ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೋವಿಡ್‌ ಸಂದರ್ಭ ಬಡವರಿಗೆ ಆದ್ಯತೆ ನೀಡಲಾಗಿದೆ': ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಆ.07: ''ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಸರ್ಕಾರವು ಬಡವರಿಗೆ ಹೆಚ್ಚಿನ ಆದ್ಯತೆ ನೀಡಿದೆ,'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್‌ 7 ರ ಶನಿವಾರದಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರದ ಹೋರಾಟದಲ್ಲಿ ಬಡವರಿಗೆ ಆದ್ಯತೆ ನೀಡುವ ತನ್ನ ಸರ್ಕಾರದ ಕಾರ್ಯತಂತ್ರದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಈ ಸಂವಾದವು ನಡೆದಿದೆ.

"ಕೊರೊನಾ ವೈರಸ್‌ ಸೋಂಕಿನ ಸಂದರ್ಭದಲ್ಲಿ ಕಾಣಿಸಿಕೊಂಡ ಬಿಕ್ಕಟ್ಟನ್ನು ಎದುರಿಸುವ ತನ್ನ ಕಾರ್ಯತಂತ್ರದಲ್ಲಿ ಭಾರತ ಬಡವರಿಗೆ ಮೊದಲ ಆದ್ಯತೆ ನೀಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಥವಾ ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಆಗಿರಲಿ, ನಾವು ಮೊದಲ ದಿನದಿಂದಲೇ ಬಡವರ ಆಹಾರ ಮತ್ತು ಉದ್ಯೋಗದ ಬಗ್ಗೆ ಯೋಚಿಸಿದ್ದೇವೆ," ಎಂದು ಪ್ರಧಾನಿ ಮೋದಿ ಹೇಳಿದರು.

ಜನ ಆಶೀರ್ವಾದ ಯಾತ್ರೆ: ಆ. 16 ರಿಂದ 43 ಕೇಂದ್ರ ಸಚಿವರುಗಳಿಂದ ತಲಾ 400 ಕಿಮೀ ಪ್ರಯಾಣಜನ ಆಶೀರ್ವಾದ ಯಾತ್ರೆ: ಆ. 16 ರಿಂದ 43 ಕೇಂದ್ರ ಸಚಿವರುಗಳಿಂದ ತಲಾ 400 ಕಿಮೀ ಪ್ರಯಾಣ

''ಕೊರೊನಾ ವೈರಸ್‌ ಸಾಂಕ್ರಾಮಿಕ ಸಂದರ್ಭದಲ್ಲಿ 80 ಕೋಟಿ ಭಾರತೀಯರು ಸರ್ಕಾರದ ವತಿಯಿಂದ ಉಚಿತ ಪಡಿತರವನ್ನು ಪಡೆದಿದ್ದಾರೆ. ಅದರಲ್ಲಿ ಐದು ಕೋಟಿ ಜನರು ಮಧ್ಯಪ್ರದೇಶದವರು," ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, "ಕೇವಲ ಗೋಧಿ, ಅಕ್ಕಿ ಅಥವಾ ದ್ವಿದಳ ಧಾನ್ಯಗಳು ಮಾತ್ರವಲ್ಲದೆ 8 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಲಾಕ್‌ಡೌನ್ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಸಹ ನೀಡಲಾಯಿತು. 20 ಕೋಟಿಗೂ ಹೆಚ್ಚು ಮಹಿಳೆಯರು ತಮ್ಮ ಜನ್ ಧನ್ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ರು. 30,000 ಕೋಟಿಗಳನ್ನು ಪಡೆದರು," ಎಂದು ಮೋದಿ ತಿಳಿಸಿದರು.

