ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಕ್ಕಾಗಿ ಹಠ ಯೋಗ ಬಾಬಾರಿಂದ ಹೋಮ, ಸಂಕಷ್ಟದಲ್ಲಿ ದಿಗ್ವಿಜಯ್ ಸಿಂಗ್

|
Google Oneindia Kannada News

ಭೋಪಾಲ್, ಮೇ 09 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ವಿರುದ್ಧ ಜಯ ಸಿಗಲೆಂದು ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಹಠ ಯೋಗಿ ಬಾಬಾಗಳೊಂದಿಗೆ ಹೋಮ-ಹವನ ನಡೆಸಿರುವುದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎರಡು ದಿನಗಳ ಹಿಂದೆ, ಹಠ ಯೋಗ ನಡೆಸುವ ಸಾವಿರಾರು ಯೋಗಿಗಳು ಮತ್ತು ಕಂಪ್ಯೂಟರ್ ಬಾಬಾ ಅವರ ಉಪಸ್ಥಿತಿಯಲ್ಲಿ ಬೃಹತ್ ಹೋಮ-ಹವನವನ್ನು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಲೋಕಸಭೆಯಲ್ಲಿ ಸೆಣಸುತ್ತಿರುವ ದಿಗ್ವಿಜಯ್ ಸಿಂಗ್ ಅವರು ನಡೆಸಿದ್ದರು.

ದಿಗ್ವಿಜಯ್ ಸಿಂಗ್ ರೋಡ್ ಶೋನಲ್ಲಿ ಕೇಸರಿ ಕಲರವ: ವಾಸ್ತವತೆ ಏನು?ದಿಗ್ವಿಜಯ್ ಸಿಂಗ್ ರೋಡ್ ಶೋನಲ್ಲಿ ಕೇಸರಿ ಕಲರವ: ವಾಸ್ತವತೆ ಏನು?

ಮೂರು ದಿನಗಳ ಕಾಲ ನಡೆಸಲಾಗುವ ಈ ಮಹಾ ಹೋಮಕ್ಕೆ ದಿಗ್ವಿಜಯ್ ಸಿಂಗ್ ಅವರು ಅನುಮತಿಯನ್ನು ಪಡೆದಿದ್ದರಾ ಎಂಬುದನ್ನು ಪರಿಶೀಲಿಸಬೇಕೆಂದು ಭೋಪಾಲ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಲ್ಲದೆ, ಈ ಯಾಗಕ್ಕೆ ತಗಲಿರುವ ಖರ್ಚುವೆಚ್ಚಗಳೆಷ್ಟು, ಇದರಲ್ಲಿ ದಿಗ್ವಿಜಯ್ ಸಿಂಗ್ ಅವರ ಪಾತ್ರವೇನು ಎಂಬ ಬಗ್ಗೆಯೂ ವಿಚಾರಣೆ ನಡೆಸಬೇಕೆಂದು ಅವರು ಆದೇಶಿಸಿದ್ದಾರೆ.

Hat Yog in Bhopal : Digvijay Singh in trouble

ಇತ್ತೀಚೆಗೆ ತಾನೆ ನ್ಯಾಯಾಲಯದಿಂದ ಖುಲಾಸೆಯಾಗಿ ಹೊರಬಂದಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಭೋಪಾಲ್ ನಲ್ಲಿ ಲೋಕಸಭೆ ಚುನಾವಣಾ ಕಣಕ್ಕೆ ಇಳಿದಿರುವುದರಿಂದ ಇಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಅವರ ನಡುವೆ ಭರ್ಜರಿ ಕದನವನ್ನು ನಿರೀಕ್ಷಿಸಲಾಗುತ್ತಿದೆ. ವಿಜಯಕ್ಕೆ ಇಬ್ಬರೂ ಹೋಮ-ಹವನಗಳ ಮೊರೆ ಹೋಗಿದ್ದಾರೆ.

ದಿಗ್ವಿಜಯ್ ಯಶಸ್ಸಿಗಾಗಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಮಹಾ ಯಜ್ಞದಿಗ್ವಿಜಯ್ ಯಶಸ್ಸಿಗಾಗಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಮಹಾ ಯಜ್ಞ

ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿ ಬಿಡುಗಡೆಯಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಅವರು ಪ್ರಖರ ಹಿಂದೂವಾದಿಯಾಗಿರುವುದರಿಂದ ಹಿಂದೂಗಳ ಮತಗಳನ್ನು ಸೆಳೆಯಲು ದಿಗ್ವಿಜಯ್ ಸಿಂಗ್ ಅವರು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಮಧ್ಯ ಪ್ರದೇಶದಲ್ಲಿ ಅಲ್ಪಸಂಖ್ಯಾತರಿಗಿಂತ ಮೇಲ್ವರ್ಗದ ಮತಗಳೇ ನಿರ್ಣಾಯಕವಾಗಲಿವೆ.

ತಮ್ಮ ನಾಯಕ ರಾಹುಲ್ ಗಾಂಧಿ ಅವರಂತೆ ದಿಗ್ವಿಜಯ್ ಸಿಂಗ್ ಅವರು ಕೂಡ ಟೆಂಪಲ್ ರನ್ (ದೇವಸ್ಥಾನಗಳಿಗೆ ಭೇಟಿ) ಆರಂಭಿಸಿದ್ದು, ಭೋಪಾಲ್ ನಲ್ಲಿರುವ ಗಾಯತ್ರಿ ದೇಗುಲಕ್ಕೆ ಗುರುವಾರ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮಧ್ಯ ಪ್ರದೇಶದ ಎಲ್ಲ ಪ್ರಮುಖ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದರು. ಇದೇ ಸಂಪ್ರದಾಯವನ್ನು ದಿಗ್ವಿಜಯ್ ಕೂಡ ಮುಂದುವರಿಸಿದ್ದಾರೆ.

English summary
Bhopal District Collector has orders inquiry to investigate if permission was given for three-day camp being held by Computer Baba along with other saints to undertake Hat Yog in Bhopal, over cost of the event and the role of Congress leader Digvijaya Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X