ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಅಚ್ಚರಿ; ಆಪರೇಷನ್ ಮಾಡಿಸಿಕೊಳ್ಳುತ್ತಾ ಪಿಯಾನೋ ನುಡಿಸಿದ ಬಾಲಕಿ

|
Google Oneindia Kannada News

ಭೋಪಾಲ್, ಡಿಸೆಂಬರ್ 14: ಪ್ರಜ್ಞಾವಸ್ಥೆಯ ಸ್ಥಿತಿಯಲ್ಲೇ, ವಿನೂತನ ಪ್ರಯೋಗದ ಮೂಲಕ ಒಂಬತ್ತು ವರ್ಷದ ಬಾಲಕಿಯ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದು, ಆ ಪ್ರಯೋಗ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ನಡೆಯುವ ಅವಧಿಯುದ್ದಕ್ಕೂ ಬಾಲಕಿ ಪಿಯಾನೋ ನುಡಿಸುತ್ತಿದ್ದುದು ವಿಶೇಷವೆನಿಸಿದೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಬಾನ್ಮೋರ್ ಪಟ್ಟಣದ ಒಂಬತ್ತು ವರ್ಷದ ಸೌಮ್ಯ ಎಂಬ ಬಾಲಕಿಯ ಮೆದುಳಿನಲ್ಲಿ ಗೆಡ್ಡೆ ಇದ್ದು, ಅದನ್ನು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಅದೂ ಪ್ರಜ್ಞಾವಸ್ಥೆಯ ಸ್ಥಿತಿಯಲ್ಲೇ ಚಿಕಿತ್ಸೆ ನೀಡಬೇಕಿತ್ತು.

ಆಯಸ್ಕಾಂತದ ಚೂರುಗಳನ್ನು ನುಂಗಿದ್ದ ಮಗು ಪವಾಡದಂತೆ ಪಾರುಆಯಸ್ಕಾಂತದ ಚೂರುಗಳನ್ನು ನುಂಗಿದ್ದ ಮಗು ಪವಾಡದಂತೆ ಪಾರು

ಹೀಗಾಗಿ ಗ್ವಾಲಿಯರ್ ನ ಡಾಕ್ಟರ್ಸ್ ಬಿರ್ಲಾ ಆಸ್ಪತ್ರೆಯಲ್ಲಿ "ಅವೇಕ್ ಕ್ರಾನಿಯೊಟೊಮಿ" ಎಂಬ ಹೊಸ ವಿಧಾನದ ಭಾಗವಾಗಿ ಈ ಪ್ರಯೋಗವನ್ನು ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಯುವ ಸಂದರ್ಭ ಬಾಲಕಿ ಎಚ್ಚರವಾಗಿಯೇ ಇರುವಂತೆ ಮಾಡುವುದು ಅವಶ್ಯಕವಾಗಿತ್ತು. ಇಲ್ಲವೆಂದರೆ ಮೆದುಳಿನ ಬೇರೆ ನರಗಳಿಗೆ ತೊಂದರೆಯಾಗುವ ಅಪಾಯವಿತ್ತು. ಹೀಗಾಗಿ ಆಕೆಗೆ ತನ್ನ ನೆಚ್ಚಿನ ಪಿಯಾನೋ ನುಡಿಸುವಂತೆ ಹೇಳಿ ವೈದ್ಯರು ಸರ್ಜರಿ ಮಾಡಿದ್ದಾರೆ.

Girl Played Piano Throughout Her Brain Tumour Surgery

ಈ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರ ಹಾಗೂ ಸವಾಲಿನದ್ದಾಗಿತ್ತು. ಸಂಗೀತ ವಾದ್ಯದ ಮೂಲಕ ರೋಗಿಯ ಮನಸ್ಸನ್ನು ಬೇರೆಡೆಗೆ ತಿರುಗಿಸುವ ಮೂಲಕ ಸರ್ಜರಿ ನಡೆಸಬಹುದು ಎಂಬುದನ್ನು ಕೇಳಿದ್ದೆವು. ಸೌಮ್ಯಾಗೂ ಪಿಯಾನೋ ನುಡಿಸುವುದು ತಿಳಿದಿತ್ತು. ಹೀಗಾಗಿ ಚಿಕಿತ್ಸೆಗೆಅದೇ ತಂತ್ರ ಬಳಸಿದೆವು. ಈಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಬಾಲಕಿಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯ ಅಭಿಷೇಕ್ ಚೌಹಾಣ್ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ಅರವಳಿಕೆ ನೀಡಲಾಗುತ್ತದೆ. ಆದರೆ ಸೌಮ್ಯಾಳಿಗೆ ಅರವಳಿಕೆ ನೀಡದೇ, ಮೆದುಳಿನ ಸ್ವಲ್ಪ ಭಾಗಕ್ಕೆ ಮಾತ್ರ ನೀಡಿ ಗೆಡ್ಡೆ ಹೊರತೆಗೆಯಲಾಗಿದೆ.

ಈ ಕುರಿತು ಮಾತನಾಡಿರುವ ಬಾಲಕಿ, "ಸರ್ಜರಿ ನಡೆಯುವಾಗ ನಾನು ಸುಮಾರು ಆರು ತಾಸು ಪಿಯಾನೋ ನುಡಿಸಿದೆ. ಮೊಬೈಲ್ ಗೇಮ್ ಕೂಡ ಆಡಿದೆ. ನನಗೆ ಏನೂ ತಿಳಿಯಲಿಲ್ಲ. ಶಸ್ತ್ರಚಿಕಿತ್ಸೆ ನಡೆಸಿದ್ದೂ ಗೊತ್ತಾಗಿಲ್ಲ" ಎಂದು ಹೇಳಿಕೊಂಡಿದ್ದಾಳೆ.

English summary
Girl named Soumya in madhyapradesh underwent the surgery to remove a tumour in her brain and through out the operation she kept playing a piano
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X