ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ ಬಿಲ್ ಕಟ್ಟಿಲ್ಲ ಎಂದು ವೃದ್ಧರನ್ನು ಹೀಗೆ ನಡೆಸಿಕೊಳ್ಳೋದಾ

|
Google Oneindia Kannada News

ಭೋಪಾಲ್, ಜೂನ್ 7: ಆಸ್ಪತ್ರೆ ಬಿಲ್ ಪಾವತಿ ಮಾಡಿಲ್ಲ ಎಂದು ವೃದ್ಧರೊಬ್ಬರ ಕೈಕಾಲು ಕಟ್ಟಿಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ವೃದ್ಧರ ಕಾಲಿನಲ್ಲಿ ಸೆಳೆತ ಬಂದಿತ್ತು ಹೀಗಾಗಿ ಕಾಲನ್ನು ಕಟ್ಟಿಹಾಕಲಾಗಿತ್ತು ಅವರಿಗೆ ತೊಂದರೆ ಕೊಡುವ ಅಥವಾ ನೋವುಂಟು ಮಾಡುವ ಉದ್ದೇಶ ನಮಗಿರಲಿಲ್ಲ ಎಂದು ಆಸ್ಪತ್ರೆ ತಿಳಿಸಿದೆ.

 ಚಿಕ್ಕಮಗಳೂರು; ಮಕ್ಕಳ ನಿರ್ಲಕ್ಷ್ಯಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ ಚಿಕ್ಕಮಗಳೂರು; ಮಕ್ಕಳ ನಿರ್ಲಕ್ಷ್ಯಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

ಈ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ಪಡೆದಿದ್ದಾರೆ. ಶಜಾಪುರ್ ಮೂಲದ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Elderly Man Tied To Madhya Pradesh Hospital Bed Allegedly Over Non-Payment Of Bills

ಆಸ್ಪತ್ರೆಯ ಬಿಲ್ 11 ಸಾವಿರವಾಗಿತ್ತು , ನಮಗೆ ಕಟ್ಟಲು ಹಣವಿರಲಿಲ್ಲ, ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಅವರ ಕೈಕಾಲುಗಳನ್ನು ಕಟ್ಟಿಹಾಕಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಐದು ಸಾವಿರ ಹಣವನ್ನು ಡೆಪಾಸಿಟ್ ಮಾಡಿದ್ದವು, ಆದರೆ ಚಿಕಿತ್ಸೆ ಹಲವು ದಿನಗಳ ಕಾಲ ಮುಂದುವರೆಯಿತು, ನಮಗೆ ಬಿಲ್ ಪಾವತಿ ಮಾಡಲು ಹಣವಿರಲಿಲ್ಲ ಎಂದು ವೃದ್ಧರ ಪುತ್ರಿ ಹೇಳಿಕೊಂಡಿದ್ದಾರೆ.

ಮಾನವೀಯತೆ ದೃಷ್ಟಿಯಿಂದ ಅವರ ಆಸ್ಪತ್ರೆಯ ವೆಚ್ಚವನ್ನು ಮನ್ನ ಮಾಡಲಾಗಿದೆ. ವೃದ್ಧರಿಗೆ ಕಾಲಿನಲ್ಲಿ ಸೆಳೆತ ಉಂಟಾಗಿದ್ದ ಕಾರಣ ಅವರ ಕಾಲನ್ನು ಕಟ್ಟಿಹಾಕಲಾಗಿತ್ತು ಎಂದು ವೈದ್ಯರು ಪುನರುಚ್ಚರಿಸಿದ್ದಾರೆ.

English summary
In a shocking incident of alleged medical indifference, an elderly man was tied to a hospital bed in Madhya Pradesh after he allegedly failed to make payment of fees for his treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X