ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ ಎದುರೇ ಕೊವಿಡ್ 19 ರೋಗಿಯ ಶವವನ್ನು ಎಸೆದ ಸಿಬ್ಬಂದಿ

|
Google Oneindia Kannada News

ಭೋಪಾಲ್, ಜುಲೈ 7: ಆಸ್ಪತ್ರೆಯ ಎದುರೇ ಕೊವಿಡ್ 19 ರೋಗಿಯ ಶವವನ್ನು ಎಸೆದ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಎರಡು ಅಂಬ್ಯುಲೆನ್ಸ್‌ನಲ್ಲಿ ಪಿಪಿಇ ಕಿಟ್ ಧರಿಸಿರುವ ಇಬ್ಬರು ಸಿಬ್ಬಂದಿ ಬಂದು ಸ್ಟ್ರೆಚರ್‌ನಲ್ಲಿ ಶವವನ್ನು ತಂದು ಆಸ್ಪತ್ರೆಯ ಎದುರು ಎಸೆದಿದ್ದರು.

ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಎರಡು ವಾರಗಳಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಎದುರಾಗಿತ್ತು. ಕೆಲವು ದಿನಗಳಿಂದ ಉಸಿರಾಟದ ತೊಂದರೆಯೂ ಇತ್ತು. ನ್ಯುಮೋನಿಯಾ ಎಂದು ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು.

ಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆ

ಭೋಪಾಲ್‌ನ ಪೀಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದರಿಂದ ಅವರನ್ನು ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಶನಿವಾರ ಸ್ಯಾಂಪಲ್‌ಗಳನ್ನು ತೆಗೆದುಕೊಳ್ಳಲಾಗಿತ್ತು, ಸೋಮವಾರ ವರದಿ ಬಂದಿತ್ತು. ಜನವರಿಯಿಂದ ಅವರಿಗೆ ಆರೋಗ್ಯ ಸಮಸ್ಯೆ ಇತ್ತು.

COVID-19 Affected Persons Physique Dumped Outdoors Bhopal Hospital

ಸೋಮವಾರ ಆತನನ್ನು ಕರೆದುಕೊಂಡು ಆಂಬ್ಯುಲೆನ್ಸ್‌ನಲ್ಲಿ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಂಬ್ಯುಲೆನ್ಸ್ ವಾಪಸ್ ಬಂದಿತ್ತು, ತಂದೆಯ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.

ರೋಗಿಗೆ ಕಿಡ್ನಿ ಸಮಸ್ಯೆ ಮಾತ್ರವಲ್ಲದೆ ಹೃದಯ ಸಂಬಂಧಿ ಕಾಯಿಲೆಯು ಕೂಡ ಇದೆ ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೀಪಲ್ಸ್ ಆಸ್ಪತ್ರೆ ತಿಳಿಸಿತ್ತು. ಹಾಗಾಗಿ ಆಕ್ಸಿಜನ್ ಸಪೋರ್ಟ್ ಇರುವ ಆಂಬ್ಯುಲೆನ್ಸ್ ಕಳುಹಿಸಿದ್ದೆವು ಎಂದು ಚಿರಾಯು ಆಸ್ಪತ್ರೆಯವರು ತಿಳಿಸಿದ್ದಾರೆ.

ವಿಐಪಿ ರಸ್ತೆಗೆ ಬರುವಷ್ಟೊತ್ತಿಗೆ ಅವರ ಕಂಡೀಷನ್ ಕ್ರಿಟಿಕಲ್ ಆಗಿತ್ತು. ಹೀಗಾಗಿ ಆಂಬ್ಯುಲೆನ್ಸ್ ವಾಪಸ್ ಬಂದಿತ್ತು ಅವರು ಮೃತಪಟ್ಟಿದ್ದರು. ಬಳಿಕ ಎರಡೂ ಆಸ್ಪತ್ರೆ ನಡುವೆ ಗಲಾಟೆ ನಡೆದು ಶವವನ್ನು ನಡು ರಸ್ತೆಯಲ್ಲೇ ಬಿಟ್ಟು ಹೋಗಿದ್ದರು ಎನ್ನುವ ಆರೋಪ ಕೇಳಿಬಂದಿದೆ.

English summary
A coronavirus affected person’s physique was left on the pavement exterior a hospital in Bhopal on Monday night time after a tragic to-and-fro between hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X