ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in: ಧರ್ಮ ತಿಳಿಯಲು ದಲಿತ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ

|
Google Oneindia Kannada News

ಭೋಪಾಲ್, ಆಗಸ್ಟ್ 08: ಕಳ್ಳತನದ ಶಂಕೆಯ ಮೇಲೆ ದಲಿತ ವ್ಯಕ್ತಿಯೊಬ್ಬನ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸುತ್ತಿರುವ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯ ಧರ್ಮ ತಿಳಿಯಲು ದಲಿತ ಯುವಕನ ಬಟ್ಟೆಯನ್ನು ಕಿತ್ತೆಸೆದು ಅವಮಾನ ಮಾಡಿದ್ದಾರೆ.

ಗುಂಪಿನಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಆದಿತ್ಯ ರೋಕ್ಡೆ ಎಂದು ಗುರುತಿಸಲಾಗಿದ್ದು, ಆಗಸ್ಟ್ 3 ರಂದು ಖಾರ್ಗೋನ್ ಜಿಲ್ಲೆಯಿಂದ 70 ಕಿಮೀ ದೂರದಲ್ಲಿರುವ ಕೈಗಾರಿಕಾ ಪ್ರದೇಶವಾದ ನಿಮ್ರಾಣಿ ಬಳಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Breaking: ತಮಿಳುನಾಡಲ್ಲಿ ದಲಿತರ ಹತ್ಯೆ; 27 ಮಂದಿಗೆ ಜೀವಾವಧಿ ಶಿಕ್ಷೆBreaking: ತಮಿಳುನಾಡಲ್ಲಿ ದಲಿತರ ಹತ್ಯೆ; 27 ಮಂದಿಗೆ ಜೀವಾವಧಿ ಶಿಕ್ಷೆ

ಘಟನೆ ಬೆಳಕಿಗೆ ಬಂದ ನಂತರ ಕ್ರಿಮಿನಲ್ ಬೆದರಿಕೆ, ಅಕ್ರಮ ಬಂಧನ, ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಸೆಕ್ಷನ್‌ಗಳ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Dalit man assaulted, stripped off clothes to check religious identity in Madhya Pradesh

ಘಟನೆಯ ಬಗ್ಗೆ ಪೊಲೀಸರಿಗೆ ಆಗಸ್ಟ್ 6 ರಂದು ಮಾಹಿತಿ ಸಿಕ್ಕಿತು. ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಖಾರ್ಗೋನ್ ಜಿಲ್ಲೆಯ ಪೊಲೀಸ್ ಅಧೀಕ್ಷಕ (ಎಸ್‌ಪಿ) ಧರ್ಮವೀರ್ ಸಿಂಗ್ ಯಾದವ್ ಹೇಳಿದ್ದಾರೆ.

ಘಟನೆಯಲ್ಲಿ ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಬದಲು ದಲಿತ ವ್ಯಕ್ತಿಯನ್ನು ಖಾಲ್ತಂಕ ಪೊಲೀಸರು ಜೈಲಿಗೆ ಹಾಕಿದ್ದರು. ಇದರಿಂದ ಖಾಲ್ತಂಕಾ ಪೊಲೀಸ್ ಹೊರಠಾಣೆ ಪ್ರಭಾರಿ ರಾಜೇಂದ್ರ ಸಿಂಗ್ ಬಘೇಲ್ ವಿರುದ್ಧ ತನಖೆಗೆ ಆದೇಶಿಸಲಾಗಿದೆ.

ಕೆಲಸದ ಮೇಲೆ ಖಾಲ್‌ಘಾಟ್‌ಗೆ ಹೋಗಿ ಮನೆಗೆ ಹಿಂತಿರುಗುತ್ತಿದ್ದ ನನ್ನ ಮಗನ ಮೇಲೆ ಹಲ್ಲೆ ಮಾಡಲಾಗಿದೆ. ಆತ ಹಿಂದೂವೋ, ಮುಸಲ್ಮಾನನೋ ಎಂದು ಪರೀಕ್ಷಿಸಲು ಆತನನ್ನು ಬೆತ್ತಲು ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸರಿದ್ದರೂ ಕೂಡ ಮಗನ ಸಹಾಯಕ್ಕೆ ಬರಲಿಲ್ಲ ಎಂದು ಸಂತ್ರಸ್ತನ ತಾಯಿ ಭಗವತಿ ರೊಕ್ಡೆ ಆರೋಪಿಸಿದ್ದಾರೆ.

ಆದರೆ, ಹಲ್ಲಗೊಳಗಾದ ಆದಿತ್ಯ ರೊಕ್ಡೆಯನ್ನು ಕಳ್ಳತನ ಮಾಡಿರುವ ಶಂಕೆಯ ಮೇಲೆ ಥಳಿಸಲಾಗಿದೆಯೇ ಹೊರತು ಆತನ ಧರ್ಮದ ಹಿನ್ನೆಲೆಯಲ್ಲಿ ಅಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

Recommended Video

ಮನೆ ನಾಯಿ ಜೊತೆ ಟೈಮ್ ಪಾಸ್ ಮಾಡಿದ ಜಗ್ಗೇಶ್ | OneIndia Kannada

English summary
Dalit man assaulted over suspicion of theft, stripped off clothes to check religious identity in Khargone district of Madhya Pradesh. case registered. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X