ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ಸಹೋದರಿಯರ 'ಸಹೋದರ' ಅತ್ಯಾಚಾರ ಮಾಡಿ ಸಿಕ್ಕಿಬಿದ್ದ!

|
Google Oneindia Kannada News

ಭೋಪಾಲ್, ಜುಲೈ2: ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅಂತಾರಲ್ಲ ಹಾಗೆಯೇ, ಸಾವಿರ ಹೆಣ್ಣುಮಕ್ಕಳ ಕೈಲಿ ರಾಖಿ ಕಟ್ಟಿಸಿಕೊಂಡಾಕ್ಷಣ ಯಾರೂ ಅಣ್ಣನಾಗುವುದಿಲ್ಲ ಮನಸ್ಸಲ್ಲಿ ತಾನು ಅಣ್ಣನೆಂಬ ಭಾವನೆಯೂ ಬೇಕು.

ತಾನು ಸಾವಿರ ತಂಗಿಯರಿಗೆ ಅಣ್ಣ ಎಂದು ಹೇಳಿಕೊಂಡು ತಿರುಗಾಡುವ ಕಾರ್ಪೊರೇಟರ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದಾನೆ.

ಬಿತುಲ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಪಕ್ಷೇತರ ಕಾರ್ಪೊರೇಟರ್ ರಾಜೇಂದ್ರ ಸಿಂಗ್‌ನನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ

ಈ ಕಾರ್ಪೊರೇಟರ್ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸುವ ಮೂಲಕವೇ ಪರಿಚಿತನಾಗಿದ್ದ. ಅನಾಮಧೇಯ ಪತ್ರವೊಂದು ಪೊಲೀಸ್ ಠಾಣೆಗೆ ಬಂದಾಗಲೇ ಈತನ ನಿಜವಾದ ಬಣ್ಣ ಏನೆಂಬುದು ಬಯಲಾಗಿದೆ. ಆ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಬೆತುಲ್‌ಗಂಜ್ ಸ್ಟೇಷನ್ ಹೌಸ್ ಆಫೀಸರ್ ಕುಷ್ವಾಹ ತನಿಖೆ ಆರಂಭಿಸಿದ್ದಾರೆ.

Corporator held for raping 11 year old girl

ಬಳಿಕ ಅತ್ಯಾಚಾರ ಸಂತ್ರಸ್ತೆ ಬಳಿ ನಡೆದಿರುವ ಘಟನೆ ವಿವರಿಸುವಂತೆ ಹೇಳಿದ್ದಾರೆ.ಹಾಗೆಯೇ ಆಕೆಯ ಕುಟುಂಬಕ್ಕೆ ಭದ್ರತೆ ಕಲ್ಪಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಆತನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.ಆತನ ಝಾಕಿರ್ ಹುಸೇನ್ ವಾರ್ಡ್‌ನ ಕಾರ್ಪೊರೇಟರ್ ಆಗಿದ್ದಾನೆ. ಅತ್ಯಾಚಾರ ನಡೆದ ವಿಷಯವನ್ನು ಯಾರ ಬಳಿಯಾದರೂ ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಗದರಿಸಿದ್ದ. ಒಂದು ವರ್ಷಗಳ ಕಾಲ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಸ್ವಲ್ಪ ದಿನಗಳ ಬಳಿಕ ಬಾಲಕಿ ತಾಯಿಗೆ ಈ ವಿಷಯ ಗೊತ್ತಾಗಿತ್ತು ಆಕೆಯನ್ನು ಕೂಡ ಗದರಿಸಿದ್ದ.

ಯುವತಿ ಮೇಲೆ 6 ವರ್ಷ ಅತ್ಯಾಚಾರವೆಸಗಿದ್ದ ಪಾಪಿ ಕೊನೆಗೂ ಅರೆಸ್ಟ್ ಯುವತಿ ಮೇಲೆ 6 ವರ್ಷ ಅತ್ಯಾಚಾರವೆಸಗಿದ್ದ ಪಾಪಿ ಕೊನೆಗೂ ಅರೆಸ್ಟ್

ಪ್ರತ್ಯೇಕ ಘಟನೆಯಲ್ಲಿ ಏಳು ವರ್ಷದ ಬಾಲಕಿ ಮೇಲೆ 57 ವರ್ಷದ ವ್ಯಕ್ತ ಅತ್ಯಾಚಾರನಡೆಸಿ ಕೊನೆಗೆ ಮಗುವನ್ನು ಕೊಲೆ ಮಾಡಿರುವ ಘಟನೆ ಸಂತ ಕಬೀರನಗರದಲ್ಲಿ ನಡೆದಿತ್ತು.

English summary
Corporator of Zakir Hussain ward in Betul in Bhopal, held for raping 11 year old girl. Corporator who calls himself 'Brother of Thousand sisters' .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X