ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ವಿಸರ್ಜಿಸಿ, ಗಾಂಧೀಜಿ ಬಯಕೆ ಈಡೇರಿಸಿ : ಯೋಗಿ ಆದಿತ್ಯನಾಥ್

|
Google Oneindia Kannada News

ಭೋಪಾಲ್, ನವೆಂಬರ್ 22: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಮಧ್ಯಪ್ರದೇಶದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಂಡರು.

ಮಧ್ಯಪ್ರದೇಶ ಕಾಂಗ್ರೆಸ್​ನ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಅವರಿಗೆ ನಗರ ನಕ್ಸಲ್​ಗಳ ಜತೆ ನಂಟಿದೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷ್ಯವನ್ನು ಇಂದು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಯೋಗಿ ಅವರು, "ಕಾಂಗ್ರೆಸ್​ನ ದೊಡ್ಡ ನಾಯಕನ ಹೆಸರು ನಕ್ಸಲರ ಜತೆಗೆ ತಳುಕು ಹಾಕಿಕೊಂಡಿದೆ.

ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್ ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್

ಭಯೋತ್ಪಾದನೆ ಮತ್ತು ನಕ್ಸಲ್​ ಚಟುವಟಿಕೆ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ, ಕಾಂಗ್ರೆಸ್ ಸಹಾನುಭೂತಿ ತೋರುತ್ತಿರುವುದು ಖಂಡನೀಯ. ಕಾಂಗ್ರೆಸ್​ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಹೀಗಾಗಿ, ಮಹಾತ್ಮ ಗಾಂಧೀಜಿಯವರ ಬಯಕೆಯಂತೆ ಅದನ್ನು ವಿಸರ್ಜಿಸಬೇಕು. ಅದು ನಿಮ್ಮ ಜವಾಬ್ದಾರಿ," ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

ಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥ ಹನುಮಂತ ಬಹುದೊಡ್ಡ ಬುಡಕಟ್ಟು ವ್ಯಕ್ತಿ: ಯೋಗಿ ಆದಿತ್ಯನಾಥ

Congress Should Be Disbanded As Wished By Gandhiji: Yogi Adityanath

ಭೀಮಾ ಕೋರೆಗಾಂವ್​ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಬಳಿ ದಿಗ್ವಿಜಯ್ ಸಿಂಗ್ ಅವರ ಫೋನ್ ನಂಬರ್ ಇರುವುದು ಪತ್ತೆಯಾಗಿದೆ ಈ ಕುರಿತು ತನಿಖೆ ನಡೆಸುತ್ತಿರುವ ಪುಣೆ ಪೊಲೀಸರಿಗೆ ಪತ್ರವೊಂದು ಲಭಿಸಿತ್ತು. ಅದರಲ್ಲಿ ದಿಗ್ವಿಜಯ್​ ಸಿಂಗ್​ ಅವರ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ್​ ಸಿಂಗ್​ ಅವರಿಗೆ ನಗರ ನಕ್ಸಲರ ನಂಟಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ದಿಗ್ವಿಜಯ್​ ಸಿಂಗ್​, ತಾಕತ್​ ಇದ್ದರೆ ನನ್ನನ್ನು ಬಂಧಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದರು.

100ಕ್ಕೂ ಅಧಿಕ ಚುನಾವಣಾ ಪ್ರಚಾರ ಸಭೆಗೆ ಯೋಗಿ ಸಜ್ಜು 100ಕ್ಕೂ ಅಧಿಕ ಚುನಾವಣಾ ಪ್ರಚಾರ ಸಭೆಗೆ ಯೋಗಿ ಸಜ್ಜು

ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲಿ ಯೋಗಿ ಆದಿತ್ಯನಾಥ್ ಅವರ ಭಾಷಣಕ್ಕೆ ಭಾರಿ ಬೇಡಿಕೆ ಹುಟ್ಟುಕೊಂಡಿದೆ. ವಿಶೇಷವಾಗಿ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಹೆಚ್ಚೆಚ್ಚು ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಯೋಗಿ ಅವರು ಪಾಲ್ಗೊಳ್ಳುತ್ತಿದ್ದಾರೆ.

English summary
Uttar Pradesh Chief Minister Yogi Adityanath Wednesday said since the Congress did not work in the interest of farmers, it should be disbanded as wished by Mahatma Gandhi. In a veiled reference to veteran Congressman Digvijay Singh, he said a Congress leader's name had cropped up in a Maoist-related case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X