• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೂಗಳೂ ಹಿಂಸಾಚಾರಿಗಳು: ಸೀತಾರಾಂ ಯೆಚೂರಿ ವಿವಾದ

|

ಭೋಪಾಲ್, ಮೇ 3: 'ಹಿಂದೂಗಳು ಕೂಡ ಹಿಂಸಾಚಾರಿಗಳಾಗಬಲ್ಲರು. ಇದಕ್ಕೆ ರಾಮಾಯಣ ಮತ್ತು ಮಹಾಭಾರತದಂತಹ ಹಿಂದೂ ಪುರಾಣಗಳೇ ಸಾಕ್ಷಿ' ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ಒಂದು ಧರ್ಮ ಹಿಂಸೆಯಲ್ಲಿ ತೊಡಗಿಕೊಂಡಿರುತ್ತದೆ ಮತ್ತು ನಾವು ಹಿಂದೂಗಳು ಹಿಂಸೆ ಮಾಡುವುದಿಲ್ಲ ಎನ್ನುವುದರ ಹಿಂದಿನ ತರ್ಕವೇನು?' ಎಂದು ಯೆಚೂರಿ ಪ್ರಶ್ನಿಸಿದ್ದಾರೆ.

ರಾಮ ಮರ್ಯಾದಾ ಪುರುಷೋತ್ತಮನೇ ಅಲ್ಲ ಎಂದ ಭಗವಾನ್ ಸಂದರ್ಶನ

ಚುನಾವಣೆಯ ಆರಂಭಿಕ ಹಂತಗಳು ಮುಕ್ತಾಯಗೊಂಡ ಬಳಿಕ ಅವರು ಕಟು ಹಿಂದುತ್ವ ಅಜೆಂಡಾಕ್ಕೆ ಮರಳಿದ್ದಾರೆ. 35 ಎ ಮತ್ತು 370ನೇ ವಿಧಿಗಳ ರದ್ದತಿ ಬಗ್ಗೆ ಮಾತನಾಡುತ್ತಿದ್ದಾರೆ. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ, ಏಕಪ್ರಕಾರದ ನಾಗರಿಕ ನೀತಿ ಸಂಹಿತೆ ಮತ್ತು ಎನ್‌ಆರ್‌ಸಿ ಕುರಿತು ಹೇಳುತ್ತಿದ್ದಾರೆ. ಇಂತಹ ವಿಚಾರಗಳ ಹಿನ್ನೆಲೆಯಲ್ಲಿಯೇ ಜನರ ಭಾವನೆಗಳನ್ನು ಉದ್ರೇಕಿಸುವ ಸಲುವಾಗಿ ಮೂರನೇ ಹಂತದ ಚುನಾವಣೆ ಮುಗಿದ ಬಳಿಕ ಭೋಪಾಲ್‌ನಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಸ್ಪರ್ಧೆಗೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಯೆಚೂರಿ ಹೇಳಿದ್ದಾರೆ.

ಗೋ ಹತ್ಯೆ ಮಾಡುವವರಿಂದ ರಕ್ಷಣೆ ನೀಡಲು ಖಾಸಗಿ ಸೇನೆ ಸ್ಥಾಪಿಸಿರುವುದಕ್ಕೆ ಆರೆಸ್ಸೆಸ್ ವಿರುದ್ಧ ಅವರು ಹರಿಹಾಯ್ದಿದ್ದಾರೆ. ಮೈತ್ರಿಕೂಟ ಜತೆಯಾಗಿ ಸೇರಿ ಮೋದಿ ಅವರನ್ನು ಅಧಿಕಾರದಿಂದ ಇಳಿಸುತ್ತವೆ. ಮೈತ್ರಿಕೂಟ ಅವರಿಗೆ ಪರ್ಯಾಯವನ್ನು ಹೊಂದಿದೆ ಎಂದಿದ್ದಾರೆ.

ಪುರಾಣಗಳಲ್ಲಿ ಹಿಂಸೆಯ ದೃಷ್ಟಾಂತಗಳಿವೆ

ಪುರಾಣಗಳಲ್ಲಿ ಹಿಂಸೆಯ ದೃಷ್ಟಾಂತಗಳಿವೆ

'ಹಿಂದೂಗಳು ಹಿಂಸೆಯಲ್ಲಿ ನಂಬಿಕೆ ಹೊಂದಿಲ್ಲ ಎಂದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ. ದೇಶದಲ್ಲಿ ಅನೇಕ ರಾಜರು ಮತ್ತು ಸಂಸ್ಥಾನಗಳು ಯುದ್ಧಗಳಲ್ಲಿ ಹೋರಾಟ ನಡೆಸಿವೆ. ಹಿಂಸೆ ಮತ್ತು ಯುದ್ಧಕ್ಕೆ ರಾಮಾಯಣ ಮತ್ತು ಮಹಾಭಾರತಗಳೂ ನಿದರ್ಶನಗಳನ್ನು ಹೊಂದಿವೆ. ಪ್ರಚಾರಕರಾಗಿ ನೀವು ಪುರಾಣಗಳನ್ನು ವ್ಯಾಖ್ಯಾನಿಸುತ್ತೀರಿ ಆದರೆ, ಹಿಂದೂಗಳು ಹಿಂಸಾಪ್ರವೃತ್ತರಾಗಲು ಸಾಧ್ಯವಿಲ್ಲ ಎಂದೂ ಹೇಳುತ್ತೀರಿ' ಎಂಬುದಾಗಿ ಯೆಚೂರಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದಾರೆ.

