುವಾರ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಬಳಿ ಪತನಗೊಂಡಿದೆ.

ವಾಯುಪಡೆ ಜೆಟ್ ವಿಮಾನ ಮಿರಾಜ್- 2000 ಪತನದ ವೇಳೆ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದು, ಅವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಮಧ್ಯಪ್ರದೇಶದ ಭಿಂಡ್‌ನಿಂದ 6 ಕಿ.ಮೀ ದೂರದಲ್ಲಿರುವ ಮಂಕಾಬಾದ್‌ನ ಖಾಲಿ ಮೈದಾನದಲ್ಲಿ ಅವಶೇಷಗಳು ಬಿದ್ದಿರುವುದು ವಿಡಿಯೋದಲ್ಲಿದೆ. ಅಪಘಾತಕ್ಕೀಡಾದ ಸ್ಥಳದ ಸುತ್ತಲೂ ಪೊಲೀಸರ ತಂಡವು ಸುತ್ತುವರಿದಿದೆ. ಟ್ರೈನರ್ ಜೆಟ್‌ನ ಬಾಲ ಅರ್ಧದಷ್ಟು ಹೊಲದಲ್ಲಿ ಹೂತುಹೋಗಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Indian Air Force Jet Collapse In Madhya Pradesh; The Pilot Is Safe

ಭಾರತೀಯ ವಾಯುಪಡೆ ಟ್ವೀಟ್
ಐಎಎಫ್ ಮಿರಾಜ್ 2000 ವಿಮಾನದಲ್ಲಿ ಇಂದು ಬೆಳಿಗ್ಗೆ ಕೇಂದ್ರ ವಲಯದಲ್ಲಿ ತರಬೇತಿ ನೀಡುವಾಗ ತಾಂತ್ರಿಕ ದೋಷ ಕಂಡು ಬಂದಿದೆ. ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

English summary
Indian Air Force Trainer Jet IAF Mirage- 2000 crashed near Madhya Pradesh's Bhind district on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X