ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15ಲಕ್ಷ ಬಂತಾ ಎಂದ ದಿಗ್ವಿಜಯ್: ಯುವಕ ಕೊಟ್ಟ ಉತ್ತರಕ್ಕೆ ಸುಸ್ತೋಸುಸ್ತು

|
Google Oneindia Kannada News

Recommended Video

Lok Sabha Elections 2019: ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದ ದಿಗ್ವಿಜಯ್ ಸಿಂಗ್ ಗೆ ಮುಖಭಂಗ

ಭೋಪಾಲ್, ಏಪ್ರಿಲ್ 22: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ಪ್ರಧಾನಿ ಮೋದಿಯವರನ್ನು ಕೆಣಕಲು ಹೋಗಿ, ಅವಮಾನ ಎದುರಿಸಬೇಕಾದ ಘಟನೆ ವರದಿಯಾಗಿದೆ.

ಇಲ್ಲಿ ಸೇರಿರುವ ಮತದಾರರಲ್ಲಿ ಯಾರ ಅಕೌಂಟಿಗೆ ಹದಿನೈದು ಲಕ್ಷ ಬಂದಿದೆ ಹೇಳಿ, ಹಣ ಜಮಾ ಆಗಿದ್ದಕ್ಕೆ ಸಾಕ್ಷಿಯಾಗಿ, ನಿಮ್ಮ ಬ್ಯಾಂಕ್ ಪಾಸ್ ಬುಕ್ ತೋರಿಸಿದರೆ ನಿಮಗೆ ನಾಗರೀಕ ಸನ್ಮಾನ ಮಾಡಲಾಗುವುದು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

Digvijay Singh self goal, 15 lakh stunt back fires at Bhopal

ಆಗ ಅಲ್ಲಿ ಸೇರಿದ್ದ ಯುವಕರು, ಹೌದು ನನ್ನ ಅಕೌಂಟಿಗೆ ದುಡ್ಡು ಬಂದಿದೆ ಎಂದು ಹೇಳಿದ್ದಾರೆ. ಅವರಲ್ಲಿ ಒಬ್ಬರನ್ನು ದಿಗ್ವಿಜಯ್ ಸಿಂಗ್, ಏ ಗುಲಾಬ್ ಶರ್ಟ್ ವಾಲಾ.. ಆವೋ ಇದರ್ ಎಂದು ವೇದಿಕೆಗೆ ಕರೆದಿದ್ದಾರೆ. ಸತ್ಯ ಹೇಳು, ನಿನ್ನ ಅಕೌಂಟಿಗೆ ದುಡ್ಡು ಬಂದಿದೆಯಾ ಹೇಳು ಎಂದು ಕೇಳಿದ್ದಾರೆ.

ಕುಮಾರಸ್ವಾಮಿ, ಡಿಕೆ ಶಿವಕುಮಾರ್ 'ಶಿವಮೊಗ್ಗ' ರಾಜಕೀಯದ ಹಿಂದಿದೆ ಭಾರೀ ಲೆಕ್ಕಾಚಾರ ಕುಮಾರಸ್ವಾಮಿ, ಡಿಕೆ ಶಿವಕುಮಾರ್ 'ಶಿವಮೊಗ್ಗ' ರಾಜಕೀಯದ ಹಿಂದಿದೆ ಭಾರೀ ಲೆಕ್ಕಾಚಾರ

ಅದಕ್ಕೆ ದಿಗ್ವಿಜಯ್ ಸಿಂಗ್ ಅವರಿಂದ ಮೈಕ್ ತೆಗೆದುಕೊಂಡ ಯುವಕ, ಮೋದಿ ಉಗ್ರರ ವಿರುದ್ದ ಸಮರ ಸಾರಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮಾಡಿ, ಭಯೋತ್ಪಾದಕರನ್ನು ಸದೆಬಡಿದಿದ್ದಾರೆ ಎಂದು ಮಾತು ಮುಂದುವರಿಸಲು ಹೋದಾಗ, ಯುವಕನಿಂದ ಮೈಕ್ ಕಿತ್ತುಕೊಂಡು ವೇದಿಕೆಯಿಂದ ಕೆಳಗೆ ತಳ್ಳಲಾಯಿತು.

ಸ್ಮಾರ್ಟ್ ಸಿಟಿ ಅಂದರೆ ಏನು ಎನ್ನುವುದರ ಅರ್ಥ ಪ್ರಧಾನಿ ಮೋದಿಗೂ ಗೊತ್ತಿಲ್ಲ ಎಂದು ಟೀಕಿಸಿದ್ದ ದಿಗ್ವಿಜಯ್ ಸಿಂಗ್, ಹದಿನೈದು ಲಕ್ಷನೂ ಬಂದಿಲ್ಲ. ನಿರುದ್ಯೋಗ ಸಮಸ್ಯೆಗೂ ಪರಿಹಾರ ಸಿಗಲಿಲ್ಲ ಎಂದು ಮೋದಿಯವರನ್ನು ಕೆಣಕಿದ್ದಾರೆ.

ದಿಗ್ವಿಜಯ್ ಸಿಂಗ್ ವಿರುದ್ದ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಸ್ವಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಸ್ವಾಧ್ವಿ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು.

English summary
Bhopal INC candidate Digvijaya Singh's massive self goal, '15 lakh in account' stunt backfires. When he asked about 15 lakh, people responded we received 15 lakh through Surgical strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X