ಮೋದಿ, ಹಿಟ್ಲರ್‌ನ ತಾತ, ಅತ್ಯಂತ ಅಯೋಗ್ಯ ಪ್ರಧಾನಿ: ಮಮತಾ ಬ್ಯಾನರ್ಜಿ ವಾಗ್ದಾಳಿ

ಹೆಸರು ಬದಲಿಸಿಕೊಳ್ಳಿ

ಹೆಸರು ಬದಲಿಸಿಕೊಳ್ಳಿ

ರಾಮಾಯಣ ಮತ್ತು ಮಹಾಭಾರತಗಳು ಹಿಂದೂಗಳ ಹಿಂಸಾಚಾರ ಎಂದು ಸೀತಾರಾಂ ಯೆಚೂರಿ ಕರೆಯುವುದಾದರೆ, ಅವರ ಹೆಸರಿನಿಂದ 'ಸೀತಾರಾಂ' ಪದವನ್ನು ತೆಗೆದುಹಾಕಬೇಕು. ಅವರು ತಮ್ಮ ಅಭ್ಯರ್ಥಿ ಕನ್ಹಯ್ಯ ಕುಮಾರ್‌ನ ಹೆಸರನ್ನೂ ಬದಲಿಸಬೇಕು. ಏಕೆಂದರೆ ಅದರಲ್ಲಿ 'ಕೃಷ್ಣ'ನ ಹೆಸರಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಸೈನ್ಯದ ಹೋರಾಟವನ್ನೂ ಹಿಂಸೆ ಎನ್ನುತ್ತಾರೆ

ಸೈನ್ಯದ ಹೋರಾಟವನ್ನೂ ಹಿಂಸೆ ಎನ್ನುತ್ತಾರೆ

'ಹಿಂದೂಗಳು ಹಿಂಸಾಚಾರಿಗಳು ಎಂಬುದರ ಅರ್ಥವೇನು? ಕೆಟ್ಟದರ ವಿರುದ್ಧ ಒಳ್ಳೆಯದಕ್ಕೆ ಗೆಲುವು, ಸುಳ್ಳಿನ ಮೇಲೆ ಸತ್ಯಕ್ಕೆ ಗೆಲುವು ಎಂಬ ಮುಖ್ಯವಾದ ಸಂದೇಶವನ್ನು ರಾಮಾಯಣ ಮತ್ತು ಮಹಾಭಾರತಗಳು ನೀಡುತ್ತವೆ. ರಾಮ, ಕೃಷ್ಣ, ಅರ್ಜುನ- ಇವರೆಲ್ಲರೂ ಸತ್ಯದ ಸಂಕೇತಗಳು. ಅವರು ವ್ಯಾಖ್ಯಾನಿಸಿರುವ ಅರ್ಥವನ್ನು ನೋಡಿದರೆ, ನಾಳೆ ಪಾಕಿಸ್ತಾನದ ವಿರುದ್ಧದ ನಮ್ಮ ಸೈನಿಕರ ಹೋರಾಟ ಹಿಂಸೆ ಎಂದು ಹೇಳುತ್ತಾರೆ. ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳನ್ನು ನಮ್ಮನ್ನು ರಕ್ಷಿಸಿಕೊಂಡರೆ ಅದು ಹಿಂಸೆ ಆಗುತ್ತದೆಯೇ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲೇ ಬಂಗಾಳದಲ್ಲಿ ಮೈತ್ರಿಯಲ್ಲಿ ಅಸಮಾಧಾನದ ಹೊಗೆ

ಜಾತ್ಯತೀತ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ

ಜಾತ್ಯತೀತ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ

ಸೀತಾರಾಂ ಅವರ ಸಿದ್ಧಾಂತಗಳು ಅವರದ್ದೇ ಸ್ವಂತ ಸಿದ್ಧಾಂತಗಳಾಗಿವೆ. ಅವರ ಸಿದ್ಧಾಂತಕ್ಕೆ ಒಂದೇ ಒಂದು ಉದ್ದೇಶ, ಅದು ಹಿಂದೂಗಳ ಮೇಲೆ ದಾಳಿ ಮಾಡುವುದು ಮತ್ತು ತಾವು ಮುಂಚೂಣಿಯ ಜಾತ್ಯತೀತ ವ್ಯಕ್ತಿ ಎಂದು ತೋರಿಸಿಕೊಳ್ಳುವುದು ಎಂದು ಕಿಡಿಕಾರಿದ್ದಾರೆ.

English summary
Lok Sabha elections 2019 CPM General secretary Sitaram Yechury said that Even Hindus can be violent, the Hindu mythologies like Ramayana and Mahabharata proved that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more