ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಕಚೇರಿಗೆ ಭದ್ರತೆ ವಾಪಸ್; ಕಾಂಗ್ರೆಸ್ ದಿಗ್ವಿಜಯ್ ಸಿಂಗ್ ಫುಲ್ ರೈಸ್

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ಏಪ್ರಿಲ್ 2: ರಾಷ್ಟ್ರೀಯ ಸ್ವಯಂಸೇವಕ್ ಸಂಘ್ (ಆರೆಸ್ಸೆಸ್) ಕಚೇರಿಗೆ ನೀಡಿದ ಭದ್ರತೆ ಹಿಂಪಡೆಯುವ ಮಧ್ಯಪ್ರದೇಶ ಸರಕಾರದ ನಿರ್ಧಾರ ಉಲ್ಟಾ ಹೊಡೆದಿದೆ. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭೋಪಾಲ್ ನಲ್ಲಿನ ಆರೆಸ್ಸೆಸ್ ಕಚೇರಿಗಳಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ವರದಿ ಆದ ಮೇಲೆ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದು, ಈ ನಿರ್ಧಾರ 'ನ್ಯಾಯಸಮ್ಮತವಲ್ಲ' ಎಂದಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರು ದಿಗ್ವಿಜಯ್ ಸಿಂಗ್ ರನ್ನು ಆರೆಸ್ಸೆಸ್ ವಿರೋಧಿ, ಹಿಂದೂ ವಿರೋಧಿ ಅಂತಲೇ ಗುರುತಿಸುತ್ತಾರೆ.

ನ್ಯೂಜಿಲೆಂಡ್ ನರಮೇಧಕ್ಕೂ ಮೋದಿ ಹೆಸರು ಎಳೆದು ತಂದ ದಿಗ್ವಿಜಯ್ ಸಿಂಗ್ ನ್ಯೂಜಿಲೆಂಡ್ ನರಮೇಧಕ್ಕೂ ಮೋದಿ ಹೆಸರು ಎಳೆದು ತಂದ ದಿಗ್ವಿಜಯ್ ಸಿಂಗ್

ತಕ್ಷಣದಿಂದಲೇ ಅಗತ್ಯವಾದ ಭದ್ರತೆಯನ್ನು ಆರೆಸ್ಸೆಸ್ ಕಚೇರಿಗಳಿಗೆ ಒದಗಿಸಬೇಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ- ಕಾಂಗ್ರೆಸ್ ನ ಹಿರಿಯ ನಾಯಕ ಕಮಲ್ ನಾಥ್ ಅವರಿಗೆ ದಿಗ್ವಿಜಯ್ ಸಿಂಗ್ ಮನವಿ ಮಾಡಿದ್ದಾರೆ. ನಮಗೆ ಆರೆಸ್ಸೆಸ್ ಜತೆಗೆ ಸೈದ್ಧಾಂತಿಕ ವ್ಯತ್ಯಾಸಗಳು ಇರಬಹುದು. ಆದರೆ ಭೋಪಾಲ್ ನಲ್ಲಿನ ಆರೆಸ್ಸೆಸ್ ಕಚೇರಿ ಹೊರಗಿಂದ ಭದ್ರತೆ ತೆಗೆಯುವುದನ್ನು ನಾನು ಬೆಂಬಲಿಸುವುದಿಲ್ಲ ದಿಗ್ವಿಜಯ್ ಹೇಳಿದ್ದಾರೆ.

Digvijaya Singh urged to re deploy security personnel to Bhopal RSS office

ಆರೆಸ್ಸೆಸ್ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವುದನ್ನು ಮುಂದುವರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಅವರ ಮಾತಿನಿಂದ ಸಿಟ್ಟಾಗಿರುವ ಪೊಲೀಸ್ ಇಲಾಖೆ, ವಿಶೇಷ ಸಶಸ್ತ್ರ ಪಡೆಯ ಸಿಬ್ಬಂದಿಯನ್ನು ಮಾತ್ರ ತೆಗೆಯಲಾಗಿದೆ. ಚುನಾವಣೆ ಕರ್ತವ್ಯಕ್ಕೆ ಅವರನ್ನು ಬಳಸಲಾಗುತ್ತಿದೆ. ಭದ್ರತೆ ತೆಗೆದಿಲ್ಲ ಎಂದು ತಿಳಿಸಿದೆ.

ಅಜರ್ ಬಿಡುಗಡೆ ಮಾಡಿದ್ದರಿಂದಲೇ ದಾಳಿ: ಬಿಜೆಪಿ ವಿರುದ್ಧ ದಿಗ್ವಿಜಯ್ ಆರೋಪ ಅಜರ್ ಬಿಡುಗಡೆ ಮಾಡಿದ್ದರಿಂದಲೇ ದಾಳಿ: ಬಿಜೆಪಿ ವಿರುದ್ಧ ದಿಗ್ವಿಜಯ್ ಆರೋಪ

ಈ ಬಾರಿ ಮಧ್ಯಪ್ರದೇಶದಲ್ಲಿ ಅತ್ಯಂತ ಕಷ್ಟದ ಕ್ಷೇತ್ರವಾದ ಭೋಪಾಲ್ ನಿಂದ ದಿಗ್ವಿಜಯ್ ಸಿಂಗ್ ಲೋಕಸಭಾ ಕಣದಲ್ಲಿದ್ದಾರೆ. ಕಳೆದ ವಾರ ಮಾತನಾಡುತ್ತಾ ಅವರು, ನನಗೆ ಆರೆಸ್ಸೆಸ್ ಜತೆ ಯಾವುದೇ ಸಮಸ್ಯೆ ಇಲ್ಲ. ಆರೆಸ್ಸೆಸ್ ಎಂಬುದು ಹಿಂದೂಗಳ ಸಂಸ್ಥೆಯಾದರೆ ದಿಗ್ವಿಜಯ್ ಸಿಂಗ್ ಕೂಡ ಹಿಂದೂ. ಹಾಗಿದ್ದ ಮೇಲೆ ಏಕೆ ಹಗೆತನ ಎಂದು ಹೇಳಿದ್ದರು.

English summary
The Madhya Pradesh government's move to withdraw security from the offices of the RSS (Rashtriya Swayamsevak Sangh) backfired when senior Congress leader Digvijaya Singh called it out today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X