ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ 16 ಕಡೆ GST ಗುಪ್ತಚರ ನಿರ್ದೇಶನಾಲಯ ದಾಳಿ: 225 ಕೋಟಿ ಮೌಲ್ಯದ ತಂಬಾಕು ಉತ್ಪನ್ನ ಪತ್ತೆ

|
Google Oneindia Kannada News

ಮಧ್ಯಪ್ರದೇಶ, ಜೂನ್ 13: ಕೇಂದ್ರ ಸರ್ಕಾರ ನಿನ್ನೆಯಷ್ಟೇ (ಜೂನ್ 13)ರಂದು ಜಿಎಸ್‌ಟಿ ಮಂಡಳಿಯ 37ನೇ ಸಭೆಯನ್ನು ನಡೆಸಿತು. ಜಿಎಸ್‌ಟಿ ಆದಾಯ ಕುಸಿತದ ಕುರಿತು ಚರ್ಚೆಯನ್ನು ನಡೆಸಲಾಯಿತು. ಆದಾಯ ಹೆಚ್ಚಿಸಲು ನಾನಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಇಂದು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಮಧ್ಯಪ್ರದೇಶದಲ್ಲಿ ದಾಳಿ ನಡೆಸಿದ್ದು ಭಾರೀ ಪ್ರಮಾಣದ ಜಿಎಸ್‌ಟಿ ವಂಚನೆಯ ಉತ್ಪನ್ನಗಳು ವಶಪಡಿಸಿಕೊಂಡಿದೆ.

Recommended Video

ಅಮೂಲ್ಯ ಲಿಯೊನಾ ಸಿಕ್ಕಿದೆ ಬೇಲ್..! | Amulya Leone gets bail | Oneindia Kannada

ಮಧ್ಯಪ್ರದೇಶದ 3 ಪಾನ್ ಮಸಾಲ ಮತ್ತು ತಂಬಾಕು ಕಂಪನಿಗಳ 16 ಸ್ಥಳಗಳಲ್ಲಿ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ ಜಂಟಿ ದಾಳಿ ನಡೆಸಿದೆ. ಈ ವೇಳೆ ಜಿಎಸ್‌ಟಿ ವಂಚನೆಯ 225 ಕೋಟಿ ರುಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿವೆ ಎಂದು ಜಿಎಸ್‌ಟಿ ನಿರ್ದೇಶನಾಲಯ ಜನರಲ್ ತಿಳಿಸಿದ್ದಾರೆ.

ಜಿಎಸ್‌ಟಿ ಕೌನ್ಸಿಲ್ ಸಭೆ: ಸಣ್ಣ ತೆರಿಗೆದಾರರಿಗೆ ದೊಡ್ಡ ಪರಿಹಾರ, ಯಾವುದೇ ಪ್ರಮುಖ ತೆರಿಗೆ ದರ ಕಡಿತವಿಲ್ಲಜಿಎಸ್‌ಟಿ ಕೌನ್ಸಿಲ್ ಸಭೆ: ಸಣ್ಣ ತೆರಿಗೆದಾರರಿಗೆ ದೊಡ್ಡ ಪರಿಹಾರ, ಯಾವುದೇ ಪ್ರಮುಖ ತೆರಿಗೆ ದರ ಕಡಿತವಿಲ್ಲ

GST Evasion Amounting To Rs 225 Crore Was Detected In Madhya Pradesh

ಇದರ ಜೊತೆಗೆ ಪಾನ್ ಮಸಾಲ ಅಥವಾ ತಂಬಾಕಿನ ಉತ್ಪಾದನೆಗೆ ಬಳಸಲಾಗುವ 1.74 ಕೋಟಿ ಮೌಲ್ಯದ ಕಚ್ಚಾ ಸಾಮಗ್ರಿಗಳು, 15 ಯಂತ್ರಗಳು ಮತ್ತು 10 ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಮುಖ್ಯಸ್ಥರು ತಿಳಿಸಿದ್ದಾರೆ.

English summary
GST evasion amounting to Rs 225 crores was detected in joints raids of Directorate General of GST Intelligence & Directorate of Revenue Intelligence at 16 locations In Madhya Pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X