• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಕ್‌ ಧರಿಸದಿರುವುದು ಕೂಡ ಒಂದು ರೀತಿಯ ಅಪರಾಧ: ಶಿವರಾಜ್ ಸಿಂಗ್

|

ಭೋಪಾಲ್, ಏಪ್ರಿಲ್ 6: ಮಾಸ್ಕ್ ಧರಿಸದಿರುವುದು ಕೂಡ ಒಂದು ರೀತಿಯ ಅಪರಾಧ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಚೌಹಾಣ್ ಅವರು ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಂದು 24 ಗಂಟೆಗಳ 'ಧರಣಿ' ಆರಂಭಿಸಿದ್ದು, ಈ ವೇಳೆ ಮಾತನಾಡಿ ಸಿಎಂ ನಿರ್ಲಕ್ಷ್ಯದಿಂದ ಈಗ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ.

45ರ ವಯಸ್ಸು ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಇಲ್ಲಿದೆ ಮಹತ್ವದ ಸಂದೇಶ!

ಸಿಎಂ ಚೌಹಾಣ್ ಅವರು ಭೋಪಾಲ್‌ನ ಮಿಂಟೋ ಹಾಲ್‌ನಲ್ಲಿ ಮಂಗಳವಾರ ಮಧ್ಯಾಹ್ನ 12.30ರಿಂದ 'ಸ್ವಾಸ್ಥ್ಯ ಆಗ್ರಹ'ವನ್ನು ಆರಂಭಿಸಿದ್ದು, 24 ಗಂಟೆಗಳ ಈ 'ಧರಣಿ' ಸಮಯದಲ್ಲಿ ಅವರು ಆನ್‌ಲೈನ್‌ನಲ್ಲಿ ಜನರೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಧರಣಿ ಸ್ಥಳದಿಂದಲೇ ತಮ್ಮ ಅಧಿಕೃತ ಕಚೇರಿ ಕಾರ್ಯಗಳನ್ನು ಮಾಡಲಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 96,982 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಭಾನುವಾರ ಕೊರೊನಾ ಪ್ರಕರಣಗಳು ಲಕ್ಷ ಮೀರಿದ್ದು, ಸೋಮವಾರ ಈ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ.

ಏಪ್ರಿಲ್ 5ರಂದು ದೇಶದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 446 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ 50,143 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 1,17,32,279 ಆಗಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ರಾಜ್ಯದ ಜನರಿಗೆ ಸಿಎಂ ಮನವಿ ಮಾಡಿದ್ದಾರೆ.

English summary
Madhya Pradesh Chief Minister Shivraj Singh Chouhan on Tuesday said not wearing a face mask amounts to crime and appealed to people to follow appropriate "social behaviour" to check the spread of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X