ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ದೀಪ ಹಚ್ಚುವ ಬದಲು ಗುಂಡು ಹಾರಿಸಿದ ಬಿಜೆಪಿ ನಾಯಕಿ

|
Google Oneindia Kannada News

ಲಕ್ನೋ, ಏಪ್ರಿಲ್ 06: ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ಗಂಟೆಗಳ ಕಾಲ ಮನೆಯ ಲೈಟ್‌ಗಳನ್ನು ಆಫ್ ಮಾಡಿ, ದೀಪ, ಮುಂಬತ್ತಿ, ಟಾರ್ಚ್ ಅಥವಾ ಮೊಬೈಲ್ ಫ್ಲಾಶ್ ಲೈಟ್ ಮೂಲಕ ಬೆಳಕನ್ನು ಚೆಲ್ಲುವಂತೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು.

ಈ ಮೂಲಕ ಜನರಿಗೆ ಮಾನಸಿಕ ಬಲ ತುಂಬಲು ಪ್ರಯತ್ನ ಮಾಡಲಾಗಿತ್ತು. ಮೋದಿ ಮಾತಿನಂತೆ ಕೋಟ್ಯಾಂತರ ಜನರು ನಿನ್ನೆ ರಾತ್ರಿ 9 ಗಂಟೆಗೆ ದೀಪ ಬೆಳಗಿದರು. ದೇಶಾದ್ಯಂತ ಇದಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿತ್ತು. ಆದರೆ, ಅಲ್ಲಲ್ಲಿ ಕೆಲವು ಎಡವಟ್ಟುಗಳು ಸಹ ಆಯ್ತು.

ಪಂಜು ಹಿಡಿದು ಕೊರೊನಾ ಓಡಿಸಲು ಬಂದ ಬಿಜೆಪಿ ಶಾಸಕಪಂಜು ಹಿಡಿದು ಕೊರೊನಾ ಓಡಿಸಲು ಬಂದ ಬಿಜೆಪಿ ಶಾಸಕ

ಎಷ್ಟೋ ಜನರು ಪಟಾಕಿ ಹೊಡೆದರು. ಜನರು ಮಾತ್ರವಲ್ಲದೆ, ಜನ ಪ್ರತಿನಿಧಿಗಳು ಸಹ ಲಾಕ್ ಡೌನ್ ಸಮಯದಲ್ಲಿ ಹಿಡಿತ ತಪ್ಪಿದರು. ಮೋದಿ ಹೇಳಿದ್ದೇ ಒಂದು ಆದ್ರೆ, ಅವರು ಮಾಡಿದ್ದೇ ಇನ್ನೊಂದು. ಬೇರೆ ಯಾರೋ ಯಾಕೆ ಬಿಜೆಪಿ ಪಕ್ಷದವರೇ ಅವತಾರ ಮಾಡಿದರು. ಲಕ್ನೋದಲ್ಲಿ ನಡೆದ ಒಂದು ಘಟನೆ ಹೀಗಿದೆ.

ಗುಂಡು ಹಾರಿಸಿದ ಬಿಜೆಪಿ ನಾಯಕಿ

ನಿನ್ನೆ ರಾತ್ರಿ 9 ಗಂಟೆಗೆ ದೇಶವೇ ದೀಪ ಹಚ್ಚುವ ಸಮಯದಲ್ಲಿ ಮಂಜು ತಿವಾರಿ ಎಂಬುವವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಉತ್ತರ ಪ್ರದೇಶದ ಬಲರಾಂಪುರದಲ್ಲಿ ಘಟನೆ ನಡೆದಿದೆ. ಆಕೆ ಬಲರಾಂಪುರದ ಬಿಜೆಪಿ ಮಹಿಳಾ ಘಟಕದ ನಾಯಕಿಯಾಗಿದ್ದಾರೆ. ಎಲ್ಲರಂತೆ ನಾನು ದೀಪ ಹಚ್ಚಿದ ಮಂಜು ತಿವಾರಿ ಅದೇ ಖುಷಿಯಲ್ಲಿ ಪತಿ ಓಂ ಪ್ರಕಾಶ್ ರಿವಾಲ್ವರ್ ತೆಗೆದುಕೊಂಡು ಗಂಡು ಹಾರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ

ಪತ್ನಿ ಮಂಜು ತಿವಾರಿ ಗುಂಡು ಹಾರಿಸಿದ ವಿಡಿಯೋವನ್ನು ಪತಿ ಓಂ ಪ್ರಕಾಶ್ ವಿಡಿಯೋ ಮಾಡಿದ್ದಾರೆ. ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ 'ದೀಪ ಬೆಳಗಿಸೋಣ, ಕೊರೊನಾ ವೈರಸ್ ಓಡಿಸೋಣ' ಎಂಬ ಶೀರ್ಷಿಕೆಯನ್ನು ಬೇರೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಲು ಶುರು ಆಗಿದೆ. ಎಲ್ಲರೂ ಮಂಜು ತಿವಾರಿ ಮೇಲೆ ಆಕ್ರೋಶ ವ್ಯಕ್ತವಾಗಿದೆ.

ರಸ್ತೆ ಬದಿಯೇ ದೀಪ ಬೆಳಗಿದ ಮನೆ ಇಲ್ಲದ ಬಡವರುರಸ್ತೆ ಬದಿಯೇ ದೀಪ ಬೆಳಗಿದ ಮನೆ ಇಲ್ಲದ ಬಡವರು

ಪ್ರಕರಣ ದಾಖಲು

ಪ್ರಕರಣ ದಾಖಲು

ಈ ಘಟನೆ ಬಗ್ಗೆ ಈಗಾಗಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಂಜು ತಿವಾರಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಬಗ್ಗೆ ಕೊಟ್ವಾಲಿ ನಗರ ಎಸ್‌ಪಿ ಅರವಿಂದ್ ತಿವಾರಿ ತಿಳಿಸಿದ್ದಾರೆ. ದೀಪ ಹಚ್ಚಿ ಅಂದ್ರೆ ಗಾಳಿಯಲ್ಲಿ ಗುಂಡು ಹಾರಿಸಿ ಈ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬಿಜೆಪಿ ನಾಯಕ ಮೆರವಣಿಗೆ

ಬಿಜೆಪಿ ನಾಯಕ ಮೆರವಣಿಗೆ

ಇದೇ ರೀತಿಯ ಮತ್ತೊಂದು ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಗೋಷಮಹಲ್‌ನಲ್ಲಿ ಅಲ್ಲಿನ ಬಿಜೆಪಿ ಶಾಸಕರೇ ದೀಪ ಹಚ್ಚುವ ಬದಲು ಪಂಜು ಹಿಡಿದು ಅವಾಂತರ ಮಾಡಿಕೊಂಡಿದ್ದಾರೆ. ತಮ್ಮ ಕಾರ್ಯಕರ್ತರ ಜೊತೆಗೆ ಪಂಚು ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ''ಗೋ ಬ್ಯಾಕ್ ಗೋ ಬ್ಯಾಕ್ ಚೀನಾ ವೈರಸ್ ಗೋ ಬ್ಯಾಕ್..'' ಎಂದು ಹೇಳಿ ಕೊರೊನಾ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ.

English summary
Firing by Madya Pradesha local bjp leader Manju Tiwari yesterday (April 05).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X