• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗನ ಪರೀಕ್ಷೆಗಾಗಿ 105 ಕಿ.ಮೀ ಸೈಕಲ್ ತುಳಿದ ತಂದೆ!

|

ಭೋಪಾಲ್, ಆಗಸ್ಟ್.20: ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ 38 ವರ್ಷದ ತಂದೆಯು 15 ವರ್ಷದ ತನ್ನ ಮಗ ಆಶಿಷ್ ಎಂಬಾತನನ್ನು ಕರೆದುಕೊಂಡು 105 ಕಿಲೋ ಮೀಟರ್ ಸೈಕಲ್ ನಲ್ಲಿ ಕ್ರಮಿಸಿದ ಘಟನೆಯು ಮಧ್ಯಪ್ರದೇಶದಲ್ಲಿ ನಡೆದಿದೆ.

10ನೇ ತರಗತಿ ಓದುತ್ತಿದ್ದ ಮಗನ ಪೂರಕ ಪರೀಕ್ಷೆಗಾಗಿ ತಂದೆ 105 ಕಿಲೋ ಮೀಟರ್ ಸೈಕಲ್ ತುಳಿದಿರುವ ಬಗ್ಗೆ ವರದಿಯಾಗಿದೆ. ಪೂರಕ ಪರೀಕ್ಷೆಯನ್ನು ತಪ್ಪಿಸಿಕೊಂಡಲ್ಲಿ ಒಂದು ವರ್ಷ ವ್ಯರ್ಥವಾಗುತ್ತದೆ. ಶಿಕ್ಷಣದ ಈ ಮೌಲ್ಯವನ್ನು ಅರಿತಿರುವ ಹಿನ್ನೆಲೆ ಸೈಕಲ್ ನಲ್ಲಿ ತಮ್ಮ ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿರುವ ಬಗ್ಗೆ ತಂದೆ ಶೋಭ್ರಾಮ್ ತಿಳಿಸಿದ್ದಾರೆ.

ಬೆಳಗಾವಿ; ಸ್ಥಳೀಯರ ಅಸಹಕಾರ, ಸೈಕಲ್‌ನಲ್ಲಿ ಶವ ಸಾಗಣೆ

ಧಾರ್ ಜಿಲ್ಲೆಯ ಬಾಯ್ದಿಪುರ್ ಮೂಲದ ಶೋಭ್ರಾಮ್ ತಮ್ಮ ಮಗನನ್ನು ಸೈಕಲ್ ಹಿಂದಿನ ಸೀಟ್ ನಲ್ಲಿ ಕೂರಿಸಿಕೊಂಡು 105 ಕಿ.ಮೀ ದೂರದ ಮನವಾರ್ ತೆಹ್ಸಿಲ್ ನಲ್ಲಿರುವ ಪರೀಕ್ಷೆ ಕೇಂದ್ರದವರೆಗೂ ಕರೆದುಕೊಂಡು ಹೋಗಿರುವ ಸುದ್ದಿ ಇದೀಗ ಸಾಕಷ್ಟು ಸದ್ದು ಮಾಡಿದೆ.

'ರುಕ್ ಜಾನ್ ನಹೀನ್' ಯೋಜನೆ ಪರಿಚಯಿಸಿದ ಸರ್ಕಾರ

'ರುಕ್ ಜಾನ್ ನಹೀನ್' ಯೋಜನೆ ಪರಿಚಯಿಸಿದ ಸರ್ಕಾರ

ಕೊರೊನಾವೈರಸ್ ಭೀತಿ ಮತ್ತು ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಅನೇಕ ವಿದ್ಯಾರ್ಥಿಗಳು 10ನೇ ತರಗತಿ ಅಂತಿಮ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಇನ್ನು ಕೆಲವು ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲಿ ಅನುತ್ತೀರ್ಥಗೊಂಡಿದ್ದರು. ಅಂಥ ವಿದ್ಯಾರ್ಥಿಗಳಿಗಾಗಿ ಮಧ್ಯಪ್ರದೇಶ ಸರ್ಕಾರವು ರುಕ್ ಜಾನ್ ನಹೀನ್ ಯೋಜನೆ ಜಾರಿಗೊಳಿಸಿತ್ತು. ಅಂದರೆ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿತ್ತು.

