ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್‌ನಾಥ್‌ರ 'ಭಾರತೀಯ ರೂಪಾಂತರ' ಹೇಳಿಕೆ ರಾಷ್ಟ್ರಕ್ಕೆ ಮಾಡಿದ ಅಪಮಾನ - ಎಫ್‌ಐಆರ್‌ ದಾಖಲು

|
Google Oneindia Kannada News

ಭೋಪಾಲ್‌, ಮೇ 24: ಕೋವಿಡ್‌ 19 ಅನ್ನು ಕೊರೊನಾದ ಭಾರತೀಯ ರೂಪಾಂತರ ಎಂಬ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ಕಮಲ್ ನಾಥ್ ಹೇಳಿಕೆಯು ಭೀತಿ ಸೃಷ್ಟಿಸಿದೆ ಹಾಗೂ ಈ ಪದ ಬಳಕೆಯ ಮೂಲಕ ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿ ಬಿಜೆಪಿ ಮುಖಂಡರು ನೀಡಿದ ದೂರಿನ ಮೇರೆಗೆ ಮಧ್ಯಪ್ರದೇಶದ ಪೊಲೀಸರು ಭಾನುವಾರ ಕಮಲ್ ನಾಥ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದ ಕಮಲ್ ನಾಥ್ 'ಭಾರತೀಯ ರೂಪಾಂತರ' ಪದ ಬಳಕೆ ಮಾಡಿದ್ದರು. ಈ ಕಮಲ್ ನಾಥ್ 'ಭಾರತೀಯ ರೂಪಾಂತರ' ಪದ ಬಳಕೆ ಮಾಡಿದ್ದ ಬಗ್ಗೆ ಬಿಜೆಪಿ ಭೋಪಾಲ್ ಜಿಲ್ಲಾಧ್ಯಕ್ಷ ಸುಮಿತ್ ಪಚೋರಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಮಧ್ಯಪ್ರದೇಶದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈ ದೂರಿಗೆ ರಾಜ್ಯ ಸಚಿವ ವಿಶ್ವಾಸ್‌ ಸಾರಂಗ್‌, ಶಾಸಕ ರಾಮೇಶ್ವರ ಶರ್ಮಾ ಮತ್ತು ಇತರ ರಾಜ್ಯ ಬಿಜೆಪಿ ಮುಖಂಡರು ಸಹಿ ಹಾಕಿದ್ದಾರೆ.

"ಭಾರತೀಯ ರೂಪಾಂತರ" ಪದದ ಉಲ್ಲೇಖ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣಗಳಿಗೆ ಸೂಚನೆ

ಕಮಲ್ ನಾಥ್ ಪತ್ರಿಕಾ ಗೋಷ್ಠಿಯಲ್ಲಿ ಜನಸಾಮಾನ್ಯರಲ್ಲಿ ತಪ್ಪು ಮಾಹಿತಿ ಹರಡಿದ್ದಾರೆ ಹಾಗೂ ಭೀತಿ ಸೃಷ್ಟಿಸಿದ್ದಾರೆ. ಈ ಮೂಲಕ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಪೊಲೀಸರು ಐಪಿಸಿ ಸೆಕ್ಷನ್ 188 (ಸಮಾಜ ಸೇವಕರಿಂದ ಆದೇಶದ ಉಲ್ಲಂಘನೆ), ಸೆಕ್ಷನ್ 144 ಸಿಆರ್‌ಪಿಸಿ ಅಡಿ, ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54 ರ (ಸುಳ್ಳು ಮಾಹಿತಿ ಹರಡಿದ ಆರೋಪ) ಅಡಿಯಲ್ಲಿ ಕಮಲ್ ನಾಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಮಲ್‌ನಾಥ್‌

