ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಬೆಲ್ಸ್ ಓಲೈಕೆಯಲ್ಲಿ ಕಾಂಗ್ರೆಸ್, ಬಿಜೆಪಿ: ಒಂದು ದಿನದ ನಂತರ ಏನಾದೀತು!

|
Google Oneindia Kannada News

ಭೋಪಾಲ್, ಡಿಸೆಂಬರ್ 10: ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಚುನಾವಣೋತ್ತರ ಸಮೀಕ್ಷೆಗಳು ಮಧ್ಯಪ್ರದೇಶದಲ್ಲಿ 'ಅತಂತ್ರ ವಿಧಾನಸಭೆ'ಯ ಸೂಚನೆ ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 'ಪ್ಲಾನ್-ಬಿ' ಸಿದ್ಧಪಡಿಸಿವೆ!

ಅಕಸ್ಮಾತ್ ಅತಂತ್ರ ವಿಧಾನಸಭೆಯಾದರೆ ಮುಂದೇನು? ಉಭಯ ಪಕ್ಷಗಳಲ್ಲೂ ಇರುವ ರೆಬೆಲ್ ನಾಯಕರನ್ನು ಸೆಳೆಯುವುದು ಸದ್ಯಕ್ಕೆ ಎರಡೂ ಪಕ್ಷಗಳ ಬತ್ತಳಿಕೆಯಲ್ಲಿಯೂ ಇರುವ ಪರಿಣಾಮಕಾರೀ ಬಾಣ!

ಟಿಕೆಟ್ ವಂಚಿತರಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿರುವ ಹಲವರು ಉಭಯ ಪಕ್ಷಗಳಲ್ಲೂ ಕಾಣಸಿಗುತ್ತಾರೆ. ಅವರೆಲ್ಲರ ಸಂಪರ್ಕ ಪಡೆಯುವ ಕೆಲಸವನ್ನು ಇದೀಗ ಉಭಯ ಪಕ್ಷಗಳ ಮುಖಂಡರೂ ಮಾಡುತ್ತಿದ್ದಾರೆ.

ನನಗಿಂತ ದೊಡ್ಡ ಸಮೀಕ್ಷೆ ಯಾವುದಿದೆ : ಚೌಹಾಣ್ ಆತ್ಮವಿಶ್ವಾಸದ ಹೇಳಿಕೆನನಗಿಂತ ದೊಡ್ಡ ಸಮೀಕ್ಷೆ ಯಾವುದಿದೆ : ಚೌಹಾಣ್ ಆತ್ಮವಿಶ್ವಾಸದ ಹೇಳಿಕೆ

ಪಕ್ಷದಿಂದ ಬಂಡಾಯ ಎದ್ದಿದ್ದ ನಾಯಕರು ಮತದಾನಕ್ಕೂ ಮುನ್ನ ಪಕ್ಷದ ವಿರುದ್ಧವೇ ಪ್ರಚಾರ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಹೀಗಿರುವಾಗ ಅವರು ಮತ್ತೆ ಪಕ್ಷಕ್ಕೆ ವಾಪಸ್ಸಾಗುತ್ತಾರಾ? ಎಂಬುದು ಪ್ರಶ್ನೆ.

ಪ್ಲಾನ್ ಬಿ ರೆಡಿಯಾಗಿದೆ!

ಪ್ಲಾನ್ ಬಿ ರೆಡಿಯಾಗಿದೆ!

ಅತಂತ್ರ ವಿಧಾನಸಭೆ ತಲೆದೂರಿದರೆ ಮುಂದೇನು ಎಂಬ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಈಗಾಗಲೇ ಯೋಜನೆ ರೂಪಿಸಿವೆ. ಟಿಕೆಟ್ ಹಂಚಿಕೆಯ ಸಮಯದಲ್ಲಿ ಬಂಡಾಯ ಎದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳನ್ನು ಕಾಂಗ್ರೆಸ್, ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಿಜೆಪಿ ಸಂಪರ್ಕದಲ್ಲಿರಿಸಿಕೊಂಡಿವೆ. ಗೆಲ್ಲಬಲ್ಲ ಅಭ್ಯರ್ಥಿಗಳೊಂದಿಗೇ ಈಗಾಗಲೇ 'ಲೆಕ್ಕಾಚಾರ'ದ ಮಾತುಕತೆಗಳೂ ಆಗುತ್ತಿವೆ!

