ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು ಎಂದ ಬಿಜೆಪಿ ಮುಖಂಡ!

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

Recommended Video

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು ಎಂದ ಬಿಜೆಪಿ ಮುಖಂಡ..! | Oneindia Kannada

ಭೋಪಾಲ್, ಡಿಸೆಂಬರ್ 01: "ಮಧ್ಯಪ್ರದೇಶದಲ್ಲಿ ನಿಮ್ಮ ಪಕ್ಷವೇ ಗೆಲ್ಲೋದು, ಅಭಿನಂದನೆಗಳು" ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡರಾಗಿರುವ ಒಬ್ಬರು ಕಾಂಗ್ರೆಸ್ ನಾಯಕರೊಬ್ಬರ ಬಳಿ ಖುದ್ದು ಹೇಳಿಕೊಂಡಿದ್ದಾರೆ ಎಂಬ ವದಂತಿಯೊಂದು ಹರಿದಾಡುತ್ತಿದೆ.

ಮಧ್ಯಪ್ರದೇಶದ ಕೆಲವು ಗಲ್ಲಿಗಳ ಗೋಡೆಯ ಮೇಲೆ, 'ಕಾಂಗ್ರೆಸ್ಸೇ ಸರ್ಕಾರ ರಚಿಸೋದು' ಎಂದು ಬರೆದಿರುವ ಸಾಲುಗಳೂ ಕಾಣಸಿಗುತ್ತಿವೆ. ಬಿಜೆಪಿ ಮುಖಂಡರೇ ಹಾಗೆ ಹೇಳಿದ್ದಾರೆ ಎಂದೂ ಆ ಸಾಲಿನ ಕೆಳಗೆ ನಮೂದಿಸಲಾಗಿದೆ!

ಆದರೆ ಯಾವ ಬಿಜೆಪಿ ನಾಯಕರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮಧ್ಯಪ್ರದೇಶದಲ್ಲಿ ನ.28 ಚುನಾವಣೆ ನಡೆದಿದ್ದು, ಶೇ.74 ರಷ್ಟು ಮತದಾನವಾಗಿದೆ. ಮತದಾನದ ಪ್ರಮಾಣವೂ ಆಡಳಿತಾರೂಢ ಬಿಜೆಪಿಗೆ ತಲೆನೋವಾಗಿರುವುದು ಖಂಡಿತ.

ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಹವಾ..? ಕಾಂಗ್ರೆಸ್ ಜಸ್ಟ್ ಮಿಸ್?! NDTV ವಿಶ್ಲೇಷಣೆ ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಹವಾ..? ಕಾಂಗ್ರೆಸ್ ಜಸ್ಟ್ ಮಿಸ್?! NDTV ವಿಶ್ಲೇಷಣೆ

ಹೀಗಿರುವಾಗ ಬಿಜೆಪಿ ನಾಯಕರೇ ಇಂಥ ಹೇಳಿಕೆ ನೀಡಿರುವುದು ಬಿಜೆಪಿ ನಾಯಕರಿಗೆ ಇರಿಸುಮುರಿಸುಂಟು ಮಾಡಿದೆ.

ಬಿಜೆಪಿ ನಾಯಕ ಹೇಳಿದ್ದೇನು?

ಬಿಜೆಪಿ ನಾಯಕ ಹೇಳಿದ್ದೇನು?

"ಸದ್ಯದಲ್ಲೇ ನೀವು ಮಂತ್ರಿಯಾಗುತ್ತೀರಿ. ಏಕೆಂದರೆ ಮಧ್ಯಪ್ರದೇಶದಲ್ಲಿಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ" ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ವಿಷಯವನ್ನು ಕಾಂಗ್ರೆಸ್ ನಾಯಕ ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದು, ಕೆಲವರು ಬಿಜೆಪಿ ನಾಯಕನ ಹೇಳಿಕೆಯನ್ನು ಗೋಡೆಗಳ ಮೇಲೆ ಬರೆದು, ಫಲಿತಾಂಶ ಬರುವ ಮೊದಲೇ ಬಿಜೆಪಿ ಸೋಲೊಪ್ಪಿಕೊಂಡಿದೆ ಎಂದು ಅಣಕಿಸುತ್ತಿದ್ದಾರೆ!

