ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ ದ್ವಿಗುಣ ಕೇಸ್: 10 ಕೋಟಿ ರು ನಗದು ನೋಟುಗಳು ವಶ

|
Google Oneindia Kannada News

ಭೋಪಾಲ್, ಮೇ19: ಹಣ ದ್ವಿಗುಣಗೊಳಿಸುವ ಆಮಿಷ ಒಡ್ಡಿ ಜನರನ್ನು ವಂಚಿಸುತ್ತಿದ್ದ ಗ್ಯಾಂಗ್‌ನ್ನು ಬಾಲಘಟ ಪೊಲೀಸರು ಬಯಲಿಗೆಳೆದಿದ್ದಾರೆ. ವಶಪಡಿಸಿಕೊಂಡ ನಗದನ್ನು ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ. ವಂಚನೆ ಪ್ರಕರಣದಲ್ಲಿ ಗ್ಯಾಂಗ್‌ನ 11 ಸದಸ್ಯರನ್ನು ಪೋಲಿಸರು ಬಂಧಿಸಿದ್ದಾರೆ ಮತ್ತು ಅವರ ಮೂವರು ಸಹಚರರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡ ನಗದನ್ನು ಎಣಿಸುವಲ್ಲಿ ಪೊಲೀಸರು ಬೆವರು ಸುರಿಸಿದ್ದಾರೆ.

ನೋಟು ಎಣಿಕೆಗೆ ಯಂತ್ರಗಳನ್ನು ತಂದು ನಗದು ಎಣಿಕೆ ಮುಗಿಸಿ ಡಬ್ಬಿ ತುಂಬಿಕೊಂಡು ಪೊಲೀಸರು ಹೊರಬರುವಾಗ ನೋಟುಗಳ ತೂಕದ ಭಾರವನ್ನು ಹೊರಲು ಪೋಲಿಸರಿಗೆ ಸುಸ್ತು ಪಟ್ಟಿದ್ದು ಆರೋಪಿಗಳಿಂದ 10 ಕೋಟಿ ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಸಮೀರ್ ಸೌರಭ್ ಮಾತನಾಡಿ, ಜಿಲ್ಲೆಯ ಕಿರ್ನಾಪುರ-ಲಾಂಜಿ ಪ್ರದೇಶದಲ್ಲಿ ಕೆಲವೇ ದಿನಗಳು ಮತ್ತು ತಿಂಗಳಲ್ಲಿ ದುಪ್ಪಟ್ಟು ಹಣವನ್ನು ಹಿಂದಿರುಗಿಸುವ ವಿಷಯದಲ್ಲಿ ಪೊಲೀಸರು ದೊಡ್ಡ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ನಗದು, ದಾಖಲೆ, ಮೊಬೈಲ್, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಹಿತಿಯ ಆಧಾರದ ಮೇಲೆ ಪ್ರತ್ಯೇಕ ತಂಡಗಳನ್ನು ರಚಿಸಿ, ಮೊದಲು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಯಿತು ಎಂದು ಅವರು ಹೇಳಿದರು.

Madhya Pradesh: ‘Double- Your-Money’ Scam Busted in Balaghat, 11 Held With Rs 10 Crore Cash

ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿ ನಂತರ ಆರೋಪಿಗಳನ್ನು ಬಂಧಿಸಿದಾಗ ಅವರಿಂದ 10 ಕೋಟಿ ರೂ. ಹಣವನ್ನು ದ್ವಿಗುಣಗೊಳಿಸುವ ಪ್ರಕರಣಗಳು ಸಾಮಾನ್ಯವಾಗಿ ಹಲವು ಬಾರಿ ಮುಂಚೂಣಿಗೆ ಬಂದಿವೆ ಆದರೆ ಮಧ್ಯಪ್ರದೇಶದಲ್ಲಿ ಇದು ಅತಿದೊಡ್ಡ ಗ್ಯಾಂಗ್ ಎಂದು ಹೇಳಲಾಗುತ್ತಿದೆ. ಗ್ಯಾಂಗ್‌ಗಳು ಏಜೆಂಟರ ಮೂಲಕ ದುಪ್ಪಟ್ಟು ಹಣಕ್ಕೆ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದರು ಎಂದು ತಿಳಿಸಿದರು.

Madhya Pradesh: ‘Double- Your-Money’ Scam Busted in Balaghat, 11 Held With Rs 10 Crore Cash

100 ಕೋಟಿಗೂ ಅಧಿಕ ವಹಿವಾಟು
ಆರೋಪಿಗಳು ಬಿಟ್ ಕಾಯಿನ್ ವ್ಯವಹಾರವನ್ನೂ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ದಂಧೆ 100 ಕೋಟಿಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ಮಾಹಿತಿ ಪ್ರಕಾರ ಪ್ರಮುಖ ಆರೋಪಿ ಸೋಮೇಂದ್ರನ ಸ್ಥಳದಲ್ಲಿ 5 ಕೋಟಿ, ಆರೋಪಿ ಹೇಮರಾಜ್ ಮಾಹಿತಿಯಿಂದ 3 ಕೋಟಿ ಮತ್ತು ಆರೋಪಿ ಅಜಯ್ ತಿಡ್ಕೆಯಿಂದ 2 ಕೋಟಿ ರೂ. ಬೇರೆ ರಾಜ್ಯಗಳಿಗೂ ಈ ಗ್ಯಾಂಗ್ ನಂಟು ಇರುವ ಸಾಧ್ಯತೆ ಇದೆ. ಸೋಮೇಂದ್ರ ಕಂಕ್ರಯಾಣೆ, ರಮೇಶ ಮನ್ಸೂರೆ, ರಾಕೇಶ್ ಮನ್ಸೂರೆ, ಪ್ರದೀಪ್ ಕಂಕ್ರಯಾಣೆ, ಹೇಮರಾಜ್ ಅಮದೋರ್, ಲಲಿತ್ ವೈಷ್ಣವ್, ರಾಹುಲ್ ಬಾಪುರೆ, ರಾಮಚಂದ್ರ ಕಲ್ಬೆಲೆ, ಅಜಯ್ ತಿಡ್ಕೆ, ಶಿವಜಿತ್ ಚಿಲಿ ಮತ್ತು ಮನೋಜ್ ಸೋನೆ ಬಂಧಿತ ಆರೋಪಿಗಳು.

English summary
Cops Bust Gang of Money Swindlers in Balaghat; 10 Crore Cash, Mobiles Recovered
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X