ವಿಶ್ಲೇಷಣೆ : ಅಕಸ್ಮಾತ್ ಚುನಾವಣೋತ್ತರ ಸಮೀಕ್ಷೆ ಸತ್ಯವಾದರೆ...ವಿಶ್ಲೇಷಣೆ : ಅಕಸ್ಮಾತ್ ಚುನಾವಣೋತ್ತರ ಸಮೀಕ್ಷೆ ಸತ್ಯವಾದರೆ...

ಹೊರಹೋದವರನ್ನು ಮತ್ತೆ ಕರೆತರುವ ಯತ್ನ!

ಹೊರಹೋದವರನ್ನು ಮತ್ತೆ ಕರೆತರುವ ಯತ್ನ!

ಟಿಕೆಟ್ ಸಿಗದೆ ಬಿಜೆಪಿಯನ್ನು ತೊರೆದು ಹೊರಹೋದವರನ್ನು ಓಲೈಸಿ, ಮತ್ತೆ ಪಕ್ಷಕ್ಕೆ ವಾಪಸ್ ಕರೆತರುವ ಯತ್ನವನ್ನೂ ಬಿಜೆಪಿ ಮಾಡುತ್ತಿದೆ. ಬಿಜೆಪಿಗೆ ತಾನು 130-135(200) ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಆದರೆ ಚುನಾವಣೋತ್ತರ ಸಮೀಕ್ಷೆ ಬಿಜೆಪಿಯ ನಿದ್ದೆ ಕೆಡಿಸಿರುವುದರಿಂದ ಯಾವುದಕ್ಕೂ ಇರಲಿ ಎಂದು ಈಗಾಗಲೇ ಬದಲಿ ಯೋಜನೆಯನ್ನು ರೂಪಿಸಲಾಗಿದೆ.

ಸ್ಫೋಟಕ ಮಾಹಿತಿ: ಬಿಜೆಪಿ ಸೋಲಿಸಲು ಬಿಜೆಪಿಯವರಿಂದಲೇ ಶತಯತ್ನ! ಸ್ಫೋಟಕ ಮಾಹಿತಿ: ಬಿಜೆಪಿ ಸೋಲಿಸಲು ಬಿಜೆಪಿಯವರಿಂದಲೇ ಶತಯತ್ನ!

116 ಬ್ಯಾಜಿಕ್ ನಂಬರ್!

116 ಬ್ಯಾಜಿಕ್ ನಂಬರ್!

230 ಕ್ಷೇತ್ರಗಳ ಮಧ್ಯಪ್ರದೇಶ ಚುನಾವಣೆಯಲ್ಲಿ ಬಹುಮತ ಗಳಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ 116. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಮಬಲದ ಹೋರಾಟ ನಡೆಸಲಿದ್ದು, ಬಹುಮತಕ್ಕೆ ಕೆಲವೇ ಸಂಖ್ಯೆಯ ಅಗತ್ಯವಿರಲಿದೆ. ಆದ್ದರಿಂದ ಬಂಡಾಯ ಅಭ್ಯರ್ಥಿಗಳು ಮತ್ತು ಪಕ್ಷೇತರರು ಈ ವೇಳೆಗೆ ದುಬಾರಿಯಾಗಲಿದ್ದಾರೆ!

ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ!

ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ!

ಕಳೆದ ಮೂರು ಅವಧಿಗೆ ಈ ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆದರೆ ಇದೀಗ ಆಡಳಿತ ವಿರೋಧಿ ಅಲೆಯಿದಾಗಿ ಬಿಜೆಪಿ ಸೋಲಬಹುದು ಎನ್ನಲಾಗುತ್ತಿದೆ. ಹಾಗೊಮ್ಮೆ ಆದರೆ ಇದು ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾಗಲಿದೆ. ಲೋಕಸಭಾ ಚುನಾವಣೆಯ ಮೇಲೂ ಇದು ಪರಿಣಾಮ ಬೀರಬಹುದು. ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ಮತದಾನ ನಡೆದಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ.

English summary
One day before the results of Madhya pradesh assembly elections, BJP and Congress leaders are having touch with rebel leaders in both parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X