ಅಚ್ಚರಿ ಮೂಡಿಸಲಿದೆ ಮಧ್ಯಪ್ರದೇಶ ಫಲಿತಾಂಶ: ಕಮಲ್ ನಾಥ್ ಅಚ್ಚರಿ ಮೂಡಿಸಲಿದೆ ಮಧ್ಯಪ್ರದೇಶ ಫಲಿತಾಂಶ: ಕಮಲ್ ನಾಥ್

ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ!

ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ!

ಈ ಮೂಲಕ ಬಿಜೆಪಿ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡಿದೆಯೇ? ಚುನಾವಣೆಗೂ ಮುನ್ನ ಇದ್ದ ವಿಶ್ವಾಸ ಬಿಜೆಪಿಗೆ ಚುನಾವಣೆಯ ನಂತರ ಉಡುಗಿಹೋಗಿದೆಯೇ? ಮಧ್ಯಪ್ರದೇಶದ ಚುನಾವಣೆಯ ನಂತರ ದಾಖಲಾದ ಮತದಾನದ ಪ್ರಮಾಣವೂ ಬಿಜೆಪಿಗೆ ಆತಂಕವನ್ನುಂಟು ಮಾಡಿದೆ. ಸಮಾನ್ಯವಾಗಿ ಮತದಾನದ ಪ್ರಮಾಣ ಹೆಚ್ಚಾದಷ್ಟೂ ಆಡಳಿತಾರೂಢ ಸರ್ಕಾರಕ್ಕೆ ನಷ್ಟ ಜಾಸ್ತಿ. ಆಡಳಿತ ವಿರೋಧಿ ಅಲೆ ಇದ್ದಾಗ ಜನರು ರೊಚ್ಚಿಗೆದ್ದು ಮತಚಲಾಯಿಸಬಹುದಾದ ಕಾರಣ ಮತದಾನದ ಪ್ರಮಾಣ ಹೆಚ್ಚಾಗುತ್ತದೆ. ಆ ಕಾರಣದಿಂದ ಸೋಲುವ ಭೀತಿ ಬಿಜೆಪಿಗೆ ಎದುರಾದಂತಿದೆ.

ನಾಲ್ಕನೇ ಬಾರಿಯ ಅವಕಾಶಕ್ಕಾಗಿ ಮಧ್ಯಪ್ರದೇಶದ ಜನರ ಎದುರು ಚೌಹಾಣ್ ನಾಲ್ಕನೇ ಬಾರಿಯ ಅವಕಾಶಕ್ಕಾಗಿ ಮಧ್ಯಪ್ರದೇಶದ ಜನರ ಎದುರು ಚೌಹಾಣ್

ಮೋದಿ-ಯೋಗಿ ಅಲೆ!

ಮೋದಿ-ಯೋಗಿ ಅಲೆ!

ಮಧ್ಯಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿರಂತರವಾಗಿ ನಡೆಸಿದ ಪ್ರಚಾರ ಫಲನೀಡಿದೆಯಾ? ಅಕಸ್ಮಾತ್ ಫಲ ನೀಡಿದ್ದರೆ ಬಿಜೆಪಿ ಮುಖಂಡರೇ ಹೀಗೆ, 'ಕಾಂಗ್ರೆಸ್ಸೇ ಗೆಲ್ಲೋದು' ಎಂಬ ಹೇಳಿಕೆಯನ್ನು ಏಕೆ ನೀಡುತ್ತಿದ್ದರು?

ಡಿ.11 ರಂದು ಉತ್ತರ !

ಡಿ.11 ರಂದು ಉತ್ತರ !

230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶ ವಿಧಾನಸಭೆಗೆ ನ.28 ರಂದು ಚುನಾವಣೆ ನಡೆದಿದ್ದು, ಡಿ.11 ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರ ಸತತ ಮೂರು ಬಾರಿ ಅಧಿಕಾರದಲ್ಲಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಬೇಕಾದವರು ಡಿ.11 ರವರೆಗೆ ಕಾಯಲೇಬೇಕು!

English summary
The story is written on the wall in Madhya Pradesh where it has been realized even by the BJP leaders when he congratulated a Congress leader. The election is costing too much for the lawyer politicians with the money while it is costing bureaucrats with their sleep in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X