ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಗೆ ತೆರಳಲು ಭಯಪಟ್ಟು ಕೊರೊನಾ ಸೋಂಕಿತರು ಮಾಡಿದ್ದೇನು?

|
Google Oneindia Kannada News

ಭೋಪಾಲ್, ಮೇ 06: ರಸ್ತೆಯಲ್ಲೇ ಕೊರೊನಾ ಸೋಂಕಿತರು ಮಲಗಿದ್ದಾರೆ, ಮರಗಳ ರೆಂಬೆಗೆ ಡ್ರಿಪ್ ಬಾಟಲಿಗಳನ್ನು ತೂಗಿಹಾಕಲಾಗಿದೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಅಂತೂ ಇಲ್ಲವೇ ಇಲ್ಲ ಇದು ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯಲ್ಲಿ ಕಂಡುಬಂದ ಚಿತ್ರಣ

ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ, ಹೀಗಾಗಿ ಪರವಾನಗಿ ಪಡೆಯದ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ಸಮರ್ಪಕವಾಗಿ ಔಷಧ ನೀಡುತ್ತಿಲ್ಲ, ವಿದ್ಯುತ್ ವ್ಯವಸ್ಥೆ ಕೂಡ ಅಲ್ಲಿಲ್ಲ.

ಮದುವೆ ಸಮಾರಂಭಗಳಿಗೆ ಇ-ಪಾಸ್ ಪಡೆಯುವುದು ಹೇಗೆ?ಮದುವೆ ಸಮಾರಂಭಗಳಿಗೆ ಇ-ಪಾಸ್ ಪಡೆಯುವುದು ಹೇಗೆ?

ಹೆದ್ದಾರಿಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಕಿತ್ತಳೆ ತೋಪಿನಲ್ಲಿ ಕಾರ್ಡ್‌ಬೋರ್ಡ್ ಶೀಟ್‌ಗಳನ್ನು ಹಾಕಿ ರೋಗಿಗಳು ಮಲಗಿದ್ದಾರೆ. ಸುಮಾರು 10 ಹಳ್ಳಿಗಳಿಂದ ಜನರು ಚಿಕಿತ್ಸೆಗೆಂದು ಇಲ್ಲಿಗೆ ಧಾವಿಸುತ್ತಿದ್ದಾರೆ, ಆದರೆ ಯಾರೂ ಕೂಡ ಕ್ಯಾಮರಾ ಮುಂದೆ ಮಾತನಾಡಲು ಧೈರ್ಯ ಮಾಡುತ್ತಿಲ್ಲ.

In Rural Madhya Pradesh, A Field Hospital For Covid Run By Quacks

ಸಾಕಷ್ಟು ಮಂದಿ ಮೃತಪಡುತ್ತಿರುವ ಕೋವಿಡ್ ವಾರ್ಡ್‌ಗೆ ನಾವು ದಾಖಲಾಗುವುದಿಲ್ಲ, ವೈದ್ಯಾಧಿಕಾರಿಗಳು ಸರಿಯಾದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಇಲ್ಲವಾದರೆ ನಿಮ್ಮ ಜೀವಕ್ಕೆ ಕುತ್ತು ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮುಖ್ಯ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದಾಗ ಅಲ್ಲಿ ಯಾವುದೇ ವೈದ್ಯರಾಗಲೀ ಅಥವಾ ರೋಗಿಗಳಾಗಲೀ ಇರಲಿಲ್ಲ, ಡ್ರಿಪ್ ಬಾಟಲಿಗಳು ಮಾತ್ರ ಮರಕ್ಕೆ ತೂಗುಹಾಕಿಕೊಂಡಿತ್ತು.

ಈ ಪರವಾನಗಿ ಇಲ್ಲದ ವೈದ್ಯರ ವಿರುದ್ಧ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಅಗರ್ ಮಾಲ್ವಾದಲ್ಲಿ ಕಳೆದ 24 ಗಂಟೆಯಲ್ಲಿ 82 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಬುಧವಾರ ಮಧ್ಯಪ್ರದೇಶದಲ್ಲಿ 12,319 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಒಟ್ಟು 6,24,985 ರೋಗಿಗಳಿದ್ದಾರೆ. 71 ಮಂದಿ ಮೃತಪಟ್ಟಿದ್ದಾರೆ, ಇಲ್ಲಿಯವರೆಗೆ 6074 ಮಂದಿ ಸಾವನ್ನಪ್ಪಿದ್ದಾರೆ.

English summary
Patients lying on the roadside and IV fluid bottles hanging from trees -- that's how treatment is happening in a rural area of Agar-Malwa district in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X