ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್ : ಗಣೇಶ ವಿಸರ್ಜನೆ ವೇಳೆ ದೋಣಿ ಮುಳುಗಡೆ; 13 ಸಾವು

|
Google Oneindia Kannada News

ಭೋಪಾಲ್, ಸೆಪ್ಟೆಂಬರ್ 13 : ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಗಣೇಶ ವಿಸರ್ಜನೆ ವೇಳೆ ದೋಣಿ ನದಿಯಲ್ಲಿ ಮುಳುಗಿ ಹೋಗಿದೆ. ಘಟನೆಯಲ್ಲಿ ಇದುವರೆಗೂ 13 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಭೋಪಾಲ್ ಸಮೀಪದ ಕತ್ಲಾಪುರ ಎಂಬಲ್ಲಿ ನದಿಯಲ್ಲಿ ಗಣೇಶ ವಿಸರ್ಜನೆಗೆ ಹೋದಾಗ ದೋಣಿ ಮುಳುಗಿದೆ. ಇದುವರೆಗೂ 6 ಜನರನ್ನು ರಕ್ಷಣೆ ಮಾಡಲಾಗಿದ್ದು, ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಕೆಜಿಎಫ್: ಗಣೇಶ ವಿಸರ್ಜನೆ ವೇಳೆ 6 ಮಕ್ಕಳು ನೀರುಪಾಲುಕೆಜಿಎಫ್: ಗಣೇಶ ವಿಸರ್ಜನೆ ವೇಳೆ 6 ಮಕ್ಕಳು ನೀರುಪಾಲು

Ganesha Idol Immersion Boat Overturned 11 Dead Bhopal

ಇದುವರೆಗೂ 13 ಶವಗಳನ್ನು ಎನ್‌ಡಿಆರ್‌ಎಫ್ ಪಡೆ ಪತ್ತೆ ಹಚ್ಚಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದ್ದು, ಒಟ್ಟು ಎರಡು ದೋಣಿಗಳಲ್ಲಿ ಎಷ್ಟು ಜನರಿದ್ದರು? ಎಂಬ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಬಸವನಗುಡಿಯಲ್ಲಿ ಕೆಂಪೇಗೌಡರ ಕಾಲದ ಬಯಲು ಗಣಪತಿ!ಬಸವನಗುಡಿಯಲ್ಲಿ ಕೆಂಪೇಗೌಡರ ಕಾಲದ ಬಯಲು ಗಣಪತಿ!

ಕತ್ಲಾಪುರ ಎಂಬಲ್ಲಿ ಇಟ್ಟಿದ್ದ ದೊಡ್ಡ ಗಣೇಶಮೂರ್ತಿಯನ್ನು ಎರಡು ದೋಣಿಗಳಲ್ಲಿ ಇಟ್ಟುಕೊಂಡು ವಿಸರ್ಜನೆ ಮಾಡಲು ತೆಗೆದುಕೊಂಡು ಹೋಗಲಾಗಿತ್ತು. ಎರಡು ದೋಣಿಯಲ್ಲಿದ್ದ ಯಾರೂ ಸಹ ಲೈಫ್ ಜಾಕೆಟ್‌ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಪಿ ನಗರದಲ್ಲಿ 30 ಅಡಿ ಪರಿಸರ ಸ್ನೇಹಿ ʼತೆಂಗಿನಕಾಯಿ ಗಣೇಶʼ ದರ್ಶನಜೆಪಿ ನಗರದಲ್ಲಿ 30 ಅಡಿ ಪರಿಸರ ಸ್ನೇಹಿ ʼತೆಂಗಿನಕಾಯಿ ಗಣೇಶʼ ದರ್ಶನ

ಗಣೇಶ ವಿಗ್ರಹದ ಭಾರ ಹೆಚ್ಚಾದ ಕಾರಣ ನದಿಯಲ್ಲಿ ದೋಣಿ ಒಂದ ಕಡೆ ವಾಗಲಿದ್ದು ಮುಳುಗಿ ಹೋಗಿದೆ. ಇದುವರೆಗೂ 13 ಜನರ ಶವವನ್ನು ಹೊರತೆಗೆಯಲಾಗಿದೆ. ಹಲವಾರು ಜನರು ನಾಪತ್ತೆಯಾದ ಮಾಹಿತಿ ಇದೆ. ದೋಣಿಯಲ್ಲಿ ಎಷ್ಟು ಜನರಿದ್ದರು? ಎಂಬ ಮಾಹಿತಿ ಸಿಕ್ಕಿಲ್ಲ.

ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್ ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ 4 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಎನ್‌ಡಿಆರ್‌ಎಫ್ ಪಡೆ ನದಿಯಲ್ಲಿ ಮುಳುಗಿದವರಿಗಾಗಿ ಹುಡುಕಾಟ ನಡೆಸುತ್ತಿದೆ.

English summary
11 dead after boat overturned in river in the time of Lord Ganesha's idol immersion ceremony at Bhopal, Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X