ಕಮಲ್‌ನಾಥ್‌ "ಹತಾಶೆಯ ಕ್ರಿಯೆ" ಎಂದು ಬಣ್ಣಿಸಿದ್ದಾರೆ

ಇನ್ನು ಈ ಎಫ್‌ಐಆರ್‌ ಅನ್ನು ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ "ಹತಾಶೆಯ ಕ್ರಿಯೆ" ಎಂದು ಬಣ್ಣಿಸಿದ್ದಾರೆ. ಸರ್ಕಾರದ ಬಳಿ ಯಾವುದೇ ಉತ್ತರಗಳಿಲ್ಲ. ಆದ್ದರಿಂದ ಪ್ರಶ್ನೆಗಳನ್ನು ಕೇಳುವ ಯಾವುದೇ ವ್ಯಕ್ತಿಯನ್ನು ದೇಶದ್ರೋಹಿ ಎಂದು ಕರೆಯುತ್ತಾರೆ ಎಂದು ಕಮಲ್‌ನಾಥ್‌ ಹೇಳಿದ್ದಾರೆ. ಎಫ್‌ಐಆರ್ ತನ್ನ ಅಸಮರ್ಥತೆಯನ್ನು ಮರೆಮಾಚುವ ಬಿಜೆಪಿಯ ಪ್ರಯತ್ನವಾಗಿದೆ ಎಂದು ರಾಜ್ಯಸಭಾ ಸಂಸದ ವಿವೇಕ್ ತಂಖಾ ಟ್ವೀಟ್‌ ಮಾಡಿದ್ದಾರೆ. ಇನ್ನು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲೇ "ಭಾರತೀಯ ಡಬಲ್ ರೂಪಾಂತರಿತ ಒತ್ತಡ" (Indian double mutant strain) ಎಂದು ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ.

''ಕೊರೊನಾ 3ನೇ ಅಲೆ ತಡೆಯಲು ನಾಲ್ಕು ದಿನ ಯಜ್ಞ ಮಾಡಬೇಕು''''ಕೊರೊನಾ 3ನೇ ಅಲೆ ತಡೆಯಲು ನಾಲ್ಕು ದಿನ ಯಜ್ಞ ಮಾಡಬೇಕು''

ದೂರಿನಲ್ಲಿ ಏನಿದೆ?

ದೂರಿನಲ್ಲಿ ಏನಿದೆ?

ದೂರಿನಲ್ಲಿ, ವರ್ಚುವಲ್ ಪತ್ರಿಕಾ ಗೋಷ್ಠಿ ಅನ್ನು ಉದ್ದೇಶಿಸಿ ಮಾತನಾಡುವ ಸಂದರ್ಭ ಕಮಲ್‌ನಾಥ್‌, ಕೋವಿಡ್ ಅನ್ನು ಭಾರತೀಯ ರೂಪಾಂತರ ಎಂದು ಉಲ್ಲೇಖಿಸಿದ್ದಾರೆ. ಇದು ಭಾರತಕ್ಕೆ ಮಾಡಿದ ಅಪಮಾನ, ಹಾಗೆಯೇ ಜನರಲ್ಲಿ ಭಯವನ್ನು ಸೃಷ್ಟಿ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ. ಇನ್ನು ಕಮಲ್‌ನಾಥ್‌, ಈ ವೈರಸ್‌ ಯಾವ ರೀತಿ ಹಬ್ಬಿದೆ ಎಂದರೆ ವಿಶ್ವದಾದ್ಯಂತ ಹಲವಾರು ನಾಯಕರು "ಭಾರತೀಯ ರೂಪಾಂತರ" ಎಂಬ ಪದ ಬಳಸುತ್ತಿದ್ದಾರೆ ಎಂದು ಹೇಳಿರುವುದಾಗಿ ಕೂಡಾ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಹಾಗೆಯೇ ಸರ್ಕಾರ ಕೋವಿಡ್ ಸಾವಿನ ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎಂದು ಕೂಡಾ ಕಮಲನಾಥ್‌ ಹೇಳಿದ್ದು, ಇದು ಆಕ್ಷೇಪಾರ್ಹ ಮತ್ತು ಜನರಲ್ಲಿ ಆತಂಕ ಸೃಷ್ಟಿ ಮಾಡುವ ಸುಳ್ಳು ಹೇಳಿಕೆ ಎಂದು ದೂರಲಾಗಿದೆ. ಕೋವಿಡ್‌ ಕುರಿತ ವಿಶ್ವ ಹಿತ ಸಂಸ್ಥೆಯ ಮಾರ್ಗಸೂಚಿಗಳನ್ನು ಕಮಲ್‌ನಾಥ್‌ ಕಡೆಗಣಿಸಿದ್ದಾರೆ. ಐಪಿಸಿ ಪ್ರಕಾರ ಇದು ದೇಶದ್ರೋಹವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಮಲ್‌ನಾಥ್‌ ಹೇಳಿದ್ದೇನು?

