ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಜಿನ ಚೂರುಗಳನ್ನು ಕೋಡುಬಳೆ, ಚಕ್ಕುಲಿಯಂತೆ ತಿನ್ನುವ ದಯಾರಾಮ್ ಸಾಹು

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ಸೆಪ್ಟೆಂಬರ್ 15: ಮಧ್ಯಪ್ರದೇಶದ ದಿಂದೋರಿಯಲ್ಲಿ ಇರುವ ದಯಾರಾಮ್ ಗೆ ವಿಚಿತ್ರ-ವಿಲಕ್ಷಣ ಅಭ್ಯಾಸ ಇದೆ. ವೃತ್ತಿಯಲ್ಲಿ ವಕೀಲರಾಗಿರುವ ಇವರು ಕಳೆದ ನಲವತ್ತು ವರ್ಷಗಳಿಂದ ಬಲ್ಬ್, ಮದ್ಯದ ಬಾಟಲಿ ಮತ್ತು ಇತರೆ ಯಾವುದೇ ಗಾಜನ್ನು ಕೋಡುಬಳೆ- ಚಕ್ಕುಲಿ ತಿಂದಹಾಗೆ ತಿನ್ನುತ್ತಾ ಬಂದಿದ್ದಾರೆ.

ಏನಾದರೂ ವಿಶೇಷವಾದದ್ದನ್ನು ಮಾಡಬೇಕು ಅಂದುಕೊಂಡು ಇದನ್ನು ಆರಂಭಿಸಿದೆ. ಮೊದಲ ಸಲ ತಿಂದಾಗ ಒಳ್ಳೆ ರುಚಿ ಸಿಕ್ಕಿತು. ನಾನು ಹೀಗೆ ಗಾಜಿನ ತುಂಡು ತಿನ್ನುತ್ತೀನಿ ಅಂತ ಗೊತ್ತಾದಾಗ ಅದನ್ನು ನೋಡುವುದಕ್ಕೆ ಬರಲು ಆರಂಭಿಸಿದರು. ಅವರಿಗೆ ತೋರಿಸಲು ಗಾಜಿನ ಚೂರುಗಳನ್ನು ತಿನ್ನುವುದನ್ನು ಹಾಗೇ ಮುಂದುವರಿಸಿದೆ ಕ್ರಮೇಣ ಅದೇ ಹವ್ಯಾಸ ಆಗಿಹೋಯಿತು ಎನ್ನುತ್ತಾರೆ ದಯಾರಾಮ್ ಸಾಹು.

ಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆ

ಇಂಥ ವಿಲಕ್ಷಣ, ಅಪಾಯಕಾರಿ ವ್ಯಸನ ಕಂಡಾಗ ಜನರು ಸಹ ಗಾಬರಿ ಆಗುತ್ತಾರೆ. ಸಾಹು ಅವರ ವಿಡಿಯೋ ಮಾಡಿ, ಅದನ್ನು ಪೋಸ್ಟ್ ಮಾಡುತ್ತಾ ತಮಗೆ ಅನಿಸಿದ್ದನ್ನು ತಿಳಿಸುತ್ತಾರೆ.

Dayananda Sahu Eats Glass Pieces From Past 40 Years

ಆದರೆ, ಈ ಹವ್ಯಾಸದಿಂದ ಸಾಹು ಅವರ ಹಲ್ಲಿಗೆ ಮಾತ್ರ ತೊಂದರೆ ಆಗಿದೆಯಂತೆ. ಇನ್ನು ವೈದ್ಯರು ಹೇಳಿದ ಪ್ರಕಾರ, ದೊಡ್ಡ ಗಾಜಿನ ಚೂರುಗಳು ಹೊಟ್ಟೆಗೆ ಹೋದರೆ ಕರುಳಿನ ಸಮಸ್ಯೆ ಆಗುತ್ತದಂತೆ. ಆದ್ದರಿಂದ ಈಚೆಗೆ ಗಾಜಿನ ಚೂರು ತಿನ್ನುವ ಹವ್ಯಾಸಕ್ಕೆ ಒಂದಿಷ್ಠು ನಿಯಮ ಅಳವಡಿಸಿಕೊಂಡಿದ್ದಾರಂತೆ.

ಸಹಾಪುರದದಲ್ಲಿ ಸರಕಾರಿ ವೈದ್ಯರಾಗಿರುವ ಸತ್ಯೇಂದ್ರ ಪರಾಸ್ತೆ ಹೇಳುವ ಪ್ರಕಾರ, ಈ ಪ್ರಯತ್ನವನ್ನು ಬೇರೆ ಯಾರೂ ಮಾಡಬಾರದು. ಹಾಗೆ ಮಾಡಿದರೆ ದೇಹದ ಒಳಗಿನ ಅಂಗಗಳಿಗೆ ಹಾನಿಯಾಗುತ್ತದೆ. ಗಾಜು ಜೀರ್ಣವಾಗುವ ವಸ್ತುವಲ್ಲ. ಜನರು ಇದನ್ನು ತಿನ್ನಬಾರದು. ಇದರಿಂದ ಅಲ್ಸರ್, ಸೋಂಕು ತಗುಲಬಹುದು. ಇದರಿಂದ ಹೊಟ್ಟೆಯಲ್ಲಿ ಹಲವು ಸಮಸ್ಯೆಯಾಗುತ್ತದೆ.

English summary
Dayananda Sahu, lawyer by profession from Madhya Pradesh eats glass pieces from past 40 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X