ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಭಾರತದಲ್ಲಿ ಉದ್ಯಮಿಗಳಿಂದಲೇ ನಡೆಯುತ್ತಿರುವ ಕೇಂದ್ರ ಸರ್ಕಾರ"

|
Google Oneindia Kannada News

ಭೋಪಾಲ್, ಮಾರ್ಚ್ 14: ಹಸಿವಿನಿಂದ ಹಣ ಸಂಪಾದಿಸಲು ಹೊರಟಿರುವ ಉದ್ಯಮಿಗಳೇ ಕೇಂದ್ರ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ರೇವಾದ ಸಾರ್ವಜನಿಕ ಸಭೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಮಾರ್ಕೇಟಿಂಗ್ ವಲಯಕ್ಕಾಗಿ ರಚಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ ನೀಡದಂತೆ ರಾಕೇಶ್ ಟಿಕಾಯತ್ ಮನವಿ
ದೇಶದಲ್ಲಿ ಹಸಿವಿನ ವ್ಯವಹಾರ ಆರಂಭಿಸುವುದಕ್ಕೆ ಹೊರಟಿದ್ದಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ದಿನಕ್ಕೆ ಎರಡು ಬಾರಿ ಹಾಗೂ ಒಂದು ವರ್ಷದಲ್ಲಿ 700 ಬಾರಿ ಹಸಿವಾಗುತ್ತದೆ. ಈ ಹಸಿವು ನೀಗಿಸಿಕೊಳ್ಳುವ ಆಹಾರ ಧಾನ್ಯಗಳು ನಮ್ಮ ನಿಯಂತ್ರಣದಲ್ಲಿ ಇರುವಾಗ ಅವರು ಹಸಿವಿನ ಮೇಲೆಯೇ ವ್ಯಾಪಾರ ಆರಂಭಿಸುತ್ತಿದ್ದಾರೆ ಎಂದು ಟಿಕಾಯತ್ ದೂಷಿಸಿದ್ದಾರೆ.

Businessmen Are Running Central Govt, BKU Chief Rakesh Tikait Allegation

"ಉದ್ಯಮಿಗಳೇ ನಡೆಸುತ್ತಿರುವ ಕೇಂದ್ರ ಸರ್ಕಾರ":
ಕೇಂದ್ರ ಸರ್ಕಾರವನ್ನು ಯಾವುದೇ ಪಕ್ಷಗಳು ನಡೆಸುತ್ತಿಲ್ಲ, ಬದಲಿಗೆ ಉದ್ಯಮಿಗಳೇ ನಡೆಸುತ್ತಿದ್ದಾರೆ. ಇದರಿಂದ ಕೇವಲ ರೈತರಿಗಷ್ಟೇ ತೊಂದರೆ ಆಗುತ್ತಿಲ್ಲ. ದೇಶದಲ್ಲಿ ರೈಲ್ವೆಗಳು ಮಾರಾಟವಾಗುತ್ತಿವೆ. ಕೇಂದ್ರದಲ್ಲಿ ಇರುವ ವಿರೋಧ ಪಕ್ಷಗಳು ದುರ್ಬಲವಾಗಿವೆ. ಸರ್ಕಾರವನ್ನು ಪ್ರಶ್ನೆ ಮಾಡಬೇಕಿರುವ ಯುವ ಸಮುದಾಯವು ನಿದ್ರೆಗೆ ಜಾರಿಗೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಈ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.

English summary
Businessmen Are Running Central Govt, BKU Chief Rakesh Tikait Allegation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X