ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಎದುರಿಸಲಾಗದೆ ತಾಯಿಯ ಹೆಸರನ್ನು ತೆಗೆದುಕೊಂಡಿದೆ ಕಾಂಗ್ರೆಸ್: ಮೋದಿ

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ನವೆಂಬರ್ 24: "ನನ್ನ ತಾಯಿಗೆ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಅವರನ್ನು ಎಳೆದು ತರುತ್ತಿದೆ. ನನ್ನನ್ನು ಎದುರಿಸಲು ಕಾಂಗ್ರೆಸ್ ಗೆ ಆಗಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಛತ್ತರ್ ಪುರ್ ನ ಚುನಾವಣೆ ಪ್ರಚಾರದ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ವಿಚಾರ ಇಲ್ಲದಿದ್ದಾಗ ಇಂಥ ತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತದೆ. ಯಾವಾಗ ಅಹಂಕಾರ ಇರುತ್ತದೋ ಆಗಷ್ಟೇ ಮತ್ತೊಬ್ಬರ ತಾಯಿಯ ಬಗ್ಗೆ ಈ ರೀತಿ ಅವಹೇಳನ ಮಾಡುವುದಕ್ಕೆ ಚಿಂತಿಸಲು ಸಾಧ್ಯ. ಸ್ವಾತಂತ್ರ್ಯ ಪಡೆದ ನಂತರ ಹಲವು ವರ್ಷಗಳ ಕಾಲ ಆಡಳಿತ ನಡೆಸಿದ ಪಕ್ಷದ ನಾಯಕರಿಗೆ ಮೋದಿಯನ್ನು ಎದುರಿಸಲು ಆಗುತ್ತಿಲ್ಲ. ಆದ್ದರಿಂದ ಮೋದಿ ತಾಯಿಯನ್ನು ಅವಮಾನ ಮಾಡುತ್ತಿದ್ದಾರೆ ಎಂದಿದ್ದಾರೆ.

ಮೋದಿ ತಾಯಿ ವಯಸ್ಸಿನ ಬಗ್ಗೆ ಅಣಕವಾಡಿ ವಿವಾದ ಸೃಷ್ಟಿಸಿದ ರಾಜ್ ಬಬ್ಬರ್ಮೋದಿ ತಾಯಿ ವಯಸ್ಸಿನ ಬಗ್ಗೆ ಅಣಕವಾಡಿ ವಿವಾದ ಸೃಷ್ಟಿಸಿದ ರಾಜ್ ಬಬ್ಬರ್

ಅಮೆರಿಕದ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯವು ಪ್ರಧಾನಮಂತ್ರಿ ಅವರ ತಾಯಿಯ ವಯಸ್ಸಿಗೆ ಸಮೀಪಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಗುರುವಾರ ಹೇಳಿಕೆ ನೀಡಿದ್ದರು. ಆ ನಂತರ ಬಿಜೆಪಿಯು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಶುಕ್ರವಾರ ಒತ್ತಾಯಿಸಿತ್ತು.

Congress cant take me on, so insulting my mother: PM Narendra Modi

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮೋದಿಯವರು ಹೋಲಿಕೆ ಮಾಡುತ್ತಿದ್ದರು. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಹೇಗಿದೆ ಅಂದರೆ ಪ್ರಧಾನಿ (ಮನ್ ಮೋಹನ್ ಸಿಂಗ್) ಅವರ ವಯಸ್ಸಿಗೆ ಸಮಾನವಾಗಿದೆ ಎಂದಿದ್ದರು ಎಂಬುದನ್ನು ರಾಜ್ ಬಬ್ಬರ್ ನೆನಪಿಸಿಕೊಂಡಿದ್ದರು.

ಪ್ರಧಾನಿಗಳೇ ಆಗ ನೀವು ಅವರ (ಮನ್ ಮೋಹನ್ ಸಿಂಗ್) ಹೆಸರನ್ನು ಗೌರವದ ಕಾರಣಕ್ಕೆ ಹೇಳಿರಲಿಲ್ಲ. ಜತೆಗೆ ನಮ್ಮ ಪರಂಪರೆ ಇದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ನಾವು ಈಗ ಹೇಳಲು ಬಯಸುತ್ತೇವೆ: ರುಪಾಯಿ ಮೌಲ್ಯವು ನಿಮ್ಮ ಪೂಜ್ಯನೀಯ ತಾಯಿ ಅವರ ವಯಸ್ಸಿಗೆ ಇಳಿದಿದೆ ಎಂದು ರಾಜ್ ಬಬ್ಬರ್ ವಾಗ್ದಾಳಿ ನಡೆಸಿದ್ದರು.

English summary
Narendra Modi on Saturday teared into the Congress over Raj Babbar's remark on the Prime Minister's mother. It was expected that with elections in crucial states round the corner, PM Modi would use irresponsible remarks by Congress leaders to turn the table.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X