ಕೊರೊನಾ ಸೋಂಕಿಗೆ ವೈದ್ಯ ಬಲಿ: ಶ್ವಾಸಕೋಶ ಕಸಿ ವಿಳಂಬವಾಗಿದ್ದೇಕೆ?
ಭೋಪಾಲ್, ನವೆಂಬರ್ 26:ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 30 ವರ್ಷದ ವೈದ್ಯರೊಬ್ಬರು ಕೊನೆಯುಸಿರೆಳೆದಿದ್ದಾರೆ.
ಮಧ್ಯಪ್ರದೇಶದ ವೈದ್ಯ ಕಳೆದ ಒಂದು ತಿಂಗಳಿನಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು, ವೈರಸ್ ಡಾ. ಶುಭಂ ಅವರ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು.
ದಾಖಲೆ: ಜೈಪುರದಲ್ಲಿ 1 ವಾರದಲ್ಲಿ ಬರೋಬ್ಬರಿ 4 ಸಾವಿರ ಮದುವೆ
ಅವರನ್ನು ಉಳಿಸಿಕೊಳ್ಳಬೇಕಿದ್ದರೆ, ಶ್ವಾಸಕೋಶ ಕಸಿ ಮಾಡಲೇಬೇಕಿತ್ತು, ಅದಕ್ಕಾಗಿ ಚೆನ್ನೈಗೆ ತೆರಳಬೇಕಿತ್ತು, ಅಲ್ಲಿ ನಿವಾರ್ ಚಂಡಮಾರುತದ ಪರಿಣಾಮ ವೈದ್ಯರನ್ನು ಏರ್ಲಿಫ್ಟ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಶುಭಂ ಅವರು ಬುಂದೇಲ್ಖಂಡ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿದ್ದರು. ಅಕ್ಟೋಬರ್ 28ರಂದು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರು ಹಲವು ಕೊವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು.
ಅವರು ತಕ್ಷಣವೇ ಭೋಪಾಲ್ನಲ್ಲಿರುವ ಚಿರಾಯು ಮೆಡಿಕಲ್ ಕಾಲೇಜಿಗೆ ತೆರಳಿದ್ದರು. ಅವರ ಶ್ವಾಸಕೋಶದ ಶೇ.90ರಷ್ಟು ಭಾಗಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಶ್ವಾಸಕೋಶ ಕಸಿಮಾಡದೆ ಬೇರೇನೂ ದಾರಿಯೇ ಇಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ ಚಿಕಿತ್ಸೆಗಾಗಿ ಚೆನ್ನೈಗೆ ತೆರಳುವವರಿದ್ದರು. ಆದರೆ ವಿಮಾನದ ವ್ಯತ್ಯಯದಿಂದಾಗಿ ಬರಲು ಸಾಧ್ಯವಾಗದೆ ಅಸುನೀಗಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಭಂ ಅವರಿಗೆ ಬೇಕಾಗಿರುವ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ನೀಡುವುದಾಗಿ ಹೇಳಿದ್ದರು.
ಮಧ್ಯಪ್ರದೇಶದಲ್ಲಿ ಮಂಗಳವಾರ 1766 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಒಟ್ಟು 1,96,511 ಕೊರೊನಾ ಸೋಂಕಿತರಿದ್ದಾರೆ. ಒಂದು ದಿನದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 3183 ಮಂದಿ ಮೃತಪಟ್ಟಿದ್ದಾರೆ