ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ವಿಜಯ್ ಯಶಸ್ಸಿಗಾಗಿ ಪ್ರಾರ್ಥಿಸಿದ್ದ ಬಾಬಾ ವಿರುದ್ಧ ಎಫ್ಐಅರ್

|
Google Oneindia Kannada News

ಭೋಪಾಲ್, ಮೇ 16: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ, ಹೋಮ, ಹವನ ನಡೆಸಿದ್ದ ಕಂಪ್ಯೂಟರ್ ಬಾಬಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹೊರೆಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಬಿಜೆಪಿಯ ಖಾವಿಧಾರಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್ ಸಿಂಗ್ ಅವರು ಲೋಕಸಭೆ ಚುನಾವಣೆಯಲ್ಲಿ ಜಯಶೀಲರಾಗಲು ವಿಶೇಷ ಹೋಮ ಹವನ ನಡೆಸಲಾಗಿತ್ತು. ನಾಗಾಸಾಧುಗಳು ಅನೇಕ ಸಂತರು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಸರ್ಕಾರ ಪತನವಾದ ಬಳಿಕ ಕಾಂಗ್ರೆಸ್ ಬಣದಲ್ಲಿ ಕಾಣಿಸಿಕೊಂಡ ಕಂಪ್ಯೂಟರ್ ಬಾಬಾ ಅವರು ಮಾತನಾಡಿ, ಸಾಧು ಸಂತರ ಸಮುದಾಯಕ್ಕೆ ಬಿಜೆಪಿಯಿಂದ ಭಾರಿ ಅನ್ಯಾಯವಾಗಿದೆ. ಸಾರ್ವಜನಿಕರಲ್ಲದೆ, ಸಾಧುಗಳನ್ನು ಬಿಜೆಪಿ ಮೋಸ ಮಾಡಿದೆ. ಹೀಗಾಗಿ, ಸ್ವಯಂ ಪ್ರೇರಿತರಾಗಿ ದಿಗ್ವಿಜಯ್ ಅವರ ಗೆಲುವಿಗಾಗಿ ಯಜ್ಞದಲ್ಲಿ ತೊಡಗಿದ್ದಾರೆ. ರಾಮ ಮಂದಿರ ಇಲ್ಲದಿದ್ದರೆ ಮೋದಿ ಸರ್ಕಾರವೂ ಇಲ್ಲ ಎಂಬುದು ಇಲ್ಲಿರುವವರ ಒಕ್ಕೊರಲ ಮಂತ್ರವಾಗಿದೆ ಎಂದಿದ್ದರು.

FIR registered against Computer Baba for violating model code of conduct

ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನರ್ಮದಾ ನದಿ ಜೋಡಣೆ ಯೋಜನೆಯ ನೇತೃತ್ವ ವಹಿಸಿ, ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿದ್ದ ಕಂಪ್ಯೂಟರ್ ಬಾಬಾ ಅಲಿಯಾಸ್ ನಾಮದಾಸ್ ತ್ಯಾಗಿ ಅವರು ಈಗ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಪರ ಪ್ರಾರ್ಥನೆ ಸಲ್ಲಿಸಿದ ಖಾವಿಧಾರರ ನೇತೃತ್ವವಹಿಸಿದ್ದರು. ಚುನಾವಣಾ ಆಯೋಗದ ಅನುಮತಿ ಇಲ್ಲದೆ ಪ್ರಚಾರ ನಡೆಸಿದ ಆರೋಪವನ್ನು ಹೊತ್ತುಕೊಂಡಿದ್ದಾರೆ.

English summary
FIR registered against Computer Baba for violating model code of conduct after a complaint alleging that he was campaigning for Congress Bhopal candidate Digvijaya Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X