ಮಗನಿಗಾಗಿ 105 ಕಿಲೋ ಮೀಟರ್ ಸೈಕಲ್ ತುಳಿದ ತಂದೆ

ಮಗನಿಗಾಗಿ 105 ಕಿಲೋ ಮೀಟರ್ ಸೈಕಲ್ ತುಳಿದ ತಂದೆ

ಇತ್ತೀಚಿಗೆ ನಡೆಸಿದ 10ನೇ ತರಗತಿಯ ಪೂರಕ ಪರೀಕ್ಷೆಗೆ ಹಾಜರಾಗಲು ಸರಿಯಾದ ಸಾರಿಗೆ ವ್ಯವಸ್ಥೆಯಿರಲಿಲ್ಲ. ಈ ಬಾರಿ ಪರೀಕ್ಷೆಯಿಂದ ತಪ್ಪಿಸಿಕೊಂಡಲ್ಲಿ ತಮ್ಮ ಮಗನ ಮುಂದಿನ ಒಂದು ವರ್ಷ ವ್ಯರ್ಥವಾಗುತ್ತಿತ್ತು. ಹೀಗಾಗಿ ಸೈಕಲ್ ನಲ್ಲಿಯೇ 105 ಕಿಲೋ ಮೀಟರ್ ಕರೆದುಕೊಂಡು ಹೋಗಲು ತೀರ್ಮಾನಿಸಿದೆ ಎಂದು ತಂದೆ ಶುಭ್ರಾಮ್ ತಿಳಿಸಿದ್ದಾರೆ.

ಬೈಕ್ ಕೊಂಡುಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ

ಬೈಕ್ ಕೊಂಡುಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ

"ತುರ್ತು ಸಂದರ್ಭದಲ್ಲಿ ಬೈಕ್ ಕೊಂಡುಕೊಳ್ಳುವ ಸಾಮರ್ಥ್ಯವು ಇರಲಿಲ್ಲ. ಯಾರೊಬ್ಬರೂ ಆರ್ಥಿಕ ನೆರವು ನೀಡಲಿಲ್ಲ. ಈ ಸಮಸ್ಯೆಗಳ ಹೊರತಾಗಿಯೂ ನನಗೆ ನನ್ನ ಮಗ ಶೈಕ್ಷಣಿಕ ಬದುಕನ್ನು ಬೆಳಗಿಸುವ ಗುರಿಯೊಂದೇ ಮುಖ್ಯವಾಗಿತ್ತು. ಹಾಗಾಗಿ ಸ್ವತಃ ನಾನು ನನ್ನ ಮಗನನ್ನು ಕರೆದುಕೊಂಡು ಸೈಕಲ್ ನಲ್ಲಿಯೇ ಪರೀಕ್ಷಾ ಕೇಂದ್ರದವರೆಗೂ ಪ್ರಯಾಣಿಸಿದೆನು" ಎಂದು ಶುಭ್ರಾಮ್ ತಿಳಿಸಿದ್ದಾರೆ.

ತಂದೆ-ಮಗನ 3 ದಿನದ ಸೈಕಲ್ ಸಂಚಾರದ ಅನುಭವ

ತಂದೆ-ಮಗನ 3 ದಿನದ ಸೈಕಲ್ ಸಂಚಾರದ ಅನುಭವ

10ನೇ ತರಗತಿ ಪರೀಕ್ಷೆ ಆರಂಭಕ್ಕೂ ಮೂರು ದಿನ ಮೊದಲೇ ತಂದೆ-ಮಗ ಸೈಕಲ್ ಏರಿದ್ದರು. ತಮ್ಮೊಟ್ಟಿಗೆ ಅಗತ್ಯವಿರುವ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಕಳೆದ ಸೋಮವಾರ ರಾತ್ರಿ ಮನಾವರ್ ನಲ್ಲಿ ತಂಗಿದ್ದರು. ಮರುದಿನ ಮಂಗಳವಾರ ಬೆಳಗ್ಗೆ ಪರೀಕ್ಷೆ ಆರಂಭವಾಗುವುದಕ್ಕೂ ಕೆಲವು ಗಂಟೆಗಳ ಮೊದಲೇ ಧಾರ್ ನಲ್ಲಿರುವ ಭೋಜ್ ಶಾಲೆಯ ಪರೀಕ್ಷಾ ಕೇಂದ್ರವನ್ನು ತಲುಪಿದ್ದರು. ತನ್ನ ಪರೀಕ್ಷೆಗಾಗಿ 105 ಕಿಲೋ ಮೀಟರ್ ಸೈಕಲ್ ತುಳಿದ ತಂದೆಯ ಪರಿಶ್ರಮಕ್ಕೆ 15 ವರ್ಷದ ಮಗ ಆಶಿಷ್ ಸಂತಸ ವ್ಯಕ್ತಪಡಿಸಿದ್ದಾರೆ.

English summary
In Absence Of Public Transport, MP Father Cycles 105 KM To Ferry Son To Class 10 Exam Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X