ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ವರನಿಗೆ ಶೌಚಾಲಯದೊಂದಿಗೆ ಸೆಲ್ಫಿ ಕಡ್ಡಾಯ

|
Google Oneindia Kannada News

ಭೋಪಾಲ್, ಅಕ್ಟೋಬರ್ 10: ವರ ನೋಡಲು ಸುಂದರವಾಗಿರಬೇಕು, ಒಳ್ಳೆಯ ಉದ್ಯೋಗವಿರಬೇಕು, ಗಾಡಿ ಇರಬೇಕು, ಮನೆ ಇರಬೇಕು ಎನ್ನುವುದನ್ನು ಕೇಳಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ವರ ಶೌಚಾಲಯದ ಸೆಲ್ಫಿಯನ್ನು ಕೂಡ ನೀಡಬೇಕಾಗಿದೆ.

ಮದುವೆಯಾಗಬೇಕಾದರೆ ವರನಿಗೆ ಶೌಚಾಲಯ ಸೆಲ್ಫಿ ಕಡ್ಡಾಯ ಎಂದು ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹುಡುಗಿ ನೋಡುವ ಶಾಸ್ತ್ರ ಮುಗಿದ ಬಳಿಕ ಹುಡುಗನ ನೋಡುವ ಬದಲಿಗೆ ಆತನ ಮನೆಯಲ್ಲಿ ಶೌಚಗೃಹ ನೋಡಬೇಕಾಗಿದೆ.

'ಅಂತರ್ಜಾತಿಯೋ, ಅಂತರ್ ಧರ್ಮೀಯ ವಿವಾಹವೋ ಹೆಂಡತಿಗೆ ನಿಷ್ಠೆ ಇರಲಿ''ಅಂತರ್ಜಾತಿಯೋ, ಅಂತರ್ ಧರ್ಮೀಯ ವಿವಾಹವೋ ಹೆಂಡತಿಗೆ ನಿಷ್ಠೆ ಇರಲಿ'

ಬಹುಶಃ ವಿವಾಹ ಪೂರ್ವದಲ್ಲಿ ಈ ರೀತಿಯ ಫೋಟೊಶೂಟ್ ಯಾರೂ ಇಷ್ಟಪಡಲಾರರು. ಆದರೆ ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಮುಖ್ಯಮಂತ್ರಿ ಕನ್ಯಾ ವಿವಾಹ ಹಾಗೂ ನಿಖಾ ಯೋಜನೆಯಲ್ಲಿ ಮದುಮಗಳು 51 ಸಾವಿರ ರೂ ನೆರವು ಪಡೆಯಬೇಕಾದರೆ ಶೌಚಾಲಯದ ಮುಂದೆ ಸೆಲ್ಫಿ ತೆಗೆಯುವುದು ಕಡ್ಡಾಯವಾಗಿದೆ.

 If Groom Takes Toilet Selfie Bride Gets Rs 51 000 From Government

ಭಾವಿ ಪತಿ ಮನೆಯಲ್ಲಿ ಶೌಚಾಲಯವಿದೆ ಎಂದು ಪತ್ನಿ ಸಾಬೀತುಪಡಿಸಿದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ಅಧಿಕಾರಿಗಳು ಎಲ್ಲೆಲ್ಲಿ ಶೌಚಾಲಯ ಇದೆ ಎಂದು ಎಲ್ಲಾ ಕಡೆಗಳಲ್ಲಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ವರ ಶೌಚಾಲಯದಲ್ಲಿ ನಿಂತಿರುವ ಸೆಲ್ಫೀಯನ್ನು ಅಧಿಕಾರಿಗಳಿಗೆ ನೀಡಬೇಕಾಗಿದೆ.

ವಿವಾಹಕ್ಕೆ ಮುನ್ನ ವರನ ಮನೆಯಲ್ಲಿ ಶೌಚಾಲಯವಿದೆ ಎಂದು ಸಾಬೀತುಪಡಿಸಬೇಕು ಎನ್ನುವ ನಿಯಮ ತಪ್ಪಲ್ಲ ಎಂದು ಸಾಮಾಜಿಕ ನ್ಯಾಯ ಇಲಾಖೆ ನಿರ್ದೇಶನ ನೀಡಿದೆ.

English summary
In order to avail financial benefits under a government scheme, grooms in Madhya Pradesh are forced to take a selfie standing in the toilet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X