ಕಮಲ್‌ನಾಥ್‌ ಹೇಳಿದ್ದೇನು?

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಮಲ್‌ನಾಥ್‌, ಭಾರತ ವಿಶ್ವದಲ್ಲಿ ಯಾವ ರೀತಿ ಅಪಮಾನಕ್ಕೆ ಒಳಗಾಗುತ್ತಿದೆ ಎಂಬುದು ಬಹಳ ದುಖಃಕರ ವಿಚಾರ. ಇದು ಚೀನಾದ ವೈರಸ್‌ ಆಗಿತ್ತು, ಚೀನಾದ ಕೊರೊನಾ ಎಂದು ಹೇಳಲಾಗುತ್ತಿತ್ತು. ಆದರೆ ಈಗ ವಿಶ್ವವೇ ಭಾರತೀಯ ರೂಪಾಂತರಿ ಕೊರೊನಾ ಎಂದು ಹೇಳುತ್ತಿದೆ. ಬೇರೆ ದೇಶಗಳಲ್ಲಿ ವಿದ್ಯಾರ್ಜನೆ ಮಾಡುವ ಹಾಗೂ ಉದ್ಯೋಗ ಮಾಡುವ ಭಾರತೀಯರು ಆ ದೇಶಗಳಲ್ಲಿ ಭಾರತೀಯರು ಎಂಬ ಕಾರಣಕ್ಕೆ ಹೊರಗಡೆ ಓಡಾಡಲು ಆಗುತ್ತಿಲ್ಲ ಎಂದು ಹೇಳಿದ್ದರು.

ವಯಸ್ಸಾದ ಮೇಲೆ ಸಾಯಲೇಬೇಕಲ್ಲ; ಸಚಿವರ ಆಘಾತಕಾರಿ ಉತ್ತರವಯಸ್ಸಾದ ಮೇಲೆ ಸಾಯಲೇಬೇಕಲ್ಲ; ಸಚಿವರ ಆಘಾತಕಾರಿ ಉತ್ತರ

"ಭಾರತೀಯ ರೂಪಾಂತರ" ಪದದ ಉಲ್ಲೇಖ ತೆಗೆದುಹಾಕಲು ಸೂಚನೆ

ಇನ್ನು ಈಗಾಗಲೇ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಭಾರತೀಯ ರೂಪಾಂತರ ಪದದ ಉಲ್ಲೇಖವಿರುವ ವರದಿ, ವಿಷಯಗಳನ್ನು ತೆಗೆದುಹಾಕುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಶುಕ್ರವಾರ ಪತ್ರ ಬರೆದಿದೆ. ಭಾರತೀಯ ರೂಪಾಂತರ ಎಂಬ ಪದದ ಉಲ್ಲೇಖ ತಪ್ಪು ಮಾಹಿತಿಯನ್ನು ಹರಡುತ್ತದೆ ಹಾಗೂ ದೇಶದ ಚಿತ್ರಣಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂಬುದರ ಸ್ಪಷ್ಟ ಸಂದೇಶ ನೀಡಲು ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
FIR filed against Madhya Pradesh EX Chief minister kamal nath for using word Indian variant. BJP Bhopal district president Sumit Pachori filed complaint, accusing kamal nath sullied the image of India and spread fear among the mass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X