ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಕೊರೊನಾ ಸೋಂಕಿಗೆ ಮೊದಲ ವೈದ್ಯ ಬಲಿ

|
Google Oneindia Kannada News

ಭೋಪಾಲ್, ಏಪ್ರಿಲ್ 9: ಕೊಳೆಗೇರಿ ಜನರ ಪಾಲಿಗೆ ದೇವರಾಗಿದ್ದ ವೈದ್ಯರೊಬ್ಬರನ್ನು ಕೊರೊನಾ ಬಲಿ ಪಡೆದಿದೆ.

ದೇಶದಲ್ಲಿ ಕೊರೊನಾಗೆ ಮೃತಪಟ್ಟ ಮೊದಲ ವೈದ್ಯರು ಇವರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.ಇವರು ಕೊರೊನಾ ಸೋಂಕಿತರ ಸೇವೆಯಲ್ಲಿ ತಪಡಗಿರದೇ ಇದ್ದರೂ ನಿತ್ಯ ಕೊಳೆಗೇರಿ ಜನರ ಸೇವೆಯಲ್ಲಿ ತೊಡಗಿರುತ್ತಿದ್ದರು.

ಡಾ. ಶತ್ರುಘ್ನ ಪಂಜವಾನಿ ಮೃತ ವೈದ್ಯರಾಗಿದ್ದಾರೆ. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು. ಇವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇವರ ಸಾವಿನೊಂದಿಗೆ ಇಂದೋರ್‌ನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಇದುವರೆಗೆ 28 ಮಂದಿ ಮೃತಪಟ್ಟಿದ್ದಾರೆ.ಡಾ, ಶತ್ರುಘ್ನ ಅವರು ಸದಾ ಬಡವರ ಸೇವೆಯಲ್ಲಿ ತೊಡಗಿರುತ್ತಿದ್ದರು.

India Records First Doctor Death In Indore Due To Coronavirus

ಹಣ ಇಲ್ಲ ಎಂದು ಬಂದ ಬಡ ರೋಗಿಗಳಿಂದ ಎಂದಿಗೂ ಹಣ ಪಡೆಯುತ್ತಿರಲಿಲ್ಲ. ಅವರ ಸೇವೆಯಲ್ಲೇ ತೃಪತಿ ಕಾಣುತ್ತಿದ್ದರು ಎಂದು ಅಲ್ಲಿ ನಿವಾಸಿಗಳು ತಿಳಿಸಿದ್ದಾರೆ. ಎಲ್ಲಾ ಕಳೆಗೇರಿಗಳಿಗೆ ತೆರಳಿ ತಪಾಸಣೆ ನಡೆಸುತ್ತಿದ್ದರು. ಕೊರೊನಾ ಸೋಂಕಿತರನ್ನು ಪರೀಕ್ಷೆ ಮಾಡಿದ್ದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

English summary
A doctor, who had tested positive for Coronavirus earlier this week here, succumbed to the illness on Thursday. This is the first case in India where a doctor died of the dreaded virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X