ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

74 ವರ್ಷದ ವ್ಯಕ್ತಿಯೊಬ್ಬರ ತಲೆ ಮೇಲೆ ಬೆಳೆದಿದ್ದ 'ಕೊಂಬಿಗೆ' ಆಪರೇಷನ್

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ಸೆಪ್ಟೆಂಬರ್ 19: 74 ವರ್ಷದ ವ್ಯಕ್ತಿಯೊಬ್ಬರ ತಲೆಯ ಮೇಲೆ 'ಕೊಂಬಿನಂತೆ' ಆಗಿದ್ದ ಬೆಳವಣಿಗೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ಮಧ್ಯಪ್ರದೇಶದ ಬುಂದೇಲ್ ಖಂಡ್ ನ ದೂರದ ಹಳ್ಳಿ ಪಾಟ್ನಾ- ಬುಜುರ್ಗ್ ನಿವಾಸಿ ಶಾಮ್ ಲಾಲ್ ಶಸ್ತ್ರಚಿಕಿತ್ಸೆಗೆ ಒಳಗಾದವರು. ಕೃಷಿಕ ಕುಟುಂಬಕ್ಕೆ ಸೇರಿದ ಅವರಿಗೆ ತಲೆ ಮಧ್ಯ ಭಾಗದಲ್ಲಿ ಕಳೆದ 5 ವರ್ಷದಿಂದ 4 ಇಂಚಿನ ಕೊಂಬಿನಂಥ ಬೆಳವಣಿಗೆ ಆಗುತ್ತಿತ್ತು.

ಐದು ವರ್ಷದ ಹಿಂದೆ ತಲೆಗೆ ಗಾಯವಾಗಿತ್ತು. ಆ ನಂತರ ತಲೆ ಮೇಲೆ ಕೊಂಬಿನಂತೆ ಬೆಳವಣಿಗೆ ಆಗಲು ಆರಂಭವಾಯಿತು. ಅದಾದ ಮೇಲೆ ಸಮಯ ಕಳೆದ ಮೇಲೆ ದೊಡ್ಡದಾಗುತ್ತಾ ಬಂದಿದೆ ಎಂದು ಕಳೆದ ವಾರ ಸಾಗರ್ ನ ಭಾಗ್ಯೋದಯ ತೀರ್ಥ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಸೆಪ್ಟೆಂಬರ್ ಹದಿಮೂರನೇ ತಾರೀಕು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಗಾಜಿನ ಚೂರುಗಳನ್ನು ಕೋಡುಬಳೆ, ಚಕ್ಕುಲಿಯಂತೆ ತಿನ್ನುವ ದಯಾರಾಮ್ ಸಾಹುಗಾಜಿನ ಚೂರುಗಳನ್ನು ಕೋಡುಬಳೆ, ಚಕ್ಕುಲಿಯಂತೆ ತಿನ್ನುವ ದಯಾರಾಮ್ ಸಾಹು

ಆರಂಭದಲ್ಲಿ ಅದು ಹೊರೆಯಂತೆ ಅನಿಸತೊಡಗಿದೆ. ಅಗಾಗ ಬ್ಲೇಡ್ ನಿಂದ ಅದನ್ನು ಕತ್ತರಿಸುತ್ತಿದ್ದರಂತೆ. ಮತ್ತೆ ಬೆಳೆಯುತ್ತಿತ್ತಂತೆ. ಹೀಗೆ ಆಗುತ್ತಿದ್ದಂತೆ ಆಸ್ಪತ್ರೆಯಿಂದ ಆಸ್ಪತ್ರೆಗೆ, ವೈದ್ಯರಿಂದ ವೈದ್ಯರ ಬಳಿಗೆ ಎಡತಾಕಿದ್ದಾರೆ. ಕೊನೆಗೆ ಸಾಗರ್ ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡುವಂತೆ ಸಲಹೆ ಬಂದ ಮೇಲೆ ಈ ಆಸ್ಪತ್ರೆಗೆ ಬಂದು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

Horn Like Growth Removed From 74 Year Old Man

ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿ ಪ್ರಕಾರ, ಕೊಂಬಿನಂಥ ಬೆಳವಣಿಗೆ ತಲೆಯ ಸೆಬಾಸಿಯಸ್ ಗ್ರಂಥಿ ಮೇಲೆ ಆಗುತ್ತಿತ್ತು. ಸೂರ್ಯನಿಗೆ ತೆರೆದುಕೊಂಡಿರುವ ತಲೆಯ ಮೇಲಿನ ಚರ್ಮದ ಮೇಲೆ ಇಂಥ ಬೆಳವಣಿಗೆ ಆಗುತ್ತದೆ. ಇದನ್ನು ಸೆಬಾಸಿಯಸ್ ಹಾರ್ನ್ ಎಂದು ಕರೆಯಲಾಗುತ್ತದೆ. ಆದರೆ ಶ್ಯಾಮ್ ಲಾಲ್ ಪ್ರಕರಣದಲ್ಲಿ ಆ 'ಕೊಂಬು' ತೀರಾ ಉದ್ದವಿತ್ತು.

ಸೆಬಾಸಿಯಸ್ ಹಾರ್ನ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದನ್ನು ಈ ವರೆಗೆ ಕೇಳಿರಲಿಲ್ಲ ಎನ್ನುತ್ತಾರೆ ವೈದ್ಯರು. ಇದೀಗ ಶ್ಯಾಮ್ ಲಾಲ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ, 'ಕೊಂಬು' ತೆಗೆದುಹಾಕಿ, ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.

English summary
Shyamlal, 74 year old man undergone surgery to remove horn like growth on head in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X