ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯಲ್ಲಿ "ಹಸಿರು ಶಿಲೀಂಧ್ರ" ಪತ್ತೆ

|
Google Oneindia Kannada News

ಇಂದೋರ್, ಜೂನ್ 16: ಕಪ್ಪು, ಬಿಳಿ, ಯೆಲ್ಲೋ ಫಂಗಸ್ ನಂತರ ಇದೀಗ ಗ್ರೀನ್ ಫಂಗಸ್ ಸೋಂಕಿನ ಪ್ರಕರಣವೊಂದು ಕಾಣಿಸಿಕೊಂಡಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಹಸಿರು ಶಿಲೀಂಧ್ರ ಸೋಂಕು (Green fungus) ಪತ್ತೆಯಾಗಿದೆ.

"ಮಧ್ಯ ಪ್ರದೇಶದ ಇಂದೋರ್‌ನ ವ್ಯಕ್ತಿಯಲ್ಲಿ ಹಸಿರು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಈ ಗ್ರೀನ್ ಫಂಗಸ್ ಅನ್ನು ವೈದ್ಯಕೀಯ ಭಾಷೆಯಲ್ಲಿ ಆಸ್ಪರ್ಗಿಲ್ಲೋಸಿಸ್ (Aspergillosis) ಎಂದು ಕರೆಯಲಾಗುತ್ತದೆ," ಎಂದು ಅರಬಿಂದೋ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ವಿಭಾಗದ ವೈದ್ಯ ಡಾ. ರವಿ ದೋಸಿ ತಿಳಿಸಿದ್ದಾರೆ.

ಕೊರೊನಾ ನಂತರ ಚರ್ಮದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ...ಕೊರೊನಾ ನಂತರ ಚರ್ಮದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ...

ರೋಗಿಯನ್ನು ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Green Fungus Infection Found In Covid Recovered Patient At Indore

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಜ್ವರ, ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಇದು ಮ್ಯೂಕರ್ ಮೈಕೋಸಿಸ್ (ಕಪ್ಪು ಶಿಲೀಂಧ್ರ) ಇರಬಹುದೆಂಬ ಶಂಕೆಯಿಂದ ಪರೀಕ್ಷೆ ಮಾಡಿಸಿದ್ದಾರೆ. ಆಗ ಹಸಿರು ಶಿಲೀಂಧ್ರ ಸೋಂಕು ದೃಢಪಟ್ಟಿದೆ. ವ್ಯಕ್ತಿಯ ಶ್ವಾಸಕೋಶ ಹಾಗೂ ರಕ್ತದಲ್ಲಿ ಈ ಹಸಿರು ಶಿಲೀಂಧ್ರ ಕಂಡುಬಂದಿದೆ.

ರೋಗಿಯು ಎರಡು ತಿಂಗಳ ಮುನ್ನ ಕೊರೊನಾ ಸೋಂಕಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿದ್ದು, ಸುಮಾರು ಒಂದು ತಿಂಗಳ ಕಾಲ ಐಸಿಯುನಲ್ಲಿದ್ದರು. ಗುಣಮುಖರಾಗಿ ಮನೆಗೆ ತೆರಳಿದ ನಂತರ ಮೂಗಿನಲ್ಲಿ ರಕ್ತಸ್ರಾವವಾಗಿ ಅಧಿಕ ಜ್ವರ ಕಾಣಿಸಿಕೊಂಡಿತ್ತು. ಕೆಲವೇ ದಿನಗಳಲ್ಲಿ ತೂಕದಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಇದರಿಂದ ಆತಂಕಗೊಂಡು ಪರೀಕ್ಷೆ ನಡೆಸಿದಾಗ ಹಸಿರು ಶಿಲೀಂಧ್ರ ಇರುವುದು ಕಂಡುಬಂದಿದೆ.

"ಹಸಿರು ಶಿಲೀಂಧ್ರ ಸೋಂಕು ಹಾಗೂ ಅದರ ಪರಿಣಾಮದ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಕೊರೊನಾಗೂ ಈ ಶಿಲೀಂಧ್ರ ಸೋಂಕಿಗೂ ಇರುವ ನಂಟಿನ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ," ಎಂದು ವೈದ್ಯ ರವಿ ದೋಸಿ ಹೇಳಿದ್ದಾರೆ.

English summary
Corona survivor diagnosed with green fungus infection in madhya pradesh indore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X