 India gave first priority to the poor during Covid-19 pandemic says PM Modi

ಕಳೆದ 100 ವರ್ಷಗಳಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗವು ಮಾನವ ಜನಾಂಗವು ಎದುರಿಸಿದ ಅತಿದೊಡ್ಡ ವಿಪತ್ತು ಎಂದು ವಿವರಿಸಿದ ಪ್ರಧಾನ ಮಂತ್ರಿ, ಕೊರೊನಾ ವೈರಸ್‌ ಹರಡುವುದನ್ನು ತಡೆಯಬೇಕಾದರೆ ಮಾಸ್ಕ್‌ ಧರಿಸುವುದನ್ನು ಮುಂದುವರಿಸಬೇಕು, ಕೈಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಸಾಮಾಜಿಕ ದೂರ ಕ್ರಮಗಳನ್ನು ಅನುಸರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಗರೀಬ್ ಕಲ್ಯಾಣ್ ಅನ್ನ ಯೋಜನೆ ಹೊರತಾಗಿ, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆಯೂ ಪ್ರಧಾನಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ವೇಳೆ ಬೆಳಕು ಚೆಲ್ಲಿದರು. ಹಾಗೆಯೇ ಫಲಾನುಭವಿಗಳಿಗೆ ಈ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ಆದ ಪ್ರಯೋಜನಗಳ ಬಗ್ಗೆ ಪ್ರಶ್ನಿಸಿದರು. ಖಾದಿಯ ಮೇಲೆ ವಿಶೇಷ ಗಮನ ಕೇಂದ್ರೀಕರಿಸುವ ಮೂಲಕ 'ಸ್ಥಳೀಯವಾಗಿ ಗಾಯನ' ಉಪಕ್ರಮಕ್ಕಾಗಿ ಪಿಎಂ ಮೋದಿಯವರು ತಮ್ಮ ಕರೆಯನ್ನು ಪುನರುಚ್ಚರಿಸಿದರು.

'ಪೆಗಾಸಸ್‌ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ'ಪೆಗಾಸಸ್‌ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ

ಈ ವಲಯದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಭಾರತೀಯರು ಹಬ್ಬದ ಸಮಯದಲ್ಲಿ ಕರಕುಶಲ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸಿದರು. "ಒಂದು ಕಾಲದಲ್ಲಿ ಮರೆತಿದ್ದ ಖಾದಿ ಇಂದು ಹೊಸ ಬ್ರಾಂಡ್ ಆಗಿ ಮಾರ್ಪಟ್ಟಿದೆ. ಈಗ ನಾವು 100 ವರ್ಷಗಳ ಸ್ವಾತಂತ್ರ್ಯದತ್ತ ಹೊಸ ಪಯಣವನ್ನು ನಡೆಸುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ನಾವು ಖಾದಿಯ ಬಳಕೆ ಹೆಚ್ಚಿನ, ಖಾದಿ ಬಗ್ಗೆ ಇರುವ ಮನೋಭಾವವನ್ನು ಬಲಪಡಿಸಬೇಕು. ಸ್ವಾವಲಂಬಿ ಭಾರತಕ್ಕಾಗಿ, ನಾವು ಸ್ಥಳೀಯರಿಗಾಗಿ ಧ್ವನಿಯೆತ್ತಬೇಕು," ಎಂದು ದೇಶೀಯ ಉತ್ಪನ್ನಗಳ ಬಳಕೆಯ ಬಗ್ಗೆ ಒತ್ತಿ ಹೇಳಿದರು.

ನರೇಂದ್ರ ಮೋದಿಯವರ 'ಮನ್‌ ಕಿ ಬಾತ್‌'ನಿಂದ ಕೇಂದ್ರಕ್ಕೆ ಬಂದ ಆದಾಯವೆಷ್ಟು?ನರೇಂದ್ರ ಮೋದಿಯವರ 'ಮನ್‌ ಕಿ ಬಾತ್‌'ನಿಂದ ಕೇಂದ್ರಕ್ಕೆ ಬಂದ ಆದಾಯವೆಷ್ಟು?

ಮಧ್ಯಪ್ರದೇಶ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಯತ್ನವನ್ನು ಈ ಸಂದರ್ಭದಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು. ಪ್ರವಾಹವನ್ನು ಎದುರಿಸಲು ಮಧ್ಯಪ್ರದೇಶ ರಾಜ್ಯ ಸರ್ಕಾರಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗಿದೆ ಎಂದು ಹೇಳಿದರು. "ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮುಖ್ಯಮಂತ್ರಿಯ ಸಂಪೂರ್ಣ ತಂಡವು ಸ್ಥಳಗಳಿಗೆ ಹೋಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಎನ್‌ಡಿಆರ್‌ಎಫ್, ಕೇಂದ್ರ ಪಡೆಗಳು ಅಥವಾ ವಾಯುಪಡೆಯಾಗಲಿ, ಈ ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ರಾಜ್ಯ ಸರ್ಕಾರಕ್ಕೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಸಂವಾದದ ಸಂದರ್ಭದಲ್ಲಿ ತಿಳಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
PM Narendra Modi during his interaction with the beneficiaries of PM-GKAY in Madhya Pradesh on August 7th, said that India gave first priority to the poor during the COVID-19 pandemic crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X